ಪ್ರಧಾನಿಯನ್ನು ಭೇಟಿ ಮಾಡಲು ಹಲವು ಪ್ರೊಟೊಕಾಲ್ ಇರುತ್ತವೆ.

ಮೊನ್ನೆ ಮೊನ್ನೆ ತಾನೇ ಸ್ಯಾಂಡಲ್ ವುಡ್ ನ ಕೆಲವು ಸೆಲೆಬ್ರಿಟಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಔತಣಕೂಟದಲ್ಲಿ ಭಾಗಿಯಾಗಿದ್ದರು. ನಟರಾದ ಯಶ್, ರಿಷಬ್ ಶೆಟ್ಟಿ, ನಿರ್ಮಾಪಕರಾದ ವಿಜಯ್ ಕಿರಗಂದೂರು ಮತ್ತು ಅಶ್ವಿನಿ ಪುನೀತ್ ರಾಜ್ ಕುಮಾರ್, ಕಾಮಿಡಿಯನ್ ಶ್ರದ್ಧಾ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಅಧಿಕೃತ ಆಹ್ವಾನ ನೀಡಲಾಗಿತ್ತು.

ಇವರಷ್ಟೇ ಭಾಗಿಯಾಗಿದ್ದು ಚರ್ಚೆಗೂ ಕಾರಣವಾಗಿತ್ತು.

ಕನ್ನಡ ಸಿನಿಮಾ ರಂಗದಲ್ಲಿ ಇನ್ನೂ ಅನೇಕ ಸಾಧಕರು ಇರುವಾಗ ಅವರನ್ನು ಯಾಕೆ ಕಡೆಗಣಿಸಲಾಯಿತು ಎನ್ನುವ ಪ್ರಶ್ನೆ ಕೂಡ ಮೂಡಿತ್ತು. ಅದರಲ್ಲೂ ಶಿವರಾಜ್ ಕುಮಾರ್, ಸುದೀಪ್ ಸೇರಿದಂತೆ ಹಲವರನ್ನು ಮೋದಿ ಯಾಕೆ ಕರೆಯಲಿಲ್ಲ ಎನ್ನುವ ಚರ್ಚೆ ಹುಟ್ಟಿಕೊಂಡಿತ್ತು. ಇದೀಗ ಸುದೀಪ್ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಮೋದಿ ಜೊತೆಗಿನ ಔತಣ ಕೂಡದಲ್ಲಿ ಭಾಗಿಯಾಗಲು ತಮಗೂ ಆಹ್ವಾನವಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ನರೇಂದ್ರ ಮೋದಿ ಅವರು ತಮಗೂ ಆಹ್ವಾನ ನೀಡಿದ್ದರು. ಆದರೆ, ಜ್ವರದ ಕಾರಣದಿಂದಾಗಿ ನಾನು ಹೋಗಲಿಲ್ಲ. ಪ್ರಧಾನಿಯನ್ನು ಭೇಟಿ ಮಾಡಲು ಹಲವು ಪ್ರೊಟೊಕಾಲ್ ಇರುತ್ತವೆ. ಶೀತ ಮತ್ತು ಜ್ವರ ಇದ್ದ ಕಾರಣದಿಂದಾಗಿ ಅವರನ್ನು ಭೇಟಿ ಮಾಡಲಿಲ್ಲ. ಆರ್.ಟಿ.ಪಿ.ಸಿ.ಆರ್ ಮಾಡಿಸಬೇಕಿತ್ತು. ಜ್ವರ ಇದ್ದರಿಂದ ಭೇಟಿ ಸಾಧ್ಯವಾಗಲ್ಲ ಅನಿಸಿ ಹೋಗುವುದನ್ನು ಬಿಟ್ಟೆ ಎಂದು ಸುದೀಪ್ ಹೇಳಿಕೊಂಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಿತ್ರದಿಂದಪ್ರೇಮಿಗಳದಿನಕ್ಕೆಶುಭಕೋರುವಪೋಸ್ಟರ್ಬಿಡುಗಡೆಯಾಗಿದೆ.

Thu Feb 16 , 2023
ಡೈನಾಮಿಕ್ಪ್ರಿನ್ಸ್ಪ್ರಜ್ವಲ್ದೇವರಾಜ್ಹಾಗೂಅದಿತಿಪ್ರಭುದೇವನಟನೆಯ “ಮಾಫಿಯಾ” ಚಿತ್ರದಿಂದಪ್ರೇಮಿಗಳದಿನಕ್ಕೆಶುಭಕೋರುವಪೋಸ್ಟರ್ಬಿಡುಗಡೆಯಾಗಿದೆ. ‌ಪೋಸ್ಟರ್ಗೆಎಲ್ಲೆಡೆಮೆಚ್ಚುಗೆವ್ಯಕ್ತವಾಗುತ್ತಿದೆ. ಲೋಹಿತ್ಹೆಚ್ನಿರ್ದೇಶನದ ಈ ಚಿತ್ರವನ್ನು ಕುಮಾರ್ ಬಿ ನಿರ್ಮಿಣ ಮಾಡುತ್ತಿದ್ದಾರೆ . ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ , ಹಿಂದಿನ ಚಿತ್ರಗಳಿಗಿಂತ ಸಖತ್ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ . ಪ್ರಜ್ವಲ್ ದೇವರಾಜ್ ಅಭಿನಯದ 35 ನೇ ಚಿತ್ರ ” ಮಾಫಿಯಾ ” ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ . ಎಸ್ಪಾಂಡಿಕುಮಾರ್ಛಾಯಾಗ್ರಹಣಹಾಗೂಅನೂಪ್ಸೀಳಿನ್ಸಂಗೀತನಿರ್ದೇಶನವಿರುವಈಚಿತ್ರದತಾರಾಬಳಗದಲ್ಲಿಪ್ರಜ್ವಲ್ದೇವರಾಜ್, ಅದಿತಿಪ್ರಭುದೇವ, ದೇವರಾಜ್ , ಸಾಧುಕೋಕಿಲ, ಶೈನ್ಶೆಟ್ಟಿ, ವಿಜಯ್ಚೆಂಡೂರ್, […]

Advertisement

Wordpress Social Share Plugin powered by Ultimatelysocial