ಭಾರತದಾದ್ಯಂತ 1ಸಾವಿರ ಥಿಯೇಟರ್ ಗಳಲ್ಲಿ ಭಜರಂಗಿ-2  ರಿಲೀಸ್…!!!          

ಹರ್ಷ ನಿರ್ದೇಶನದ ಶಿವರಾಜ್ ಕುಮಾರ್ ನಟನೆಯ ಭಜರಂಗಿ -2 ಸಿನಿಮಾ ಅಕ್ಟೋಬರ್ 29 ರಂದು ತೆರೆ ಕಾಣಲಿದೆ.ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದ್ದು ಬೆಂಗಳೂರಿನಲ್ಲಿ ಪ್ರಿ ರಿಲೀಸ್ ಇವೆಂಟ್ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಯಶ್ ಮತ್ತು ಪುನೀತ್ ರಾಜ್ ಕುಮಾರ್ ಭಾಗವಹಿಸಲಿದ್ದಾರೆ. ಜಯಣ್ಣ ಬೋಗೇಂದ್ರ ಸಿನಿಮಾ ನಿರ್ಮಾಣ ಮಾಡಿದ್ದು, ಅವರೇ ವಿತರಕರಾಗಿದ್ದಾರೆ. ಕರ್ನಾಟಕದಾದ್ಯಂತ 350 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಭಜರಂಗಿ 2 ತೆಲುಗು ಆವೃತ್ತಿಯೂ ಸುಮಾರು 350-400 ಚಿತ್ರಮಂದಿರಗಳಲ್ಲಿ  ಬಿಡುಗಡೆಯಾಗಲಿದೆ. ಇದರ ಹೊರತಾಗಿ ಕನ್ನಡ ಮತ್ತು ತೆಲುಗು ಆವೃತ್ತಿಗಳು ಭಾರತದಾದ್ಯಂತ ಸುಮಾರು 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ. ಸರಿಸುಮಾರು 1000 ಸ್ಕ್ರೀನ್‌ಗಳಲ್ಲಿ ನಮ್ಮ ಚಿತ್ರವನ್ನು ಬಿಡುಗಡೆ ಮಾಡಲು ನೋಡುತ್ತಿದ್ದೇವೆ ಎಂದು ಜಯಣ್ಣ ಹೇಳುತ್ತಾರೆ.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಮುಗಿಲ್​ಪೇಟೆ' ಚಿತ್ರದಲ್ಲಿ 'ಪ್ರೇಮಲೋಕ'ದ ರಸಮಯ ದೃಶ್ಯ...!!!

Wed Oct 27 , 2021
ದಶಕಗಳ ಹಿಂದೆ ಬಂದ ಪ್ರೇಮಲೋಕ ಚಿತ್ರದಲ್ಲಿ ಕ್ರೇಜಿ ಸ್ಟಾರ್​ ರವಿಚಂದ್ರನ್​  ನಟನೆಯ ಪ್ರೀತಿಪ್ರಣಯದ ದೃಶ್ಯಗಳು ಯುವಜನರ ಮನ ಸೆಳೆದಿದ್ದವು. ಇದೀಗ ಅವರ ಮಗ ಮನೋರಂಜನ್ ನಾಯಕತ್ವದ ‘ಮುಗಿಲ್​ಪೇಟೆ’ ಎಂಬ ಪ್ರೇಮಚಿತ್ರದಲ್ಲಿ ಅದೇ ರೀತಿಯ ಜಾದೂ ಸೃಷ್ಟಿಸುವ ಪ್ರಯತ್ನದಲ್ಲಿದ್ದಾರೆ. ಈದೀಗ ಮುಗಿಲ್​ಪೇಟೆ ಚಿತ್ರದ ‘ತಾರೀಫು ಮಾಡಲು ತಾರೀಕು ಮೂಡಿದೆ…’ ಹಾಡಿನ ವಿಡಿಯೋವನ್ನು ಲಹರಿ ಮ್ಯೂಸಿಕ್​ನವರು ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಿದ್ದರು. ಆ ಚಿತ್ರಗೀತೆಗೆ 24 ಗಂಟೆಗಳಲ್ಲಿ 700 ಸಾವಿರ ಪ್ಲಸ್​ ವೀಕ್ಷಣೆಗಳು ಲಭಿಸಿದ್ದು, […]

Advertisement

Wordpress Social Share Plugin powered by Ultimatelysocial