ತಿರುಪ್ಪಾವೈ 25

ತಿರುಪ್ಪಾವೈ 25
ದೇವಕೀ ಕಂದನಾಗಿ ಜನಿಸಿ ನಂದಯಶೋದೆಯರ ಕಣ್ಮಣಿಯಾಗಿ ಬೆಳೆದೆ
Thiruppavai 25
ಒರುತ್ತಿ ಮಹನಾಯ್ ಪ್ಪಿರಂದೋರಿರವಿಲ್
ಒರುತ್ತಿ ಮಹನಾ ವಳಿತ್ತು ವಳರ ತರಿಕ್ಕಿಲಾನಾಹಿತ್ತಾನ್ ತೀಂಗು ನಿನೈಂತ ಕರುತ್ತೈ ಪಿಳ್ಳೆಪ್ಪಿತ್ತು ಕಂಜನ್ ವಯಿತ್ತಿಲ್ ನೆರುಪ್ಪೆನ್ನ ನಿನ್ರ ನೆಡುಮಾಲೆ ಮುನ್ನೈ ಆರುತ್ತಿತ್ತು ವಂದೋಂ ಪರೆ ತರುದಿಮಾಗಿಲ್
ತಿರುತ್ತಕ್ಕ ಶೆಲ್ವಮುಂ ಶೇವಕಮುಂ ಯಾಮ್ ಪಾಡಿ
ವರುತ್ತಮಂ ತೀರ್‌ನ್ದು
ಮಹಿಳ್ನ್ದೇಲೋರೆಂಬಾವಾಯ್
ಭಾವಾನುವಾದ 25
ಅಣ್ಣ ದುರ್ಗೆಗೆ ನೀನತಿಶಯದಿ ಇರಲು ಬಲಭದ್ರ ನಿನಗಣ್ಣನಾಗಿ
ಬೆಳೆದೆ ನೀ ಗೋಕುಲದಿ ನಂದನಂದನನಾಗಿ ದೇವಕೀತನಯ
ಹಚ್ಚಿ ಕಿಚ್ಚನು ಕಂಸನೆದೆಯಲ್ಲಿ ಕೊಂದೆ ನೀನಸುರರನು ಅನಿರುದ್ದನೇ ಪಾಡಲಳವೇ ನಿನ್ನನಂತ ಗುಣಗಾನ ಸಿರಿಗೋದೆಯರಸನೇ ಗೋಪಾಲ
ಸನಕ ಸನಂದಾದಿ ಮುನಿವಂದಿತಾ ಚರಣ ತಿರು ಶೆಲ್ವ ನಾರಾಯಣನೆ
ಪಾಲ್ಗೆಣ್ಣೆ ಕದ್ದ ಮುದ್ದು ಶಿಶು ನೀ ಮಾತೆ ಯಶೋದೆಗೆ ಗೋಕುಲದಿ
ಅಮರ ವಂದಿತಾ ಚರಣ ನೀ ಕಂದ ಮಾತೆ ದೇವಕಿಗೆ
ನಿನ್ನ ಸಿರಿಪಾದ ತೊರೆಮಗೆ ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ
ಮುಂಬೆಳಕು
ಸಂಕ್ಷಿಪ್ತ ಭಾವಾರ್ಥ 25
ಹೇ ಅನಂತಶಯನ, ನಿನ್ನನ್ನು ಅರ್ಥಮಾಡಿಕೊಳ್ಳಲು ಯಾರಿಗೆ ತಾನೇ ಸಾಧ್ಯ? ಭಯಂಕರವಾಗಿ ಮಳೆಯು ಸುರಿಯುತ್ತಿದ್ದ ನಟ್ಟನಡುರಾತ್ರಿ ದೇವಕೀ ಕಂದನಾಗಿ ಲೋಕ ಕಲ್ಯಾಣಕ್ಕಾಗಿ ಸೆರೆಮನೆಯಲ್ಲಿ ಜನಿಸಿದೆ. ಗೋಕುಲದಲ್ಲಿ ನಂದಯಶೋದೆಯರ ಕಣ್ಮಣಿಯಾಗಿ ಬೆಳೆದೆ.
ದುರ್ಗೆಯು ನಿನಗೆ ತಂಗಿಯಾಗಿ, ಅನಂತನೇ ನಿನಗೆ ಅಣ್ಣನಾಗಿ ಜನ್ಮವೆತ್ತಿ ಬಂದು ನಿನಗೆ ಧರ್ಮ ಸಂಸ್ಥಾಪನೆಯ ಕೆಲಸದಲ್ಲಿ ನೆರವಾಗಿದ್ದಾರೆ. ನೀನು ಕಂಸನ ಎಲ್ಲ ರಾಕ್ಷಸ ಸೇವಕರನ್ನೂ ಸಂಹರಿಸಿ ಪವಾಡಗಳ ಶಿಶುವಾಗಿ ಕಂಸನ ಎದೆಯಲ್ಲಿ ನಡುಕವನ್ನುಂಟುಮಾಡಿ, ನಿನ್ನ ಬಾಲ ಲೀಲಾ ವಿನೋದಗಳಿಂದ ಜಗತ್ತನ್ನೇ ಅಚ್ಚರಿಗೊಳಿಸಿದೆ. ನೀನು ವರ್ಣನಾತೀತ.
ನೋಡು ಸುರಲೋಕದಿಂದ ಸುರರೆಲ್ಲ ನಾರದರೊಡಗೂಡಿ ನಿನ್ನ ಧ್ಯಾನದಲ್ಲಿ ಲೀನರಾಗಿ ನಿಂತಿದ್ದಾರೆ. ಹೇ ಅಚ್ಯುತ, ಅನಂತ, ಅನಂತಾನಂತ, ನೀನು ಕಂದ ಮಾತೆ ದೇವಕಿಗೆ, ಪಾಲೈಣ್ಣೆ ಕದ್ದ ಕಳ್ಳ ಕೃಷ್ಣ ನೀ ಮಾತೆ ಯಶೋದೆಗೆ, ಎಂತಹ ಲೀಲಾ ವಿನೋದಿ ನೀನು!
ಸಕಲ ಚರಾಚರಕ್ಕೂ ನೀನೇ ಸೂತ್ರಧಾರನಾಗಿದ್ದೀಯ. ನಿನ್ನನ್ನೇ ನಂಬಿ ನಾವುಗಳು ವ್ರತವನ್ನಾಚರಿಸಿ ಬಂದಿದ್ದೇವೆ. ನೀನು ನಮಗೆ ಪ್ರೇಮದಿಂದ ಇಹಪರ ಸಾಧನೆಯ ವರಗಳನ್ನು ಕೊಟ್ಟು ಸಲಹು. ನಮ್ಮನ್ನು ಜೀವನ್ಮುಕ್ತರನ್ನಾಗಿಸು.
ಇದರಿಂದ ನಮ್ಮವ್ರತವೂ ಈಡೇರಿ ಸಮಸ್ತಲೋಕಕ್ಕೂ ಮಂಗಳವಾಗಲಿ.
ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

