KGF 2 ಟೀಂ ದೇವಸ್ಥಾನ ಭೇಟಿ ಹಿಂದಿನ ರಹಸ್ಯ!

ರಾಕಿಂಗ್ ಸ್ಟಾರ್ ಯಶ್ ಅಥವಾ ಕೆಜಿಎಫ್ ಟೀಂ ಎಂದಾಕ್ಷಣ ಸಿನಿಮಾ ಪ್ರೇಕ್ಷಕರಿಗೆ ನೆನಪಾಗೋದೆ ಕೆಜಿಎಫ್ 2 ಸಿನಿಮಾದ ರಿಲೀಸ್. ಯಾಕೆಂದರೆ ವರ್ಷಗಳಿಂದ ಸಿನಿಮಾ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಇಷ್ಟು ದಿನ ಕೆಜಿಎಫ್ 2 ಸಿನಿಮಾದ ಬಗ್ಗೆ ಸುದ್ದಿ ಇರಲಿಲ್ಲ.ಯಶ್ ಹುಟ್ಟುಹಬ್ಬಕ್ಕೆ ಒಂದು ಪೋಸ್ಟರ್ ಮಾತ್ರ ರಿಲೀಸ್ ಆಗಿತ್ತು.ಕೊನೆಯ ಹಂತದಲ್ಲಿದೆ KGF 2 ಕೆಲಸ ಕ್ರಿಕೆಟ್ ಆಡಿ ದೇವಸ್ಥಾನಕ್ಕೆ ಎಂಟ್ರಿಕೊಟ್ಟ ಯಶ್ಆದರೆ ಆ ಪೋಸ್ಟರ್‌ಗೆ ಅಷ್ಟೇನೂ ಉತ್ತಮ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಯಶ್ ಅಭಿಮಾನಿಗಳು ಈ ಪೋಸ್ಟರ್‌ಗೆ ಭಾರಿ ವಿರೋಧ ವ್ಯಕ್ತ ಪಡಿಸಿದ್ದರು. ಆದರೆ ಯಶ್ ಹುಟ್ಟುಹಬ್ಬ ಎನ್ನುವ ಕಾರಣಕ್ಕೆ ಮಾತ್ರವೇ ಆ ಪೋಸ್ಟರ್ ರಿಲೀಸ್ ಆಗಿತ್ತು. ಅದಾದ ಬಳಿಕ ಕೆಜಿಎಫ್ ಚಿತ್ರತಂಡದಿಂದ ಯಾವುದೇ ಸುಳಿವು ಇರಲಿಲ್ಲ.ಕೆಜಿಎಫ್ ಬಳಗದಲ್ಲಿ ಏನು ನಡೆಯುತ್ತಿದೆ. ಸಿನಿಮಾ ತಂಡ ಪತ್ತೆನೆ ಇಲ್ಲವಲ್ಲ ಎಂದು ಯೋಚಿಸುತ್ತಿರುವಾಗಲೇ, ಈಗ ಸಿನಿಮಾ ತಂಡ ದೇಸ್ಥಾನದಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಅಷ್ಟಕ್ಕೂ ಯಶ್ ಮತ್ತು ಕೆಜಿಎಫ್ 2 ಚಿತ್ರತಂಡ ದೇವಸ್ಥಾಕ್ಕೆ ಹೋಗಿದ್ದರ ಹಿಂದೆ ಒಂದು ಉದ್ದೇಶ ಇದೆ. ಅದು ಏನು ಎನ್ನುವುದನ್ನು ಮುಂದೆ ಓದಿ…ಮೂಕಾಂಬಿಕಾ ಮತ್ತು ಗಣಪತಿ ದೇವಸ್ಥಾನಕ್ಕೆ ದೇವಸ್ಥಾನದಲ್ಲಿ ಯಶ್!ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ಕೆಜಿಎಫ್ ಸಿನಿಮಾ ತಂಡ. ಅಂದರೆ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಹಲವರು ಇಂದು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಮೊದಲು ಆನೆಗುಡ್ಡೆ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ನಂತರ ಇಡೀ ತಂಡ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಕೆಜಿಎಫ್ ಸಿನಿಮಾ ತಂಡ ಹೀಗೆ ದೇವಸ್ಥಾನಗಳಿಗೆ ಭೇಟಿ ನೀಡಲು ಬಲವಾದ ಕಾರಣ ಇದೆ. ಅವರು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿರುವುದು ಕೆಜಿಎಫ್ 2 ಸಿನಿಮಾಗಾಗಿ.ಇಷ್ಟು ದಿನ ಸೈಲೆಂಟಾಗಿ ಇದ್ದ ಕೆಜಿಎಫ್ ಸಿನಿಮಾ ತಂಡ ಇನ್ನು ಮುಂದೆ ವೈಲೆಂಟ್ ಆಗಲಿದೆ. ಸಿನಿಮಾ ರಿಲೀಸ್‌ಗೆ ಇನ್ನು ಕೇವಲ ಎರಡು ತಿಂಗಳು ಮಾತ್ರವೇ ಬಾಕಿ ಇದೆ. ಹಾಗಾಗಿ ಸಿನಿಮಾದ ಪ್ರಚಾರ ಕಾರ್ಯ ಶುರುಮಾಡಲು ಸಿನಿಮಾ ತಂಡ ಮುಂದಾಗಿದೆ. ಅದಕ್ಕಾಗಿ ಕೆಜಿಎಫ್ 2 ಚಿತ್ರತಂಡ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದೆ. ಪ್ರಚಾರಕ್ಕೆ ಯೋಜನೆ ಹಾಕಿಕೊಳ್ಳುವ ಮೊದಲು ಸಿನಿಮಾಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಚಿತ್ರ ತಂಡ ಪೂಜೆ ಸಲ್ಲಿಸಿದೆ. ಹಾಗಾಗಿಯೇ ಯಶ್ ಜೊತೆಗೆ ನಿರ್ಮಾಪಕ, ನಿರ್ದೇಶಕರು ಕೂಡ ಪೂಜೆಯಲ್ಲಿ ಭಾಗಿ ಆಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂಡೋನೇಷ್ಯಾದಲ್ಲಿ ಪ್ರಬಲ ದಾಖಲು ಭೂಕಂಪನ

