ಜೆಡಿಎಸ್ ಜನತಾ ಜಲಧಾರೆಗೆ ಜನ ಸಾಗರ; ತಂದೆ-ತಾಯಿ ಆಶೀರ್ವಾದ ಪಡೆದು ಬಂದ HDK

 

ಬೆಂಗಳೂರು : ನೆಲಮಂಗಲದಲ್ಲಿ ಜೆಡಿಎಸ್‌ನ (JDS) ಮಹತ್ವಾಕಾಂಕ್ಷಿ ಜನತಾ ಜಲಧಾರೆ (Janata Jaladhare) ಸಮಾರೋಪ ಸಮಾರಂಭ ನಡೆಯುತ್ತಿದೆ. ಜನತಾ ಜಲಧಾರೆ ಸಮಾರಂಭದಲ್ಲಿ ಭಾಗಿಯಾಗಲು ರಾಜ್ಯದ ಮೂಲೆ ಮೂಲೆಗಳಿಂದ ಜೆಡಿಎಸ್ ಕಾರ್ಯಕರ್ತರು (Activist) ಆಗಮಿಸಿದ್ದಾರೆ.
ಹಾಸನದಿಂದ ಅತಿ ಹೆಚ್ಚು ಕಾರ್ಯಕರ್ತಯರು ಆಗಮಿಸುತ್ತಿದ್ದು, ಸಾರಿಗೆ ಬಸ್​ 547 ಹಾಗೂ 600 ಖಾಸಗಿ ವಾಹನಗಳಲ್ಲಿ (Private Vehicle) ಕಾರ್ಯಕರ್ತರ ದಂಡೇ ಹರಿದು ಬಂದಿದೆ. ಕಾರ್ಯಕ್ರಮಕ್ಕೆ ಬರುವುದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (H.D Kumaraswamy) ತಮ್ಮ ತಂದೆ-ತಾಯಿಯ ಆಶೀರ್ವಾದ ಪಡೆದಿದ್ದಾರೆ.
ತಂದೆ-ತಾಯಿ ಅಶೀರ್ವಾದ ಪಡೆದ ಹೆಚ್​ಡಿಕೆ
ಪದ್ಮನಾಭನಗರಕ್ಕೆ ತೆರಳಿದ ಹೆಚ್.ಡಿ. ಕುಮಾರಸ್ವಾಮಿ, ತಂದೆ ಹೆಚ್.ಡಿ. ದೇವೇಗೌಡ ಹಾಗೂ ತಾಯಿ ಚೆನ್ನಮ್ಮ ಅವರ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು. ಇದಕ್ಕೂ ಮುನ್ನ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವತೆ ಶ್ರೀ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ರಾಮನಗರದಲ್ಲಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ್ದರು.
ಜನರು ಜೆಡಿಎಸ್​ ಪಕ್ಷವನ್ನು ಬೆಂಬಲಿಸ್ತಾರೆ
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಲಧಾರೆ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಿದೆ. ಜೆಡಿಎಸ್​ ಪಕ್ಷವನ್ನು ಬೆಂಬಲಿಸುವ ಚರ್ಚೆ ಪ್ರಾರಂಭವಾಗಿದೆ. ಜಲಧಾರೆ ಉತ್ತಮವಾದ ಕಾರ್ಯಕ್ರಮ, ಕುಮಾರಸ್ವಾಮಿ ಅವರನ್ನು ಆಶೀರ್ವದಿಸೋಣ ಎಂದು ಚರ್ಚೆ ನಡೆಯುತ್ತಿದೆ ಎಂದರು.
ನಮ್ಮ ಪಕ್ಷದ ಕಾರ್ಯಕರ್ತರಿಗೆ ಡಬಲ್​ ಎನರ್ಜಿ
ಜೆಡಿಎಸ್​ ಪಕ್ಷ ಮುಳುಗ್ಹೋಯ್ತು, ಪಕ್ಷ ಚೇತರಿಸಿಕೊಳ್ಳಲ್ಲ ಎಂದು ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಜನತಾ ಜಲಧಾರೆ ಉತ್ತರ ಕೊಟ್ಟಿದೆ. ಜಲಧಾರೆಯಿಂದ ನನ್ನ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಬಂದಿದೆ. ಡಬಲ್ ಎನರ್ಜಿಯಿಂದ ಕಾರ್ಯಕರ್ತರು ಹೊರಟಿದ್ದಾರೆ.
ಜೆಡಿಎಸ್​ ಪಕ್ಷ ಅಧಿಕಾರಕ್ಕೆ ಬರುತ್ತೆ
ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ‌, ಪ್ರಾದೇಶಿಕ ಪಕ್ಷ, ಕನ್ನಡಿಗರಿಗೆ ರಕ್ಷಣೆ ನೀಡುವ ಸರ್ಕಾರ ತರುವುದಕ್ಕೆ ರಾಜ್ಯದ ಜನ ಮನಸ್ಸು ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್​ ಪಕ್ಷದಲ್ಲಿನ ಗೊಂದಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್​​ಡಿಕೆ, ಜನತಾ ಜಲಧಾರೆ ಸಭೆ ಬಳಿಕ ಎಲ್ಲವೂ ಸರಿಯಾಗಲಿದೆ. ಎಲ್ಲ ಪಕ್ಷಗಳಲ್ಲೂ ಸಹ ಸಮಸ್ಯೆಗಳು ಇದೆ. ಈಗ ಕಾಂಗ್ರೆಸ್‌ನಲ್ಲಿ ಹೊತ್ತಿ ಉರಿಯುತ್ತಿಲ್ಲವೇ?. ಅಷ್ಟೊಂದು ದೊಡ್ಡ ಮಟ್ಟದ ಸಮಸ್ಯೆ ನಮ್ಮಲ್ಲಿ ಇಲ್ಲ ಎಂದರು.
ಮಳೆ ನಮಗೆ ಶುಭ ಸಂಕೇತ
ಇವತ್ತು ಕನಿಷ್ಠ 4ರಿಂದ 5 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಜನತಾ ಜಲಧಾರೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತದೆ. ಜಲಧಾರೆ ಆರಂಭವಾದ ದಿನದಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ. ನಿರಂತರವಾಗಿ ಉತ್ತಮ ಮಳೆ ಬರುತ್ತಿರುವುದು ಶುಭ ಸೂಚಕ. ಇದು ನಮ್ಮ ಕಾರ್ಯಕರ್ತರಿಗೂ ಹುಮ್ಮಸ್ಸು ನೀಡಿದೆ ಎಂದರು.
ಸಾಲಮನ್ನಾ ಮಾಡಿ ಸಾಬೀತು ಮಾಡಿದ್ದೇವೆ
123ರ ಗುರಿ ಹೇಳಿದಾಗ ಬಹಳ ಜನ ಕೇವಲವಾಗಿ ಮಾತನಾಡಿದ್ದಾರೆ. ರೈತರ ಸಾಲಮನ್ನಾ ಮಾಡುತ್ತೇನೆ ಎಂದಾಗಲೂ ಮಾತನಾಡಿದ್ದರು. ರೈತರ ಸಾಲಮನ್ನಾ ಮಾಡಿ ಸಾಬೀತು ಮಾಡಿದ್ದೇನೆ. ಈ ಬಾರಿ 123ರ ಗುರಿ ಜೊತೆಗೆ ರಾಜ್ಯದ ಜನರ ಸಂಪೂರ್ಣ ಆಶೀರ್ವಾದದೊಂದಿಗೆ ಕನ್ನಡತನ ಇರುವ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಇಂತಹ ಸರ್ಕಾರ ಪ್ರತಿಷ್ಠಾಪನೆಯಾಗಲು ನಾಡಿನ ಜನತೆ ಆಶೀರ್ವಾದ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಇದನ್ನು : ಡಿಕೆಶಿ ಕರ್ಮಕಾಂಡಕ್ಕೆ ಪರ್ಮನೆಂಟ್ ಜಾಗ ತಿಹಾರ್ ಜೈಲು ಎಂದ ಅಶ್ವಥ್ ನಾರಾಯಣ್
ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಮರ್ಥ
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಅಂತ ಹೇಳಿದ್ರು. ಪ್ರತಿಷ್ಠಿತ ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಉತ್ತಮ ಅಭ್ಯರ್ಥಿ ಹಾಕಲಾಗುತ್ತೆ. ಈ ಕ್ಷೇತ್ರದಲ್ಲಿ ಕಾರ್ಯಕರ್ತರ ಸಂಘಟನೆ ಚೆನ್ನಾಗಿದೆ. ಜೆಡಿಎಸ್ ಗಟ್ಟಿಯಾಗಿ ನೆಲೆಯೂರಿದೆ. ಹೀಗಾಗಿ ಒಳ್ಳೆ ಅಭ್ಯರ್ಥಿ ಹಾಕುತ್ತೇವೆ ಅಂತ ತಿಳಿಸಿದ್ರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಂದು ಕುಟುಂಬ, ಒಂದು ಟಿಕೆಟ್​ ಬಂದರೆ ಕಾಂಗ್ರೆಸ್​ ಉಳಿವು ಸಾಧ್ಯ:

