ಮೈಕೇಲ್ ವಾನ್ ಹೇಳಿದ ಭವಿಷ್ಯ ನಿಜವಾಗುತ್ತಾ?

ವಿಶ್ವಕಪ್​ನಿಂದ ಹೊರಬೀಳುತ್ತಾ ಭಾರತ?

ಟಿ20 ವಿಶ್ವಕಪ್​ನಲ್ಲಿ ಸತತ ಎರಡು ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋಲನುಭವಿಸಿದ್ದ ಭಾರತ ತನ್ನ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರೂ ಮಂಡಿಯೂರಿದೆ. ಭಾರತ ಮೊದಲು ಬ್ಯಾಟಿಂಗ್ ಮಾಡಿ ಅಲ್ಪ ಮೊತ್ತ ಗಳಿಸಿದಾಗಲೇ ಮಾಜಿ ಇಂಗ್ಲೆಂಡ್ ಕ್ರಿಕೆಟಿಗ   ಅವರು ಭವಿಷ್ಯದ ನುಡಿಗಳನ್ನ ಹೇಳಿದ್ದಾರೆ. ಭಾರತ ತಂಡದ ಧೋರಣೆ ಹೀಗೇ ಮುಂದುವರಿದರೆ ಟಿ20 ವಿಶ್ವಕಪ್​ನಿಂದ ಹೊರಬೀಳಬಹುದು ಎಂದು ಎಚ್ಚರಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಭಾರತ ಕೆಲ ಮಹತ್ವದ ಬದಲಾವಣೆಗಳನ್ನ ಮಾಡಿಕೊಂಡಿತು. ಆದರೆ, ಅದರ ಪ್ರಯೋಗ ಬಹುತೇಕ ವಿಫಲಗೊಂಡಿತು. ಬ್ಯಾಟಿಂಗ್ ಆರ್ಡರ್ ಬುಡಮೇಲು ಮಾಡಿದ್ದು ಭಾರತಕ್ಕೆ ಯಡವಟ್ಟಾದಂತಿತ್ತು. ಭಾರತದ ನಿಯಮಿತ ಓಪನರ್ ರೋಹಿತ್ ಶರ್ಮಾ ಅವರನ್ನ ಫಸ್ಟ್ ಡೌನ್ ಕಳುಹಿಸಲಾಯಿತು. ಸೂರ್ಯಕುಮಾರ್ ಯಾದವ್ ಬದಲು ಸ್ಥಾನ ಪಡೆದ ಇಶಾನ್ ಕಿಶನ್ ಹಾಗೂ ಕೆಎಲ್ ರಾಹುಲ್ ಇನ್ನಿಂಗ್ಸ್ ಓಪನ್ ಮಾಡಿದರು. ರವೀಂದ್ರ ಜಡೇಜಾ ಹೊರತುಪಡಿಸಿ ಭಾರತದ ಉಳಿದ ಬ್ಯಾಟರ್ಸ್ ಬಹುತೇಕ ವಿಫಲರಾದರು. ಪಾಕಿಸ್ತಾನ ವಿರುದ್ಧ ಆಕರ್ಷಕ ಅರ್ಧಶತಕ ಭಾರಿಸಿ ಭಾರತ ತಂಡಕ್ಕೆ ಗೌರವಯುತ ಸ್ಕೋರ್ ಸಿಗುವಂತೆ ಮಾಡಿದ್ದ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ವಿಫಲರಾದರು.“ಭಾರತ ಟಿ20 ವಿಶ್ವಕಪ್​ನಿಂದ ಹೊರಬೀಳುತ್ತಿದೆ. ಇಷ್ಟೆಲ್ಲಾ ಪ್ರತಿಭಾನ್ವಿತರು ಇದ್ದರೂ ಭಾರತದ ಧೋರಣೆ ಇದೂವರೆಗೂ ತಪ್ಪಾಗಿದೆ” ಎಂದು ಮೈಕೇಲ್ ವಾನ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಲ್ಲಾ ಬಟ್ಟೆಗಳ ಬೆಲೆ ಒಂದು ರೂಪಾಯಿ, ಕೊಳ್ಳೋಕೆ ನೂಕುನುಗ್ಗಲು!

Mon Nov 1 , 2021
ನಾಲ್ವರು ಕಾಲೇಜು ಸ್ನೇಹಿತರು ಸೇರಿ ಬೆಂಗಳೂರಿನಲ್ಲಿಬಟ್ಟೆ ಮಳಿಗೆಯೊಂದನ್ನು ಸ್ಥಾಪಿಸಿದ್ದು ಬಡವರು ಹಾಗೂ ನಿರ್ಗತಿಕರು ಈ ಬಟ್ಟೆ ಮಳಿಗೆಯಲ್ಲಿ 1 ರೂ.ಗೆ ಬಟ್ಟೆಗಳನ್ನು ಖರೀದಿಸಬಹುದಾಗಿದೆ. ಈ ಮಳಿಗೆಯ ಹೆಸರು ಇಮ್ಯಾಜಿನ್ ಕ್ಲಾತ್ಸ್‌ ಬ್ಯಾಂಕ್  ಎಂದಾಗಿದ್ದು ಹಸಿದವರಿಗೆ ಆಹಾರವನ್ನೊದಗಿಸುವ ಸಮುದಾಯ ರೆಫ್ರಿಜರೇಟರ್‌ಗಳ ಕಲ್ಪನೆಯ ಹಾದಿಯಲ್ಲಿಯೇ ಈ ಸೌಹಾರ್ದ ಉಪಕ್ರಮವನ್ನು ಸ್ನೇಹಿತರು, ಈ ವರ್ಷದ ಸೆಪ್ಟೆಂಬರ್ 12ರಂದು ಅನಾವರಣಗೊಳಿಸಿದ್ದು ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಬೆರಾಟೆನಾ ಅಗ್ರಹಾರದ ಲವ ಕುಶ ಲೇಔಟ್‌ನಲ್ಲಿನ ಎರಡು ಬೆಡ್‌ರೂಮ್‌ನ ಅಪಾರ್ಟ್‌ಮೆಂಟ್‌ನಲ್ಲಿ ನಡೆಸುತ್ತಿದ್ದಾರೆ. […]

Advertisement

Wordpress Social Share Plugin powered by Ultimatelysocial