ಬೇಸಿಗೆಗೂ ಮುನ್ನವೇ ಬೆಂಗಳೂರಿನಲ್ಲಿ ಏರಿದ ತಾಪಮಾನ.

ಬೆಂಗಳೂರು, ಫೆಬವರಿ 10: ಅವಧಿಗೂ ಮುನ್ನವೇ ಬೆಂಗಳೂರಿನಲ್ಲಿ ತಾಪಮಾನ ಏರಿಕೆಯಾಗಿದ್ದು, ಬಿಸಿಲ ಬೇಗ ತಟ್ಟುತ್ತಿದೆ. ಫೆಬ್ರವರಿಯಿಂದ ಬೆಂಗಳೂರಿನಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಗರಿಷ್ಠ 31 ಡಿಗ್ರಿ ಸೆಲ್ಸಿಯಸ್ ತಲುಪಿದೆ ಎಂದು ಡಿಎಚ್‌ ವರದಿ ಮಾಡಿದೆ.

ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆಯ ಮುಖ್ಯಸ್ಥ ಎ ಪ್ರಸಾದ್ ಪ್ರಕಾರ, ಫೆಬ್ರವರಿ 20 ರವರೆಗೆ ಗರಿಷ್ಠ ತಾಪಮಾನವು ಸಾಮಾನ್ಯವಾಗಿರುತ್ತದೆ. “ಅಧಿಕೃತವಾಗಿ, ಬೇಸಿಗೆ ಮಾರ್ಚ್ 1 ರಂದು ಮಾತ್ರ ಪ್ರಾರಂಭವಾಗುತ್ತದೆ. ಆದರೆ ಅದರ ಪರಿಣಾಮವು ಫೆಬ್ರವರಿಯ ಕೊನೆಯ ವಾರ ಅಥವಾ ಕೊನೆಯ 10 ದಿನಗಳಲ್ಲಿ ಕಂಡುಬರಬಹುದು ಎಂದು ಅವರು ತಿಳಿಸಿದ್ದಾರೆ.

ಜಾಗತಿಕ ತಾಪಮಾನ ಏರಿಕೆಯೊಂದಿಗೆ ನಾವು ಹೆಚ್ಚು ಏರಿಳಿತಗಳನ್ನು ನೋಡುತ್ತಿದ್ದೇವೆ. ಉದಾಹರಣೆಗೆ, ಕಳೆದ ಡಿಸೆಂಬರ್‌ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಚಳಿ ಇತ್ತು. ಫೆಬ್ರವರಿ ಅಂತ್ಯದ ವೇಳೆಗೆ, ಗರಿಷ್ಠ ತಾಪಮಾನವು 33 ಡಿಗ್ರಿಗಳಿಗೆ ಹೋಗಬಹುದು, ಆದರೆ ಅದಕ್ಕಿಂತ ಹೆಚ್ಚಾಗಲ್ಲ. ಈಗಿನಂತೆ, ಫೆಬ್ರವರಿ ತಾಪಮಾನವು ಸಾಮಾನ್ಯಕ್ಕೆ ಹತ್ತಿರದಲ್ಲಿದೆ, ಅಂದರೆ, 1991 ರಿಂದ 2020 ರವರೆಗಿನ 30 ವರ್ಷಗಳ ಸರಾಸರಿ ಇದಾಗಿದೆ ಎಂದು ಅವರು ಹೇಳಿದರು.

ಫೆಬ್ರವರಿಯಲ್ಲಿ ಸಾಮಾನ್ಯ ಗರಿಷ್ಠ ತಾಪಮಾನವು 30.9 ಡಿಗ್ರಿ ಸೆಲ್ಸಿಯಸ್ ಆಗಿದೆ. ಪ್ರಸ್ತುತ ಉಷ್ಣತೆ ಸುಮಾರು 31 ಡಿಗ್ರಿಗಳಷ್ಟು ಹತ್ತಿರದಲ್ಲಿದೆ. ಕನಿಷ್ಠ ತಾಪಮಾನವು ಈಗ 17 ರಿಂದ 18 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕಂಡು ಬರುತ್ತಿದೆ ಎಂದು ಅವರು ಹೇಳಿದರು.

ಜನವರಿಯಲ್ಲಿ ನಗರವು ಹೆಚ್ಚಿನ ಏರಿಳಿತಗಳನ್ನು ಕಂಡಿಲ್ಲ. ಆದರೆ, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಶೀತಗಾಳಿ ಎಚ್ಚರಿಕೆ ನೀಡಲಾಗಿದೆ. ಮಾರ್ಚ್‌ನಲ್ಲಿ, ಸಾಮಾನ್ಯ ಗರಿಷ್ಠ ತಾಪಮಾನವು 33.4 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಈ ವರ್ಷ ಅಸಹಜ ಹೆಚ್ಚಳವನ್ನು ಹವಾಮಾನ ಇಲಾಖೆ ನಿರೀಕ್ಷಿಸುತ್ತಿಲ್ಲ. ಬೆಂಗಳೂರಿನಲ್ಲಿ ಮಾರ್ಚ್‌ನಲ್ಲಿ 1996 ರಲ್ಲಿ ಗರಿಷ್ಠ ತಾಪಮಾನವು 37.3 ಡಿಗ್ರಿ ಆಗಿತ್ತು. ಗರಿಷ್ಠ ತಾಪಮಾನವು ಈ ಮೌಲ್ಯಕ್ಕಿಂತ ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು, ಆದರೆ ಹೆಚ್ಚು ಆಗಲ್ಲ ಎಂದು ಪ್ರಸಾದ್ ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತೀಯ ಪೌರತ್ವ ತೊರೆದ 16 ಲಕ್ಷ ಜನ, ಇದಕ್ಕೇನು ಕಾರಣ?

Fri Feb 10 , 2023
ನವದೆಹಲಿ: 2011ರಿಂದ ಈವರೆಗೆ ಸುಮಾರು 16 ಲಕ್ಷ ಜನರು ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ. ಈ ಪೈಕಿ ಕಳೆದ ವರ್ಷ 2,25,60 ಜನರು ತೊರೆದಿದ್ದರೆ, 2020ರಲ್ಲಿ ಅತಿ ಕಡಿಮೆ ಎಂದರೆ 85,256 ಜನರು ಪೌರತ್ವ ಬಿಟ್ಟುಕೊಟ್ಟಿದ್ದಾರೆ ಎಂದರು ಸರ್ಕಾರದ ಅಂಕಿ ಸಂಖ್ಯೆಗಳು ತಿಳಿಸಿವೆ. ಬಹುತೇಕರು ಉದ್ಯೋಗ ಕಾರಣಕ್ಕಾಗಿ ದೇಶವನ್ನು ಬಿಟ್ಟು ಬೇರೆ ದೇಶಗಳ ಪೌರತ್ವವನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಅಮೆರಿಕ ಹಾಗೂ ಯುಎಇ ಪೌರತ್ವವನ್ನು ಹೆಚ್ಚಿನ ಭಾರತೀಯರು ಪಡೆದುಕೊಳ್ಳುತ್ತಿದ್ದಾರೆಂದು ಮೂಲಗಳು ತಿಳಿಸಿವೆ ರಾಜ್ಯಸಭೆಯಲ್ಲಿ […]

Advertisement

Wordpress Social Share Plugin powered by Ultimatelysocial