Fri May 13 , 2022
  ಉದಯಪುರ (ರಾಜಸ್ಥಾನ): ಒಂದು ಕುಟುಂಬ, ಒಂದು ಟಿಕೆಟ್ ನಿಯಮ ಜಾರಿಗೆ ಬರಬೇಕು. ಪಕ್ಷದ ಮುಖಂಡರು ತಮ್ಮ ಆತ್ಮೀಯರು ಮತ್ತು ಕುಟುಂಬದ ಸಂಬಂಧಿಕರಿಗೆ ಟಿಕೆಟ್​ ನೀಡುವಂತಿಲ್ಲ. ಒಂದು ವೇಳೆ ಟಿಕೆಟ್​ ನೀಡುವುದಿದ್ದರೂ ಅವರು ಐದು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿರಬೇಕು ಎಂದು ಕಾಂಗ್ರೆಸ್​ ನಾಯಕ ಅಜಯ್​ ಮಾಕನ್​ ಹೇಳಿದರು. ಉದಯಪುರದಲ್ಲಿ ಕಾಂಗ್ರೆಸ್​ ಚಿಂತನಾ ಶಿಬಿರ ನಡೆಯುತ್ತಿದ್ದು, ಅದರಲ್ಲಿ ಅವರು ಮಾತನಾಡುತ್ತಿದ್ದರು. ಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸಜ್ಜುಗೊಳಿಸುವ ನಿಟ್ಟಿನಲ್ಲಿ ಮೂರು […]

Advertisement

Wordpress Social Share Plugin powered by Ultimatelysocial