ಟೀಕೆಗೆ ಗುರಿಯಾದ ಮೊಹಮ್ಮದ್‌ ಶಮಿಗೆ ಬಿಸಿಸಿಐ ಬೆಂಬಲ…!!!

ಸಾಮಾಜಿಕ ಮಾಧ್ಯಮಗಳಲ್ಲಿ ನಿಂದನೆಗೆ ಗುರಿಯಾಗಿರುವ ಟೀಮ್ ಇಂಡಿಯಾದ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಅವರಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ  ಬೆಂಬಲವನ್ನ  ವ್ಯಕ್ತಪಡಿಸಿದೆ.ಟಿ-20 ವಿಶ್ವಕಪ್‌ನಲ್ಲಿ ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ ಬಳಗದ ವಿರುದ್ಧ ಅಭಿಮಾನಿಗಳು ಆನ್‌ಲೈನ್ ದಾಳಿ ನಡೆಸಿದ್ದರು. ಸದ್ಯ ಮೊಹಮ್ಮದ್‌ ಶಮಿ ಬೆಂಬಲಕ್ಕೆ ನಿಂತಿರುವ ಬಿಸಿಸಿಐ, ‘ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆಗಿನ ಶಮಿ ಫೋಟೊವನ್ನು ಹಂಚಿಕೊಂಡಿದ್ದು, ‘ನೀವು ತಂಡದ ಹೆಮ್ಮೆ ಮತ್ತು ಬಲ’ ಎಂದು ಬರೆದುಕೊಂಡಿದೆ.ಶಮಿ ವಿರುದ್ಧದ ನಿಂದನೆಯನ್ನು ಭಾರತದ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಇರ್ಫಾನ್‌ ಪಠಾಣ್, ಯೂಸುಫ್ ಪಠಾಣ್, ಯಜುವೇಂದ್ರ ಚಾಹಲ್‌ ಸೇರಿದಂತೆ ಅನೇಕರು ಖಂಡಿಸಿದ್ದಾರೆ.

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಭಾರತದಾದ್ಯಂತ 1ಸಾವಿರ ಥಿಯೇಟರ್ ಗಳಲ್ಲಿ ಭಜರಂಗಿ-2  ರಿಲೀಸ್...!!!          

Wed Oct 27 , 2021
ಹರ್ಷ ನಿರ್ದೇಶನದ ಶಿವರಾಜ್ ಕುಮಾರ್ ನಟನೆಯ ಭಜರಂಗಿ -2 ಸಿನಿಮಾ ಅಕ್ಟೋಬರ್ 29 ರಂದು ತೆರೆ ಕಾಣಲಿದೆ.ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದ್ದು ಬೆಂಗಳೂರಿನಲ್ಲಿ ಪ್ರಿ ರಿಲೀಸ್ ಇವೆಂಟ್ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಯಶ್ ಮತ್ತು ಪುನೀತ್ ರಾಜ್ ಕುಮಾರ್ ಭಾಗವಹಿಸಲಿದ್ದಾರೆ. ಜಯಣ್ಣ ಬೋಗೇಂದ್ರ ಸಿನಿಮಾ ನಿರ್ಮಾಣ ಮಾಡಿದ್ದು, ಅವರೇ ವಿತರಕರಾಗಿದ್ದಾರೆ. ಕರ್ನಾಟಕದಾದ್ಯಂತ 350 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಭಜರಂಗಿ 2 ತೆಲುಗು […]

Advertisement

Wordpress Social Share Plugin powered by Ultimatelysocial