ತಾತ್ಕಾಲಿಕ ಕದನ ವಿರಾಮ ಘೋಷಿಸಿದ ರಷ್ಯಾ : ಮರಿಪೋಲ್ ಜನರು ನಿರಾಳ..!

ಕಳೆದ ಹತ್ತು ದಿನದಿಂದ ಉಕ್ರೇನ್ ನಲ್ಲಿ ಗುಂಡು, ಬಾಂಬ್ ದೇ ಸದ್ದು ಕೇಳಿ ಜನ ಜೀವ ಕೈನಲ್ಲಿಡಿದುಕೊಂಡು ಬದುಕುತ್ತಿದ್ದರು. ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರು.

ಭಾರತ ಸರ್ಕಾರ ಕೂಡ ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನ ಕರೆತರಲು ಪ್ರಯತ್ನಗಳನ್ನ ಮಾಡ್ತಾ ಇದೆ. ಈ ಮಧ್ಯೆ ಸದ್ಯ ರಷ್ಯಾ ತಾತ್ಕಾಲಿಕವಾಗಿ ಕದನ ವಿರಾಮ ಘೋಷಿಸಿದೆ.

ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಸ್ಥಳಾಂತರ ಮಾಡುವವರೆಗೂ ಕದನ ವಿರಾಮ ಘೋಷಿಸಿದೆ ಎನ್ನಲಾಗಿದೆ‌. ಆದ್ರೆ ರಷ್ಯಾ ಕದನ ವಿರಾಮ ಘೋಷಣೆಯಿಂದಾಗಿ ಮರಿಪೋಲ್ ಜನ ಮಾತ್ರ ನಿಟ್ಟುಸಿರು ಬಿಟ್ಟಿದ್ದಾರೆ.

ಯಾಕೆಂದರೆ ಕಳೆದ ಕೆಲವು ದಿನಗಳಿಂದ ಬಂದರು ನಗರಿ ಮರಿಪೋಲ್ ಗೆ ಉಕ್ರೇನ್ ದಿಗ್ಭಂಧನ ಹಾಕಿತ್ತು. ಇದರಿಂದ ಅಲ್ಲಿ ವಾಸ ಮಾಡುತ್ತಿದ್ದ ಜನರಗೆ ಅಕ್ಷರಶಃ ಉಸಿರುಗಟ್ಟುವಂತ ವಾತಾವರಣ ನಿರ್ಮಾಣವಾಗಿತ್ತು. ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅಷ್ಟೆ ಅಲ್ಲ, ಆ ಪ್ರದೇಶಕ್ಕೆ ನೀರು, ಕರೆಂಟ್ ಸೌಲಭ್ಯ ಕಟ್ ಆಗಿತ್ತು. ಚಳಿ ತಡೆದುಕೊಳ್ಳಲು ಬಿಸಿ ಗಾಳಿಯೂ ಬೀಸುತ್ತಿರಲಿಲ್ಲ. ಸಾರಿಗೆ ವ್ಯವಸ್ಥೆಯನ್ನು ನಿಲ್ಲಿಸಲಾಗಿತ್ತು.

ಇನ್ನು ಬದುಕು ಅಸಾಧ್ಯವೆನಿಸಿದ್ದಾಗ ರಷ್ಯಾ ಕದನ ವಿರಾಮ ಘೋಷಿಸಿ, ಸುರಕ್ಷಿತವಾಗಿ ಅಲ್ಲಿನ ಜನ ತಲುಪಲು ಕಾರಿಡಾರ್ ಸೃಷ್ಟಿ ಮಾಡಿಕೊಟ್ಟಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಉಕ್ರೇನ್‌ನಿಂದ ಬಂದ ವೈದ್ಯಕೀಯ ವಿದ್ಯಾರ್ಥಿಗಳು ಇಲ್ಲೇ ಇಂಟರ್ನ್‌ಷಿಪ್‌ ಮಾಡಬಹುದು'

Sat Mar 5 , 2022
    ನವದೆಹಲಿ: ಉಕ್ರೋನ್‌ ಬಿಕ್ಕಟ್ಟು ಅಥವಾ ಕೋವಿಡ್‌ 19ರ ಕಾರಣದಿಂದ ಬಾಕಿಯಾಗಿರುವ ವಿದೇಶಿ ವೈದ್ಯಕೀಯ ಪದವೀದರರಿಗೆ ಭಾರತದಲ್ಲಿ ಇಂಟರ್ನ್‌ಷಿಪ್‌ ಪೂರ್ಣಗೊಳಿಸಲು ಅವಕಾಶ ನೀಡುವುದಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ತಿಳಿಸಿದೆ. ಭಾರತದಲ್ಲಿ ಇಂಟರ್ನ್‌ಷಿಪ್‌ ಪೂರ್ಣಗೊಳಿಸಲು ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ ಅದನ್ನೇ ರಾಜ್ಯ ವೈದ್ಯಕೀಯ ಕೌನ್ಸಿಲ್‌ಗಳು ಪರಿಗಣಿಸಬಹುದು ಎಂದು ಎನ್‌ಎಂಸಿ ಸುತ್ತೋಲೆಯಲ್ಲಿ ತಿಳಿಸಿದೆ. ‘ಕೋವಿಡ್‌ 19 ಅಥವಾ ಯುದ್ಧ ಮುಂತಾದ ಕಾರಣಗಳಿಂದ ಇಂಟರ್ನ್‌ಷಿಪ್‌ […]

Advertisement

Wordpress Social Share Plugin powered by Ultimatelysocial