ನಾಡಿನಾದ್ಯಂತ ಹೋಳಿ ಹಬ್ಬದ ಸಂಭ್ರಮ ಕಳೆಗಟ್ಟಿದೆ.

ಹುಬ್ಬಳ್ಳಿ, ಮಾರ್ಚ್ 10: ನಾಡಿನಾದ್ಯಂತ ಹೋಳಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಇತ್ತ ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಮುಂದಾದ ಹುಬ್ಬಳ್ಳಿ ಜನತೆ ಬಣ್ಣದೋಕುಳಿಯಲ್ಲಿ ಮಿಂದೇಳುವ ಮುನ್ನವೇ ವಾಣಿಜ್ಯ ನಗರಿಯಲ್ಲಿ ಜಗ್ಗಲಗಿ ಹಬ್ಬ ಸಂಭ್ರಮದಿಂದ ಜರುಗಿದೆ.

ಗಂಡು ಮೆಟ್ಟಿದ ನಾಡಿನಲ್ಲಿ ಗಂಡು ಮಕ್ಕಳ ಹಬ್ಬ ಎಂದೇ ಜಗ್ಗಲಗಿ ಹಬ್ಬ ವಿಶಿಷ್ಟತೆ ಪಡೆದುಕೊಂಡಿದೆ. ಪ್ರತಿ ವರ್ಷದಂತೆ ಈ ವರ್ಷವು ಹೋಳಿ ಹಬ್ಬದ ಸಂಭ್ರಮ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವಿಶಿಷ್ಟ ರೀತಿಯಲ್ಲಿ ಆರಂಭವಾಗಿದೆ. ಹೋಳಿ ಹಬ್ಬದ ಪ್ರಯುಕ್ತವಾಗಿ ಆಯೋಜಿಸಲಾಗಿದ್ದ ಹುಬ್ಬಳ್ಳಿಯ ಜಗ್ಗಲಗಿ ಹಬ್ಬ ವಿನೂತನ ರೀತಿಯಲ್ಲಿ ಝಗಮಗಿಸಿತು.

ಈ ವರ್ಷವೂ ಕೂಡ ಗಂಡುಮೆಟ್ಟಿನ ನಾಡು ಎಂದೆ ಖ್ಯಾತಿ ಪಡೆದ ಹುಬ್ಬಳ್ಳಿಯಲ್ಲಿ ಜಗ್ಗಲಿಗೆ ಹಬ್ಬವು ವಿಶಿಷ್ಟ ಹಾಗೂ ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು. 2016ರಿಂದ ಪ್ರಾರಂಭಗೊಂಡಿರುವ ಜಗ್ಗಲಗಿ ಹಬ್ಬಕ್ಕೆ ಧಾರವಾಡ ಜಿಲ್ಲೆಯ ವಿವಿಧ ಭಾಗಗಳಿಂದ ಕಲಾವಿದರು ಆಗಮಿಸಿ ಜಗ್ಗಲಗಿ ಹಬ್ಬಕ್ಕೆ ಮೆರುಗು ನೀಡಿದರು. ಮೂರು ಸಾವಿರ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಜಗ್ಗಲಗ್ಗಿ ಹಬ್ಬಕ್ಕೆ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ ಸ್ವಾಮೀಜಿಗಳು ಚಾಲನೆ ನೀಡಿದರು.

ಮೂರುಸಾವಿರ ಮಠದಿಂದ ಪ್ರಾರಂಭಗೊಂಡ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಜಗ್ಗಲಗಿ ಹಬ್ಬ ವಿಶಿಷ್ಟ ರೀತಿಯಲ್ಲಿ ಜರುಗಿತು.ಇನ್ನೂ ಮೆರವಣಿಗೆ ಉದ್ದಕ್ಕೂ ಬ್ಯಾಹಟ್ಟಿ, ರಾಯನಾಳ, ಹುಬ್ಬಳ್ಳಿ, ಕುಸುಗಲ್, ಕಮಡೊಳ್ಳಿ, ಬೆಳಗಾವಿ ಜಿಲ್ಲೆಯ ಜಗ್ಗಲಗಿ ತಂಡದ ಮಹಿಳಾ ಹಾಗೂ ಪುರುಷ ಕಲಾವಿದರು ಕೂಡ ತಮ್ಮ ಜಗ್ಗಲಗಿ ಹಾಗೂ ಹಲಿಗೆ ವಾದನದಿಂದ ಜಗ್ಗಲಗಿ ಹಬ್ಬದ ಕಳೆಯನ್ನು ಚಿಗುರೊಡೆಯುವಂತೆ ಮಾಡಿದ್ದು, ಸಾರ್ವಜನಿಕರನ್ನು ಮನಸೂರೆಗೊಳ್ಳುವಂತೆ ಮಾಡಿತು.

