ಸ್ಯಾಂಡಲ್​ವುಡ್​ನಲ್ಲಿ ಹೊಸ ಇತಿಹಾಸ ಬರೆದ ಜೇಮ್ಸ್​: ಮೊದಲ ದಿನವೇ ದಾಖಲೆ ಗಳಿಕೆ, KGF​ ರೆಕಾರ್ಡ್​ ಬ್ರೇಕ್​

ಬೆಂಗಳೂರು: ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಅವರ ಕೊನೆಯ ಚಿತ್ರ ‘ಜೇಮ್ಸ್​’ ರಾಜ್ಯಾದ್ಯಂತ ಮಾರ್ಚ್​ 17ರಂದು ಅವರ ಹುಟ್ಟುಹಬ್ಬದಂದೇ ಬಿಡುಗಡೆಯಾಗಿ ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ. ಅಪ್ಪು ಅವರ ಕೊನೆಯ ಚಿತ್ರ ಆಗಿರುವುದರಿಂದ ಅಭಿಮಾನಿಗಳು ‘ಜೇಮ್ಸ್​ ಜಾತ್ರೆ’ ಮಾಡುತ್ತಿದ್ದು, ಚಿತ್ರಮಂದಿರಗಳ ಹೌಸ್​ಫುಲ್​ ಪ್ರದರ್ಶನ ಎರಡನೇ ದಿನಕ್ಕೂ ಮುಂದುವರಿದಿದೆ.ಜೇಮ್ಸ್ ಚಿತ್ರದ​ ಭರ್ಜರಿ ಪ್ರದರ್ಶನದ ನಡುವೆ ಅದರ ಮೊದಲ ದಿನದ ಬಾಕ್ಸ್​ ಆಫೀಸ್​ ಕಲೆಕ್ಷನ್ ಎಷ್ಟಿರಬಹುದು ಎಂಬ ಪ್ರಶ್ನೆಗಳು ಕೇಳಿಬರುತ್ತಿದೆ. ಸಿನಿಮಾ ತಂಡದ ಮೂಲಗಳ ಪ್ರಕಾರ ಜೇಮ್ಸ್​ ಸಿನಿಮಾ ಮೊದಲ ದಿನವೇ ಗಳಿಕೆಯಲ್ಲಿ ದಾಖಲೆ ಬರೆದಿದೆ. ಜೇಮ್ಸ್ ಅಬ್ಬರಕ್ಕೆ ದಾಖಲೆಗಳೆಲ್ಲಾ ಧೂಳೀಪಟವಾಗಿದೆ.

ಮೊದಲ ದಿನವೇ 35 ಕೋಟಿ ರೂಪಾಯಿ ಸಂಗ್ರಹ ಮಾಡುವ ಮೂಲಕ ಸ್ಯಾಂಡಲ್​ವುಡ್​ನಲ್ಲೇ ಜೇಮ್ಸ್​ ಸಿನಿಮಾ‌ ಹೊಸ ಇತಿಹಾಸ ಬರೆದಿದೆ. ಜೇಮ್ಸ್​ ಸಿನಿಮಾ ಕೆಜಿಎಫ್ ದಾಖಲೆಯನ್ನು ಹಿಂದಿಕ್ಕಿದೆ. ಕೆಜಿಎಫ್ ಮೊದಲ ದಿನ‌ 25 ಕೋಟಿ ರೂ. ಗಳಿಸಿತ್ತು. ಇದೀಗ ಆ ದಾಖಲೆಯನ್ನು ಜೇಮ್ಸ್​ ಮುರಿದಿದೆ. ಜೇಮ್ಸ್​ ಗಳಿಕೆ ನೋಡಿದರೆ, ಮೊದಲ ವಾರವೇ 100 ಕೋಟಿ ರೂ. ಕಲೆಕ್ಷನ್ ಮಾಡೋದು ಪಕ್ಕಾ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.

ಅತೀ‌ ಹೆಚ್ಚು‌ ಸ್ಕ್ರೀನ್​​ಗಳಲ್ಲಿ ಜೇಮ್ಸ್​ ಬಿಡುಗಡೆಯಾಗಿದ್ದು‌ ಒಂದು‌ ದಾಖಲೆಯಾದರೆ, ಹೆಚ್ಚು ಗಳಿಕೆ ಮಾಡಿರುವುದು ಮತ್ತೊಂದು ದಾಖಲೆಯಾಗಿದೆ. ಇನ್ನೊಂದೆಡೆ ಡಿಜಿಟಲ್ ರೈಟ್ಸ್​ನಲ್ಲೂ ಜೇಮ್ಸ್​‌ ಚರಿತ್ರೆ ಬರೆದಿದೆ.

