ದ. ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಮಿಂಚಿದರೆ ಎಲೈಟ್ ಕ್ಲಬ್ ಸೇರೋದು ಗ್ಯಾರಂಟಿ!

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಮತ್ತಷ್ಟು ದಾಖಲೆಗಳನ್ನು ಪುಡಿಗಟ್ಟಲು ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಸಜ್ಜಾಗಿದ್ದಾರೆ. ವಿವಿಎಸ್‌ ಲಕ್ಷ್ಮಣ್‌, ಮೊಹಮ್ಮದ್‌ ಅಝರುದ್ದೀನ್‌ ಹಾಗೂ ಸೌರವ್‌ ಗಂಗೂಲಿಗೆ ಸಡ್ಡು ಹೊಡೆಯುವುದನ್ನು ಕೊಹ್ಲಿ ಎದುರು ನೋಡುತ್ತಿದ್ದಾರೆ.

ಹೊಸದಿಲ್ಲಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಬುಧವಾರ (ಅಕ್ಟೋಬರ್‌ 2) ಶುರುವಾಗಲಿರುವ 3 ಪಂದ್ಯಗಳ ಮೊದಲ ಹಣಾಹಣಿಗೆ ಟೀಮ್‌ ಇಂಡಿಯಾ ಸಜ್ಜಾಗಿದ್ದು, ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಈ ಸರಣಿಯೊಂದಿಗೆ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಳ್ಳುವ ಕಡೆಗೆ ಎದುರು ನೋಡುತ್ತಿದ್ದಾರೆ.

ಮುಂದಿನ ಮೂರು ಟೆಸ್ಟ್‌ ಪಂದ್ಯಗಳಲ್ಲಿ ಕೊಹ್ಲಿ 242 ರನ್‌ಗಳನ್ನು ಗಳಿಸಲು ಸಾಧ್ಯವಾದರೆ, ದಕ್ಷಿಣ ಆಫ್ರಿಕಾ ಎದುರು ಟೆಸ್ಟ್‌ ಕ್ರಿಕೆಟ್‌ನಲ್ಲಿ 1000 ರನ್‌ಗಳನ್ನು ಪೂರೈಸಿದ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಬರೆಯಲಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್‌ನ ಬ್ಯಾಟಿಂಗ್‌ ದಂತಕತೆಗಳಾದ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌, ‘ದಿ ವಾಲ್‌’ ಖ್ಯಾತಿಯ ರಾಹುಲ್‌ ದ್ರಾವಿಡ್‌ ಮತ್ತು ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌ ಅವರ ಎಲೈಕ್‌ ಕ್ಲಬ್‌ಗೆ ಸೇರಿಕೊಳ್ಳಲಿದ್ದಾರೆ.

Please follow and like us:

tmadmin

Leave a Reply

Your email address will not be published. Required fields are marked *

Next Post

ಪ್ರೊ ಕಬಡ್ಡಿ ಲೀಗ್: ಬಲಿಷ್ಠ ದಬಾಂಗ್ ಡೆಲ್ಲಿಯನ್ನು ಬೇಟೆಯಾಡಿದ ಬೆಂಗಾಲ್ ವಾರಿಯರ್ಸ್

Wed Oct 2 , 2019
ಪಂಚಕುಲ (ಹರಿಯಾಣ): ಪ್ರಸಕ್ತ ಲೀಗ್‌ನಲ್ಲಿ ಅತ್ಯಂತ ಬಲಿಷ್ಠ ತಂಡವಾಗಿ ಹೊರಹೊಮ್ಮಿರುವ ದಬಾಂಗ್‌ ಡೆಲ್ಲಿ ತಂಡದ ಗರ್ವ ಮುಡಿಯುವಲ್ಲಿ ಯಶಸ್ವಿಯಾದ ಬೆಂಗಾಲ್‌ ವಾರಿಯರ್ಸ್‌ ತಂಡ ದಿಲ್ಲಿ ಪಡೆಗೆ 42-33 ಅಂಕಗಳಿಂದ ಸೋಲುಣಿಸಿದೆ. ಆದರೂ ಅಂಕಪಟ್ಟಿಯಲ್ಲಿ ದಬಾಂಗ್‌ ತಂಡ ಅಗ್ರಸ್ಥಾನದಲ್ಲೇ ವಿರಾಜಮಾನವಾಗಿದೆ. ಇಲ್ಲಿನ ತಾವು ದೇವೀಲಾಲ್‌ ಕ್ರೀಡಾ ಸಂಕೀಣದಲ್ಲಿ ಸೋಮವಾರ ನಡೆದ ಹೈ ವೋಲ್ಟೇಜ್‌ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಬೆಂಗಾಲ್‌ ವಾರಿಯರ್ಸ್‌ ಗೆಲುವಿನ ಸಂಭ್ರಮ ಆಚರಿಸಿದರೆ, ದಬಾಂಗ್‌ ಡೆಲ್ಲಿ ತಂಡ ಲೀಗ್‌ನಲ್ಲಿ ತನ್ನ ಮೂರನೇ ಸೋಲಿನ ಕಹಿ […]

Advertisement

Wordpress Social Share Plugin powered by Ultimatelysocial