ಕಾರಿನ‌ ಬಾನೆಟ್ ಮೇಲೆ ಪೊಲೀಸ್ ಬಿದ್ದರೂ ಲೆಕ್ಕಿಸದೆ ಎಳೆದೊಯ್ದ ಚಾಲಕ

ಸಿಗ್ನಲ್ ಜಂಪ್ ಮಾಡಿದ ವ್ಯಕ್ತಿ ಪೊಲೀಸರ ಕೈಗೆ ಸಿಕ್ಕಿ ಬೀಳದೇ ತಪ್ಪಿಸಿಕೊಳ್ಳಲು ಸಂಚಾರಿ ಪೊಲೀಸ್ ಸಿಬ್ಬಂದಿಯನ್ನು ಒಂದೂವರೆ ಕಿಲೋ ಮೀಟರ್ ಗುದ್ದಿಕೊಂಡು ಹೋದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ಪಾಲ್ಘರ್ ಜಿಲ್ಲೆಯ ವಸಾಯಿಯಲ್ಲಿ ಸಿಗ್ನಲ್ ಜಂಪ್ ಮಾಡಿದ ನಂತರ ಚಾಲಕ ನಿಲ್ಲಿಸದೇ ಪರಾರಿಯಾಗಲು ಪ್ರಯತ್ನಿಸಿದ್ದ.

ಜನರು ಪೋಲೀಸ್ ರಕ್ಷಣೆಗೆ ಬಂದು, ಆ ಚಾಲಕನನ್ನು ಹಿಡಿದಾಗ ಹತ್ತೊಂಬತ್ತು ವರ್ಷದ ಆರೋಪಿಯು ಚಾಲನಾ ಪರವಾನಗಿಯನ್ನು ಹೊಂದಿರಲಿಲ್ಲ ಎಂಬುದು ಕಂಡುಬಂದಿದೆ.

ಟ್ರಾಫಿಕ್ ಪೊಲೀಸ್ ಸಿಬ್ಬಂದಿ ವಾಹನ‌ ನಿಲ್ಲಿಸಿ ವಿಚಾರಿಸಲು ಮುಂದಾಗುತ್ತಿದ್ದಂತೆ ಆ ಚಾಲಕ ವಾಹನ ಮುಂದೆ ಚಲಾಯಿಸಿದ್ದು, ಪೊಲೀಸ್ ಬಾನೆಟ್ ಮೇಲೆ ಬಿದ್ದಿದ್ದು, ಹಾಗೆಯೇ ಸುಮಾರು 1.5 ಕಿಮೀ ಎಳೆದೊಯ್ದಿದ್ದಾನೆ.

ಕಾರಿಗೆ ಉತ್ತರ ಪ್ರದೇಶದ ನಂಬರ್ ಪ್ಲೇಟ್ ಇತ್ತು ಮತ್ತು ಸಿಗ್ನಲ್ ಜಂಪ್ ಮಾಡಿದಾಗ, ಟ್ರಾಫಿಕ್ ಪೊಲೀಸ್ ಕಾನ್‌ಸ್ಟೆಬಲ್ ಆತನನ್ನು ನಿಲ್ಲಿಸಲು ಹೇಳಿದ್ದರು. ಪ್ರಕರಣ ದಾಖಲಾಗಿದ್ದು, ಚಾಲಕನ ವಿರುದ್ಧ ಕ್ರಮಕೈಗೊಳ್ಳಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತೇಜಸ್ವಿ ಸೂರ್ಯ ಮಾತಿಗೆ ಸಿದ್ದರಾಮಯ್ಯ ಪ್ರತಿಕ್ರಿಯೆ

Tue Feb 14 , 2023
ವಿಧಾನಸಭೆ:ರೈತರ ಸಾಲ ಮನ್ನಾ ಮಾಡುವುದು ಆರ್ಥಿಕತೆಗೆ ನಷ್ಟ ಎಂದಾದರೆ ಉದ್ಯಮಿಗಳ ಲಕ್ಷಾಂತರ ಕೋಟಿ ರೂ. ಮನ್ನಾ ಮಾಡುವುದು ಲಾಭಕವೇ ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾತಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ವಿಧಾನಸಭೆಯಲ್ಲಿ  ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಯ ವೇಳೆ ಭಾಗವಹಿಸಿದ ಸಿದ್ದರಾಮಯ್ಯ, ರಾಜ್ಯಪಾಲರ ಭಾಷಣವು ಸುಳ್ಳುಗಳಿಂದ ತುಂಬಿದೆ ಎಂದರು. ರಾಜ್ಯಪಾಲರು ಈ ತಿಂಗಳ 10ರಂದು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಸುಮಾರು 82 […]

Advertisement

Wordpress Social Share Plugin powered by Ultimatelysocial