ಇವತ್ತಿಗೂ ಜೀವಂತವಾಗಿದೆ ಭಗವನ್ ಬುದ್ಧನ ಬೋಧಿವೃಕ್ಷ

ವಿವಿಐಪಿ ಟ್ರೀಟ್‍ಮೆಂಟ್ ಸಾಮಾನ್ಯವಾಗಿ ಈ ಪದವನ್ನ ನಾವೆಲ್ಲರೂ ಕೇಳಿರ್ತೀವಿ. ತುಂಬಾ ಸ್ಪೆಷಲ್ ವ್ಯಕ್ತಿಗಳಿಗೆ ವಿವಿಐಪಿ ಟ್ರೀಟ್ಮೆಂಡ್ ಕೊಡಲಾಗುತ್ತೆ.ನಮ್ಮ ದೇಶದಲ್ಲಿಯೂ ಕೂಡ ಬೆರಳೆಣಿಕೆ ಮಂದಿಗಳಿಗಷ್ಟೇ ವಿವಿಐಪಿ ಟ್ರೀಟ್ಮೆಂಟ್ ಒದಗಿಸಲಾಗಿದೆ. ಪೊಲೀಸ್ ಬೆಂಗಾವಲು,ಐಟಿಬಿಪಿ ಅಥವಾ ಸಿಆರ್‍ಪಿಎಫ್‍ಸಿಬ್ಬಂದಿ, ಬೆಂಗಾವಲು ಕಾರಿನಿಂದ ರಕ್ಷಣೆ ಕೊಟ್ಟಿರ್ತಾರೆ.ಇದು ಬಹ ವಿಸೇಷವಾಗಿರುವ ವ್ಯಕ್ತಿ

ಗಳಿಗೆ ನೀಡುವಂತಹ ವಿವಿಐಪಿ ಟ್ರೀಟ್ಮೆಂಟ್. ಹಾಗೆಯೇ ವಿವಿಐಪಿ ಮರಕ್ಕೆ ಯಾವ ರೀತಿ ಟ್ರೀಟ್ಮೆಂಟ್ ಕೊಡ್ತಾರೆ ಅನ್ನೋದನ್ನ ನಾವು ತಿಳಿದುಕೊಳ್ಳೋಣ..

ಮರಕ್ಕೆ ವಿವಿಐಪಿ ಟ್ರೀಟ್‍ಮೆಂಟಾ..? ..ಇವ್ರೆನ್ ಹೇಳ್ತಿದಾರೆ..? ನಾವೆಲ್ಲೂ ಕೇಳೆ ಇಲ್ವಲ್ಲಾ ಮರಗಳನ್ನ ವಿಐಪಿಗಳ ಟ್ರೀಟ್ ಮಾಡೋದನ್ನ ಅಂತ

ಅಂತ ನೀವು ಅನ್ಕೋತಿರಬಹುದು.ಆದರೆ ಇದು ನಿಜ. ಹೌದು ನಮ್ಮ ದೇಶದಲ್ಲಿ ಮರಕ್ಕೂ ಕೂಡ ವಿವಿಐಪಿ ಟ್ರೀಟ್ಮೆಂಟ್ ಕೊಡಲಾಕ್ತಿದೆ. ಅಬ್ಬಬ್ಬಾ ಮರಕ್ಕೂ ವಿವಿಐಪಿ ಟ್ರೀಟ್ ಮೆಂಟಾ..? ಹಾಗಾದ್ರೆ ಅದು ಎಂತಹ ಮರ ಅಂತೀರಾ..? ಅದರ ಬಗ್ಗೆ ನಾವು ಹೇಳ್ತೀವಿ

ಇಂಥದ್ದೊಂದು ಮರ ನಮ್ಮ ದೇಶದ ಮಧ್ಯಪ್ರದೇಶ ರಾಜ್ಯದ ಭೋಪಾಲ್ ಮತ್ತು ವಿದಿಶಾ ರಸ್ತೆಯ ಮಧ್ಯದಲ್ಲಿ ಬರುವ ಸಲಾಮತ್ ಪುರ ಹೆಸರಿನ ಊರಿನಲ್ಲಿದೆ.

ಈ ಮರಕ್ಕೆ ದಿನದ 24 ಗಂಟೆಗಳೂ ಕೂಡ ಭ್ದರೆತ ನೀಡಲಾಗುತ್ತೆ. ಇನ್ನು ಈ ಮರದ ಸುತ್ತಲೂ ಸಂಪೂರ್ಣವಾಗಿ ಜಾಳಿಗೆಯನ್ನ ಕೂಡಿಸಲಾಗಿದೆ. ಇದರ ಜೊತೆಗೆ 24 ಗಂಟೆಗಳ ಕಾಲ ಪೊಲೀಸ್ ರಕ್ಷಣೆಯನ್ನ ಈ ಮರಕ್ಕೆ ನೀಡಲಾಗುತ್ತೆ. ಇಷ್ಟೇ ಅಲ್ಲ ಒಂದು ವರ್ಷಕ್ಕೆ ಈ ಮರಕ್ಕೆ 12-15 ಲಕ್ಷ ರೂಪಾಯಿಯನ್ನ ಕೂಡ ಖರ್ಚು ಮಾಡ್ತಾರಂತೆ

ಇಷ್ಟೊಂದೆಲ್ಲ ಖರ್ಚು ಮಾಡ್ತಾರಲ್ಲಾ ಅದು ಕೂಡ ಈ ಒಂದು ಮರಕ್ಕೆ ಅಂತ ವಿಶೇಷತೆ ಈ ಮರದಲ್ಲಿ ಏನಿದೆ ಎನ್ನುವ ಪ್ರಶ್ನೆ ನಿಮಗೆ ಮೂಡಿರುತ್ತೆ.

ಇನ್ನು ಈ ಮರವನ್ನ ಶ್ರೀಲಂಕಾದ ರಾಷ್ಟ್ರಪತಿ ಮಹಿಂದ್ರಾ ರಾಜಪಕ್ಷೆ ನೆಟ್ಟಿದ್ದಾರೆ. ಕಳೆದ 8 ವರ್ಷಗಳ ಹಿಂದೆ ನೆಟ್ಟಿರುವ ಮರ ಇದಾಗಿದೆ.2012ರ ಸೆಪ್ಟೆಂಬರ್ 21ರಂದು ಈ ಗಿಡವನ್ನ ನೆಟ್ಟಿದ್ದರು. ಇದನ್ನ ನೆಟ್ಟು ಸ್ವಲಪ್ ದಿನಗಳ ಕಳೀತಾ ಇದ್ದ ಹಾಗೆ ಮರಕ್ಕೆ ಗೆದ್ದಲು ಹಿಡಿದುಎಲೆಗಳೆಲ್ಲ ಉದುರೋದಕ್ಕೆ ಪ್ರಾರಂಭವಾಗುತ್ತೆ.ವಾತಾವರಣದಲ್ಲಾಗುವ ಕೆಲವೊಂದಿಷ್ಟು ಬದಲಾವಣೆಗಳಿಂದ ಮರ ಕೂಡ ಹಾ

 

ಳಾಗೋದಕ್ಕೆ ಪ್ರಾರಂಭವಾದಾಗ ಸರ್ಕಾರ ಎಚ್ಚೆತ್ತುಕೊಂಡು ಮರದ ರಕ್ಷಣೆಗೆ ಮುಂದಾಯ್ತು.

 

ಈ ಮರಕ್ಕೆ ಎಷ್ಟರ ಮಟ್ಟಿಗೆ ಆರೈಕೆ ಮಾಡಲಾಯ್ತು ಅಂದ್ರೆ ಮನುಷ್ಯರಿಗೆಅನಾರೋಗ್ಯ ಕಾಡಿದರೆ ಯಾವ ರೀತಿ ಅವರಿಗೆ ಇಂಜೆಕ್ಷನ್ ಕೊಡಲಾಗುತ್ತೋ ಅದೇ ರೀತಿಯಲ್ಲಿ ಈ ಮರಕ್ಕೂ ಕೂಡ ಇಂಜೆಕ್ಷನ್ ಮತ್ತೆ ಸಲಾಯಿಲ್ ವ್ಯವಸ್ಥೆ ಮಾಡಲಾಯ್ತಂತೆ.ಇಷ್ಟೆಲ್ಲ ಆರೈಕೆ ನಂತರ ಮರ ಇದೀಗ ಮತ್ತೆ ಮೊದಲಿನ ಹಾಗೆ ಹಸಿರಾಗಿ ಬೆಳೀತಾ ಇದೆ.ಸದ್ಯಕ್ಕೆ ಈ ಮರ 20 ಫೀಟ್ ಎತ್ತರವಾಗಿದೆ

ವೀಕ್ಷಕರೇ ಈ ಮರ ಈಗ ಚೆನ್ನಾಗಿ ಹಸಿರಾಗಿ ಬೆಳೀತಾ ಇದೆ. ಈ ಮರಕ್ಕೇ ಇಷ್ಟೊಂದು ಆರೈಕೆಯ ಅವಶ್ಯಕತೆ ಇತ್ತಾ ಒಂದುವೇಳೆ ನಶೀಸ್ತಾ ಇದೆ ಅಂದರೆ ಮತ್ತೊಂದು ಗಿಡವನ್ನ ನೆಡಬಹುದಿತ್ತಲ್ಲಾ ಎನ್ನುವ ಪ್ರಶ್ನೆ ಮೂಡಬಹುದು. ಆದರೆ ಅದು ಆ ಮರ ಸಾಂಆನ್ಯವಾದ ಮರ ಅಲ್ಲ.