Wed Feb 2 , 2022
ಇಂಡೋನೇಷ್ಯಾ : ಇಂಡೋನೇಷ್ಯಾದಲ್ಲಿ ಇಂದು ಬೆಳ್ಳಂಬೆಳಗ್ಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ ಸುಮಾರು 6 ತೀವ್ರತೆ ದಾಖಲಾಗಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ ಮಾಹಿತಿ ನೀಡಿದೆ.ಇಂಡೋನೇಷ್ಯಾದ ಕೇಪುಲೌನ್ ಬರತ್ ದಯಾ ಎಂಬಲ್ಲಿ ಭೂಕಂಪನ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 6 ತೀವ್ರತೆ ದಾಖಲಾಗಿದೆ.ಭೂಕಂಪನ ಭೂಮಿಯಿಂದ 127 ಕಿಮೀ ಆಳದಲ್ಲಿ ಆಗಿದೆ. ಭೂಕಂಪದ ತೀವ್ರತೆ 6.4ರಷ್ಟಿತ್ತು ಎಂದು ಮೊದಲು ವರದಿಯಾಗಿತ್ತು. ಆದರೆ ಅದನ್ನು ಇಎಂಎಸ್​ಸಿ ಮತ್ತೊಮ್ಮೆ ಪರಿಷ್ಕರಿಸಿದ ಬಳಿಕ 6ರಷ್ಟು ತೀವ್ರತೆ ದಾಖಲಾಗಿದೆ […]

Advertisement

Wordpress Social Share Plugin powered by Ultimatelysocial