ವಿಶ್ವದ ಅತ್ಯಂತ ದುಬಾರಿ ತರಕಾರಿ .

ದಿನೇ ದಿನೇ ತರಕಾರಿ ಬೆಲೆ ಗಗನಕ್ಕೇರುತ್ತಿದೆ. ಮಾರ್ಕೆಟ್‌ನಲ್ಲಿ ಎಲ್ಲಾ ತರಕಾರಿಗಳು ತನ್ನ ಬೆಲೆಯನ್ನು ