ಕರೀನಾ ಮಗ “ತೈಮೂರ್‌” ಜತೆಗೆ ಅಕ್ಷಯ್‌ ಸಿನಿಮಾ ಮಾಡ್ತಾರೆ; ನಿಜವೋ? ತಮಾಷೆ .

ಅಕ್ಷಯ್​ ಕುಮಾರ್​ ಮತ್ತು ಕರೀನಾ ಕಪೂರ್​ ಖಾನ್​ ನಡುವೆ 13 ವರ್ಷಗಳ ವಯಸ್ಸಿನ ಅಂತರ ಇದೆ. ಅಕ್ಷಯ್​ ನಟನೆಯ ಸಿನಿಮಾಗಳ ಶೂಟಿಂಗ್​ ನೋಡಲು ಹೋಗುವಾಗ ಕರೀನಾ ಕಪೂರ್​ ಚಿಕ್ಕ ಬಾಲಕಿ ಆಗಿದ್ದರು.ನಟ ಅಕ್ಷಯ್​ ಕುಮಾರ್​  ಅವರು ಬಾಲಿವುಡ್​ನಲ್ಲಿ ಬಹುಬೇಡಿಕೆಯ ಹೀರೋ ಆಗಿ ಮಿಂಚುತ್ತಿದ್ದಾರೆ.ಅವರ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ. ಅವರ ಬಗ್ಗೆ ನಿರ್ಮಾಪಕರಿಗೆ ಎಲ್ಲಿಲ್ಲದ ಭರವಸೆ. ಅಕ್ಷಯ್​ ಕುಮಾರ್​ ನಟನೆಯ ಸಿನಿಮಾಗೆ ಬಂಡವಾಳ ಹೂಡಿದರೆ ನಷ್ಟ ಆಗುವುದಿಲ್ಲ ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಅಲ್ಲದೇ, ಅಕ್ಷಯ್​​ ಕುಮಾರ್​ ಅವರು ಕೆಲಸ ಮಾಡುವ ಪರಿಗೆ ಸೆಲೆಬ್ರಿಟಿಗಳು ಕೂಡ ಫಿದಾ ಆಗಿದ್ದಾರೆ. ನಟಿ ಕರೀನಾ ಕಪೂರ್​ ಖಾನ್ಅ ವರಿಗೂ ಅಕ್ಷಯ್​ ಕುಮಾರ್​ ಎಂದರೆ ಬಹಳ ಇಷ್ಟ. ಆದರೆ ಅವರ ಜೊತೆ ಸಿನಿಮಾ ಮಾಡವಾಗ ಕೊಂಚ ಕಸಿವಿಸಿ ಆಗುತ್ತದೆ ಎಂದು ಕೂಡ ಕರೀನಾ ಹೇಳಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ. ಮುಂದಿನ ದಿನಗಳಲ್ಲಿ ತೈಮೂರ್​ ಅಲಿ ಖಾನ್  ​ ಜೊತೆಗೂ ಅಕ್ಷಯ್​ ಕುಮಾರ್​ ಸಿನಿಮಾ ಮಾಡುತ್ತಾರೆ ಎಂದು ಕರೀನಾ ಕಪೂರ್​ ಖಾನ್ ​ಹೇಳಿದ್ದಾರೆ. ಹಾಗಾದರೆ ಅವರ ಮಾತಿನ ಅರ್ಥವೇನು? ನಿಜಕ್ಕೂ ತೈಮೂರ್​ ಜೊತೆ ಸಿನಿಮಾ ಮಾಡಲು ಅಕ್ಷಯ್​ ಕುಮಾರ್​ ರೆಡಿ ಆಗಿದ್ದಾರಾ? ಇಲ್ಲಿದೆ ಪೂರ್ತಿ ವಿವರ..ಅಕ್ಷಯ್​ ಕುಮಾರ್​ ಅವರಿಗೆ ಈಗ 54 ವರ್ಷ ವಯಸ್ಸು. 1987ರ ಸಮಯದಿಂದಲೂ ಅವರು ಸಿನಿಮಾ ಮಾಡುತ್ತಿದ್ದಾರೆ. ಅಂದು ಅವರ ಜೊತೆ ರೊಮ್ಯಾನ್ಸ್​ ಮಾಡಿದ ನಟಿಯರೆಲ್ಲ ಇಂದು ಮೂಲೆಗುಂಪಾಗಿದ್ದಾರೆ. ಕರೀನಾ ಕಪೂರ್​ ಸಹೋದರಿ ಕರೀಷ್ಮಾ ಕಪೂರ್​ ಅವರು ಅನೇಕ ಸಿನಿಮಾಗಳಲ್ಲಿ ಅಕ್ಷಯ್​ ಕುಮಾರ್​ಗೆ ನಾಯಕಿ ಆಗಿದ್ದರು. ಬಳಿಕ ಅವರ ತಂಗಿ ಕರೀನಾ ಕಪೂರ್​ ಕೂಡ ಅಕ್ಷಯ್​ ಕುಮಾರ್​ಗೆ ನಾಯಕಿ ಆದರು. ‘ಅಕ್ಕನ ಜೊತೆ ರೊಮ್ಯಾನ್ಸ್​ ಮಾಡಿದ್ದ ಹೀರೋಗಳು ಜೊತೆ ನಾನು ನಟಿಸುವಾಗ ವಿಚಿತ್ರ ಎನಿಸುತ್ತದೆ’ ಎಂದು ಕರೀನಾ ಕಪೂರ್​ ಹೇಳಿದ್ದಾರೆ.ಅಕ್ಷಯ್​ ಕುಮಾರ್​ ಮತ್ತು ಕರೀನಾ ಕಪೂರ್​ ಖಾನ್​ ನಡುವೆ 13 ವರ್ಷಗಳ ವಯಸ್ಸಿನ ಅಂತರ ಇದೆ. ಕರೀಷ್ಮಾ ಕಪೂರ್​ ಮತ್ತು ಅಕ್ಷಯ್​ ಕುಮಾರ್​ ಜೋಡಿಯಾಗಿ ನಟಿಸುವಾಗ ಕರೀನಾ ಕಪೂರ್​ ಅವರು ಇನ್ನೂ ಚಿಕ್ಕ ಬಾಲಕಿ ಆಗಿದ್ದರು. ಶಾಲೆಯ ಯೂನಿಫಾರ್ಮ್​ ಧರಿಸಿ ಅವರು ಶೂಟಿಂಗ್​ ನೋಡಲು ಹೋಗುತ್ತಿದ್ದರು. ನಂತರ ಅದೇ ಕರೀನಾ ಕಪೂರ್​ ಜೊತೆ ಅಕ್ಷಯ್​ ಕುಮಾರ್​ ಜೋಡಿಯಾಗಿ ನಟಿಸಿದರು. ಇನ್ನೂ ಹಲವು ವರ್ಷಗಳ ಕಾಲ ಅವರು ಹೀರೋ ಆಗಿಯೇ ಮಿಂಚುತ್ತಾರೆ. 75ನೇ ವಯಸ್ಸಿನಲ್ಲೂ ಅವರು ಹೀರೋ ಪಾತ್ರ ಮಾಡುತ್ತಾರೆ ಎಂಬುದು ಕರೀನಾ ಕಪೂರ್​ ಅನಿಸಿಕೆ. ‘ಅಕ್ಷಯ್ ಕುಮಾರ್​ ಈಗಾಗಲೇ ತೈಮೂರ್​ ಜೊತೆ ಹೀರೋ ಆಗಿ ನಟಿಸಲು ಪ್ಲ್ಯಾನ್​ ಮಾಡಿದ್ದಾರೆ. ಈ ಬಗ್ಗೆ ನನಗೆ ಹೇಳಿದ್ದಾರೆ’ ಎಂದು ಕರೀನಾ ಕಪೂರ್​ ತಮಾಷೆ ಮಾಡಿದ್ದಾರೆ. ಸದ್ಯ ಈ ವಿಚಾರ ಅಭಿಮಾನಿಗಳ ವಲಯದಲ್ಲಿ ಚರ್ಚೆ ಆಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೌಭಾಗ್ಯದ ಸಂಕೇತ ಹಸಿರು ಗಾಜಿನ ಬಳೆ

Wed Feb 2 , 2022
  ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಹಸಿರು ಗಾಜಿನ ಬಳೆಗಳ ಸ್ಥಾನವನ್ನು ಕೃತಕ ಆಭರಣಗಳು ಆಕ್ರಮಿಸಿಕೊಂಡಿವೆ. ಬಳೆಯು ಇಲ್ಲಿನ ಸಂಸ್ಕೃತಿ, ಧಾರ್ಮಿಕ ಆಚರಣೆಯೊಂದಿಗೆ ಬೆರೆತು ಹೋಗಿದೆ. ಇದರ ಬಳಕೆಯಲ್ಲಿ ಧರ್ಮ ಭೇದವಿಲ್ಲ. ಎಲ್ಲಾ ಧರ್ಮದ ಮಹಿಳೆಯರು ಕೈತುಂಬ ಬಳೆ ಧರಿಸಿ ಸಂಭ್ರಮಿಸುತ್ತಾರೆ.ವಿಶೇಷ ಕಾರ್ಯಕ್ರಮಗಳಾದ ಮದುವೆ, ಸೀಮಂತ, ಹಬ್ಬ ಹರಿದಿನಗಳಲ್ಲಿ ಚಿನ್ನ, ಗಾಜು, ಪ್ಲಾಸ್ಟಿಕ್ ಬಳೆಗಳು ಮಹಿಳೆಯರ ಕೈಯನ್ನು ಅಲಂಕರಿಸುತ್ತವೆ. ಹಿಂದೂ ಧರ್ಮದ ಹಾಗೂ ಬಳೆಯ ನಡುವೆ ಅವಿನಾಭಾವ ಸಂಬಂಧವಿದೆ. ಇಲ್ಲಿ ಬಳೆ […]

Advertisement

Wordpress Social Share Plugin powered by Ultimatelysocial