ಪ್ರೊ ಕಬಡ್ಡಿ ಲೀಗ್: ಬಲಿಷ್ಠ ದಬಾಂಗ್ ಡೆಲ್ಲಿಯನ್ನು ಬೇಟೆಯಾಡಿದ ಬೆಂಗಾಲ್ ವಾರಿಯರ್ಸ್

ಪಂಚಕುಲ (ಹರಿಯಾಣ): ಪ್ರಸಕ್ತ ಲೀಗ್‌ನಲ್ಲಿ ಅತ್ಯಂತ ಬಲಿಷ್ಠ ತಂಡವಾಗಿ ಹೊರಹೊಮ್ಮಿರುವ ದಬಾಂಗ್‌ ಡೆಲ್ಲಿ ತಂಡದ ಗರ್ವ ಮುಡಿಯುವಲ್ಲಿ ಯಶಸ್ವಿಯಾದ ಬೆಂಗಾಲ್‌ ವಾರಿಯರ್ಸ್‌ ತಂಡ ದಿಲ್ಲಿ ಪಡೆಗೆ 42-33 ಅಂಕಗಳಿಂದ ಸೋಲುಣಿಸಿದೆ. ಆದರೂ ಅಂಕಪಟ್ಟಿಯಲ್ಲಿ ದಬಾಂಗ್‌ ತಂಡ ಅಗ್ರಸ್ಥಾನದಲ್ಲೇ ವಿರಾಜಮಾನವಾಗಿದೆ. ಇಲ್ಲಿನ ತಾವು ದೇವೀಲಾಲ್‌ ಕ್ರೀಡಾ ಸಂಕೀಣದಲ್ಲಿ ಸೋಮವಾರ ನಡೆದ ಹೈ ವೋಲ್ಟೇಜ್‌ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಬೆಂಗಾಲ್‌ ವಾರಿಯರ್ಸ್‌ ಗೆಲುವಿನ ಸಂಭ್ರಮ ಆಚರಿಸಿದರೆ, ದಬಾಂಗ್‌ ಡೆಲ್ಲಿ ತಂಡ ಲೀಗ್‌ನಲ್ಲಿ ತನ್ನ ಮೂರನೇ ಸೋಲಿನ ಕಹಿ ಅನುಭವಿಸಿತು. ಈ ಜಯದೊಂದಿಗೆ ವಾರಿಯರ್ಸ್‌ ತಂಡದ ಆಡಿದ 20 ಪಂದ್ಯಗಳಲ್ಲಿ 13 ಗೆಲುವು, 4 ಸೋಲು ಮತ್ತು 3 ಗೆಲುವಿನೊಂದಿಗೆ 78 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯ ದ್ವಿತೀಯ ಸ್ಥಾನದಲ್ಲಿದೆ.

Please follow and like us:

tmadmin

Leave a Reply

Your email address will not be published. Required fields are marked *

Next Post

ನವರಾತ್ರಿ ಶಾಪಿಂಗ್ ಭರ್ಜರಿ! ಆರ್ಥಿಕ ಹಿಂಜರಿತದ ಭೀತಿ ಪರಾರಿ!

Wed Oct 2 , 2019
ದೇಶ ಆರ್ಥಿಕ ಹಿಂಜರಿತದಲ್ಲಿದೆ, ಹೀಗಾಗಿ ಹಬ್ಬದ ಸೀಸನ್‌ನಲ್ಲಿ ಶಾಪಿಂಗ್ ಕಥೆ ಏನಾಗಬಹುದು ಅನ್ನೋ ಭೀತಿಯಲ್ಲಿದ್ದ ಉದ್ಯಮ ವರ್ಗಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಈ ಬಾರಿಯ ನವರಾತ್ರಿ ಶಾಪಿಂಗ್ ದೇಶಾದ್ಯಂತ ಭರ್ಜರಿಯಾಗಿ ಸಾಗಿದೆ. ಎಕನಾಮಿಕ್‌ ಟೈಮ್ಸ್‌ ಬೆಂಗಳೂರು : ಆರ್ಥಿಕ ಬೆಳವಣಿಗೆಯ ಮಂದಗತಿಯ ಹೊರತಾಗಿಯೂ, ಈ ವರ್ಷದ ಹಬ್ಬಗಳ ಋುತುವಿನ ಮೊದಲ ವಾರದಲ್ಲೇ ಶಾಪಿಂಗ್‌ ನಿರೀಕ್ಷೆಗೂ ಮೀರಿ ಭರ್ಜರಿ ಆರಂಭ ಪಡೆದಿದೆ. ಹೀಗಾಗಿ ಬೃಹತ್‌ ರಿಟೇಲ್‌ ಸರಣಿಗಳು, ಇ-ಕಾಮರ್ಸ್‌ ಕಂಪನಿ, ಮಾಲ್‌ಗಳು ನಿರಾಳವಾಗಿವೆ. […]

Advertisement

Wordpress Social Share Plugin powered by Ultimatelysocial