5 ಮಹಿಳಾ ಕೇಂದ್ರಿತ ಪ್ರದರ್ಶನಗಳನ್ನು ವೀಕ್ಷಿಸಲು ಸ್ಪೂರ್ತಿದಾಯಕ!

Tue Mar 8 , 2022
ನಾವು ನೋಡುವ ಚಲನಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿನ ಇಂದಿನ ಮಹಿಳೆಯರು ತಮ್ಮ ನೈಜ-ಜೀವನದ ಪ್ರತಿರೂಪಗಳಂತೆ, ದೃಢನಿರ್ಧಾರ ಮತ್ತು ಜಗತ್ತನ್ನು ಸ್ವಾಧೀನಪಡಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಅವರು ಉತ್ತಮ ವ್ಯಕ್ತಿಯಾಗಲು ಮತ್ತು ಉತ್ತಮ ನಾಳೆಗಾಗಿ ಕೆಲಸ ಮಾಡಲು ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಸಬಲಗೊಳಿಸುತ್ತಾರೆ, ಪ್ರೋತ್ಸಾಹಿಸುತ್ತಾರೆ ಮತ್ತು ಪ್ರೇರೇಪಿಸುತ್ತಾರೆ. ಮಾರ್ಚ್ 8 ರಂದು ವಿಶ್ವವು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಸಜ್ಜಾಗುತ್ತಿರುವಾಗ, ಪ್ರತಿಯೊಬ್ಬರನ್ನು ಪ್ರೇರೇಪಿಸುವ ಕೆಲವು ಮಹಿಳಾ ನೇತೃತ್ವದ ಪ್ರದರ್ಶನಗಳನ್ನು ವೀಕ್ಷಿಸುವುದಕ್ಕಿಂತ ಉತ್ತಮವಾದದ್ದೇನೂ ಇರಲಾರದು. ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ […]

Advertisement

Wordpress Social Share Plugin powered by Ultimatelysocial