ಮೆರವಣಿಗೆಯುದ್ದಕ್ಕೂ ಕಲಾವಿದರು ತಾಳಬದ್ದವಾಗಿ ಹಲಗೆ ಬಾರಿಸುತ್ತಾ ಕುಣಿದು ಸಂಭ್ರಮಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನರು ಕನ್ನಡ ನಾಡಿನ ಕಲೆಯನ್ನು ಕಣ್ತುಂಬಿಕೊಂಡರು, ಹಾನಗಲ್ಲಿನ ಬೇಡರ ವೇಷ ತಂಡ ಎಲ್ಲರ ಗಮನ‌ ಸೆಳೆಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಹಾವೇರಿ ಹುಕ್ಕೇರಿ ಮಠದ ಸ್ವಾಮೀಜಿ, ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ ಸ್ವಾಮೀಜಿಯವರು, ಹುಬ್ಬಳ್ಳಿಯ ಜಗ್ಗಲಗಿ ಹಬ್ಬ ಜಗತ್ತಿನಾದ್ಯಂತ ಝಗಮಗಿಸಲಿ ಹುಬ್ಬಳ್ಳಿ ಜಗ್ಗಲಗಿ ಹಬ್ಬ ಕರ್ನಾಟಕದ ರಾಜ್ಯದ ಹಬ್ಬವಾಗಲಿ ಎಂದು ಆಶಿಸಿದರೆ, ಹುಬ್ಬಳ್ಳಿಯಲ್ಲಿ ಇಂದು ನಡೆಯುವ ಬಣ್ಣದೊಕುಳಿಗೆ ಜಗ್ಗಲಿಗಿ ಹಬ್ಬ ಕಿಕ್ಕೇರಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂತ್ಯಗೊಂಡ ಆಪರೇಷನ್ ಮದರ್ ಟೈಗರ್: ನಾಪತ್ತೆಯಾದ ತಾಯಿ ಹುಲಿ!

Fri Mar 10 , 2023
92 ಗಂಟೆಗಳ ಪ್ರಯತ್ನ ವ್ಯರ್ಥವಾಗಿ ಕರುಳಿನ ಸಂಪರ್ಕ ಕಡಿತಗೊಂಡಿದೆ. ನಾಲ್ಕು ಹುಲಿ ಮರಿಗಳು ತಮ್ಮ ತಾಯಿಯನ್ನು ಶಾಶ್ವತವಾಗಿ ಕಳೆದುಕೊಂಡಿವೆ. ನಂದ್ಯಾಲ ಜಿಲ್ಲೆಯ ಪೆದ್ದಗುಮ್ಮದಾಪುರದಲ್ಲಿ ಆಪರೇಷನ್ ಮದರ್ ಟೈಗರ್ ಅಂತ್ಯಗೊಂಡಿದೆ. ಅರಣ್ಯಾಧಿಕಾರಿಗಳು ಎಷ್ಟೇ ಪ್ರಯತ್ನ ಪಟ್ಟರೂ ಟಿ-108 ಹುಲಿ ಪತ್ತೆಯಾಗಿಲ್ಲ. ಇದರೊಂದಿಗೆ 4 ಹುಲಿ ಮರಿಗಳನ್ನು ತಿರುಪತಿ ಮೃಗಾಲಯಕ್ಕೆ ಸ್ಥಳಾಂತರಿಸಲು ಅಧಿಕಾರಿಗಳು ಸಿದ್ಧವಾಗಿದ್ದಾರೆ. ಇಂದು ತಡರಾತ್ರಿ ತಿರುಪತಿ ಶ್ರೀ ವೆಂಕಟೇಶ್ವರ ಮೃಗಾಲಯಕ್ಕೆ ಸ್ಥಳಾಂತರಿಸಲಾಗುವುದು. 4 ದಿನಗಳ ಕಾಲ ಹುಡುಕಾಟ ನಡೆಸಿದರೂ ತಾಯಿ […]

Advertisement

Wordpress Social Share Plugin powered by Ultimatelysocial