ಮಹಿಳೆಯರ ಮೇಲೆ ತಾಲೀಬಾನ್‌ ನಿರ್ಬಂಧ.

ಪ್ಘಾನಿಸ್ತಾನದಲ್ಲಿ ಎನ್‌ ಜಿ ಒ ಗಳಲ್ಲಿ ಕೆಲಸ ಮಾಡದಂತೆ ಮಹಿಳೆಯರ ಮೇಲೆ ನಿರ್ಬಂಧ ವಿಧಿಸಿರುವ ತಾಲೀಬಾನ್‌ ನಿರ್ಣಯವನ್ನು ಇಸ್ಲಾಮಿಕ್‌ ರಾಷ್ಟ್ರಗಳ ಒಕ್ಕೂಟ ಒಐಸಿ ಖಂಡಿಸಿದ್ದು ಇದು ಇಸ್ಲಾಂ ಕಾನೂನುಗಳ ಉದ್ದೇಶದ ಉಲ್ಲಂಘನೆ ಎಂದು ಹೇಳಿದೆ.

ಮಹಿಳೆಯರ ಮೇಲಿನ ನಿರ್ಬಂಧದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒಐಸಿ ಕರೆ ನೀಡಿದೆ.

ಮಹಿಳೆಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣವನ್ನು ಮತ್ತು ಹುಡುಗಿಯರಿಗೆ ಮಾಧ್ಯಮಿಕ ಶಿಕ್ಷಣವನ್ನು ನಿಷೇಧಿಸುವುದರೊಂದಿಗೆ ಅಫ್ಘಾನಿಸ್ತಾನದ ತಾಲಿಬಾನ್‌ ಚಾಲಿತ ಆಡಳಿತವು ಕಳೆದ ವರ್ಷ ಎಲ್ಲಾ ಸ್ಥಳೀಯ ಮತ್ತು ವಿದೇಶಿ ಸರ್ಕಾರೇತರ ಸಂಸ್ಥೆಗಳಿಗೆ ಮಹಿಳಾ ಉದ್ಯೋಗಿಗಳನ್ನು ಕೆಲಸಕ್ಕೆ ಬರದಂತೆ ತಡೆಯಲು ಆದೇಶಿಸಿತ್ತು.

‘ಇತ್ತೀಚಿನ ಬೆಳವಣಿಗೆಗಳು ಮತ್ತು ಅಫ್ಘಾನಿಸ್ತಾನದಲ್ಲಿನ ಮಾನವೀಯ ಪರಿಸ್ಥಿತಿ’ ಕುರಿತು OIC ಕಾರ್ಯಕಾರಿ ಸಮಿತಿಯ ಅಸಾಮಾನ್ಯ ಸಭೆಯ ಅಂತಿಮ ಪ್ರಕಟಣೆಯಲ್ಲಿ ಈ ಹೇಳಿಕೆಯನ್ನು ನೀಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

“ಅಫ್ಘಾನಿಸ್ತಾನದಲ್ಲಿ ಹದಗೆಡುತ್ತಿರುವ ಮಾನವ ಹಕ್ಕುಗಳ ಪರಿಸ್ಥಿತಿ” ಕುರಿತು ಕಳವಳ ವ್ಯಕ್ತಪಡಿಸಿದ 57 ಇಸ್ಲಾಮಿಕ್ ಸದಸ್ಯ ರಾಷ್ಟ್ರಗಳ ಗುಂಪು ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ಒಳಗೊಂಡಂತೆ ಮಾನವ ಹಕ್ಕುಗಳನ್ನು ಗೌರವಿಸಲು ತಾಲೀಬಾನ್‌ ಆಡಳಿತಕ್ಕೆ ಕರೆ ನೀಡಿದೆ. ಅಲ್ಲದೇ ಇಸ್ಲಾಮಿಕ್ ಧರ್ಮದ ಗಟ್ಟಿಯಾದ ಮತ್ತು ಸ್ಪಷ್ಟವಾದ ಅಡಿಪಾಯದಡಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವಂತೆಯೂ ಒಐಸಿ ಕರೆ ನೀಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannadaz

Please follow and like us:

Leave a Reply

Your email address will not be published. Required fields are marked *

Next Post

ಮಹಾಮಾತೆ ಜೀಜಾಬಾಯಿ

Fri Jan 13 , 2023
ಶಿವಾಜಿಯಂತಹ ಮಹಾಪುರುಷನ ಜೀವನಕ್ಕೆ ಆಧಾರ ರೂಪವಾಗಿ, ಸಂಸ್ಕಾರ ಕೊಟ್ಟು ತ್ಯಾಗ ಮಾಡಿ ವೀರತ್ವವನ್ನು ಜಾಗೃತಗೊಳಿಸಿ ಇತಿಹಾಸ ನಿರ್ಮಾಣ ಮಾಡುವ ಕಾರ್ಯದಲ್ಲಿ ಅತ್ಯಂತ ಹಿರಿಯದಾದ ಪಾತ್ರ ವಹಿಸಿ ಇಡೀ ಮಾತೃವರ್ಗಕ್ಕೆ ಆದರ್ಶ ಮಾತೆಯಾಗಿ ಮೆರೆದ ವೀರ ಮಹಿಳೆ ಜೀಜಾಬಾಯಿ! ಜೀಜಾಬಾಯಿ ಅವರು 1598ರ ವರ್ಷದ ಜನವರಿ 12ರಂದು ಜನಿಸಿದರು. ತಂದೆ ಲಖೋಜಿ ರಾವ್ ಜಾಧವ್ ಮತ್ತು ತಾಯಿ ಮಾಳಸಬಾಯಿ. ಬಾಲ್ಯದಲ್ಲಿಯೇ ಜೀಜಾಬಾಯಿ ಅವರು ತಂದೆಯ ಜೊತೆಗೂಡಿ ರಾಜಶಾಸ್ತ್ರ ವಿದ್ಯೆಯ ಬಗ್ಗೆ ಜ್ಞಾನ […]

Advertisement

Wordpress Social Share Plugin powered by Ultimatelysocial