ಹೌದು.., ಈ ಮರದ ವಿಶೇಷತೆ ಅಂದ್ರೆ ಗೌತಮ್ ಬುದ್ಧ ಯಾವ ಮರದ ಕೆಳಗೆ ಕುಳಿತು ಜ್ಞಾನವನ್ನು ಪ್ರಾಪ್ತ ಮಾಡಿಕೊಂಡರೋ ಆ ಮರದ ಟೊಂಗೆಯನ್ನೇ ಇಲ್ಲಿ ನೆಟ್ಟಿದ್ದಾರೆ. ಈಗ ಇದು ವೃಕ್ಷದಲ್ಲಿ ರೂಪಾಂತರವಾಗಿದೆ. ಹಾಗಾಗಿ ಈ ಮರವನ್ನ ಗೌತಮ ಬುದ್ಧರ ಪ್ರತೀಕವೆಂದು ನಂಬಲಾಗಿದ್ದು, ಈ ಒಂದು ಪ್ರಮುಖ ಕಾರಣಕ್ಕೆ ಈ ಮರಕ್ಕೆ ಅಷ್ಟೊಂದು ಹೈ ಸೆಕ್ಯುರಿಟಿ ಜೊತೆಗೆ ಮಹತ್ವ ನೀಡಲಾಕ್ತಿದೆ

ಗೌತಮ ಬುದ್ಧ ಯಾವ ಮರದ ಕೆಳಗೆ ಕುಳಿತುಕೊಂಡು ಜ್ಞಾನ ಪ್ರಾಪ್ತಿ ಮಾಡಿಕೊಂಡರೋ ಆ ಮರದ ಚಿಗುರು ಎನ್ನುವ ಕಾರಣಕ್ಕೆ.., ಇದನ್ನ ಉಳಿಸಿಕೊಂಡು ಹೋಗಬೇಕು ಇದೊಂದು ಜ್ಞಾನ ವೃಧ್ಧಿಯ ಮರ ಎಂದು ನಂಬಿರುವ ಸರ್ಕಾರ ಈ ಮರದ ಸಂಪೂರ್ಣ ಜವಾಬ್ದಾರಿಯನ್ನ ವಹಿಸಿಕೊಂಡಿದೆ.

ಈ ಮರಕ್ಕೆ ನೀರಿನ ವ್ಯವಸ್ಥೆ ಮಾಡುತ್ತಿದೆ. ಯಾವುದೇ ರೋಗ ಬರಬಾರದು ಅಂತ ಪ್ರತಿ ವಾರ ಕೃಷಿ ಅಧಿಕಾರಿಗಳು ಭೇಟಿಕೊಟ್ಟು ಇದರ ಪರೀಶೀಲನೆ ನಡೆಸುತಯ್ತಾರೆ.ಈ ಮರದ ಸುರಕ್ಷತೆಗೆ ಡಿಸಿ ಕಡೆಯಿಂದ ಎಲ್ಲ ವ್ಯವಸ್ಥೇ ಮಾಡಿಸಲಾಗಿದೆ. ಜೊತೆಗೆ ಈ ವೃಕ್ಷದ ದರ್ಶನಕ್ಕಾಗಿ ಪ್ರವಾಸಿಗರಿಗೆ ಸರ್ಕಾರದ ವತಿಯಿಂದ ರಸ್ತೆ ನಿರ್ಮಾಣವನ್ನ ಮಾಡಿಸಲಾಗಿದೆ

Please follow and like us:

Leave a Reply

Your email address will not be published. Required fields are marked *

Next Post

ಪ್ರಕರಣದಲ್ಲಿ ಕಿಂಗ್ ಪಿನ್ ಒನ್ ಎಂದು ಪರಿಗಣಿಸಿದ್ದ ನರೇಶ್ ವೀಡಿಯೋ

Thu Mar 18 , 2021
ರಮೇಶ್ ಜಾರಕಿಹೊಳಿ ಸಿಡಿಕೇಟ್ ಪ್ರಕರಣದಲ್ಲಿ ಕಿಂಗ್ ಪಿನ್ ಒನ್ ಎಂದು ಪರಿಗಣಿಸಿದ್ದ ನರೇಶ್ ವೀಡಿಯೋದಲ್ಲಿ ಹೇಳಿಕೆ ನೀಡಿದ್ದು. ಈ ವಿಚಾರವಾಗಿ ನನ್ನನ್ನು ಸುಖಾಸುಮ್ಮನೆ ಸೇರಿಸಲಾಗುತ್ತಿದೆ. ಆ ಯುವತಿ ನನಗೆ ಕರೆ ಮಾಡಿ ಈ ರೀತಿ ನನ್ನ ಜೊತೆ ತೊಂದರೆಯಾಗಿದೆ ಅಂತ ಹೇಳಿಕೊಂಡಿದ್ದಳು. ಹಾಗಾಗಿ ಆ ವೀಡಿಯೋ ತಗೊಂಡು ಬನ್ನಿ ಇದಕ್ಕೆ ಏನಾದರೂ ನ್ಯಾಯ ಕೊಡಿಸೋಣ ಎಂದಿದ್ದೆ. ಈ ಕೇಸಿಗೂ ನನಗೂ ಯಾವುದೇ ಸಂಬಂಧವಿಲ್ಲ. ಇದರಲ್ಲಿ ನನ್ನದು ಎಳ್ಳಷ್ಟೂ ಪಾತ್ರವಿಲ್ಲ. ನಾನು […]

Advertisement

Wordpress Social Share Plugin powered by Ultimatelysocial