ಚಿತ್ರವು ರಿಲೀಸ್ ಆದ ಮೊದಲ ದಿನ 25 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಇದು ಹೊಸ ದಾಖಲೆಯಾಗಿದೆ. ‘ಜೇಮ್ಸ್’ ಚಿತ್ರವು ಜಗತ್ತಿನಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ. ಈ ಪೈಕಿ ಕರ್ನಾಟಕದಲ್ಲೇ 500 ಪರದೆಗಳಲ್ಲಿ ಚಿತ್ರ ಬಿಡುಗಡೆಯಾಗಿದೆ.

ಕೆಲವು ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿಯಿಂದಲೇ ಚಿತ್ರಪ್ರದರ್ಶನ ಪ್ರಾರಂಭವಾಗಿದ್ದು, ಒಟ್ಟಾರೆ ಆರೇಳು ಪ್ರದರ್ಶನಗಳಾಗಿವೆ. ‘ಒಟ್ಟಾರೆ, ಚಿತ್ರದ ಕಲೆಕ್ಷನ್ 22ರಿಂದ 25 ಕೋಟಿ ರೂ.ಗಳವರೆಗೂ ಆಗುತ್ತದೆ’ ಎನ್ನುತ್ತಾರೆ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್. ಇದು ಬರೀ ಕರ್ನಾಟಕದ ಸುದ್ದಿ ಮಾತ್ರ. ಮಿಕ್ಕಂತೆ ಚಿತ್ರವು ಬೇರೆ ರಾಜ್ಯಗಳು ಮತ್ತು ಹೊರದೇಶಗಳಲ್ಲೂ ಬಿಡುಗಡೆಯಾಗಿದೆ. ಕನ್ನಡವಲ್ಲದೆ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್ ಆಗಿದೆ. ಮಿಕ್ಕೆಲ್ಲ ಭಾಷೆಗಳಿಂದ 10 ಕೋಟಿ ರೂ.ಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೂ, ಒಟ್ಟಾರೆ ಮೊದಲ ದಿನ 35 ಕೋಟಿ ರೂ. ಕಲೆಕ್ಷನ್ ಆಗುತ್ತದೆ. ಕನ್ನಡ ಚಿತ್ರವೊಂದು ಮೊದಲ ದಿನ ಇಂಥ ದೊಡ್ಡ ಮಟ್ಟದ ಕಲೆಕ್ಷನ್ ನೋಡುತ್ತಿರುವುದು ಇದೇ ಮೊದಲು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೇಸಿಗೆಯಲ್ಲಿ ಈ ʼಪಾನೀಯʼ ಸೇವಿಸುವುದು ಬೆಸ್ಟ್

Fri Mar 18 , 2022
ಬಿಸಿಲಿನ ಝಳ ಹೆಚ್ಚುತ್ತಿದೆ. ಎಷ್ಟು ನೀರು ಕುಡಿದರೂ ತೀರದ ದಾಹ ಎಲ್ಲರನ್ನೂ ಬಸವಳಿಸಿದೆ. ಬೆವರಿನ ಮೂಲಕ ದೇಹದ ನೀರಿನಂಶ ಕಡಿಮೆಯಾಗಿ ಡಿಹೈಡ್ರೇಷನ್ ಸಮಸ್ಯೆ ಹೆಚ್ಚುತ್ತಿದೆ. ಮನೆಯಲ್ಲೇ ಕುಳಿತು ಕೆಲವು ಕೂಲ್ ಕೂಲ್ ಜ್ಯೂಸ್ ಗಳನ್ನು ತಯಾರಿಸಿ ಕುಡಿದು ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು.ಈ ಬೇಸಿಗೆಗೆ ಬೆಸ್ಟ್ ಜ್ಯೂಸ್ ಎಂದರೆ ಲಿಂಬೆಹಣ್ಣಿನದು. ಅದಕ್ಕೆ ಬೆಲ್ಲ, ಚಿಟಿಕೆ ಏಲಕ್ಕಿ, ಕಾಳುಮೆಣಸಿನ ಪುಡಿ ಬೆರೆಸಿ ಕುಡಿದರೆ ಬಾಯಾರಿಕೆಯೂ ಕಡಿಮೆಯಾಗುತ್ತದೆ, ದೇಹಕ್ಕೂ ಒಳ್ಳೆಯದು.   ಕಾಮಕಸ್ತೂರಿ ಬೀಜವನ್ನು […]

Advertisement

Wordpress Social Share Plugin powered by Ultimatelysocial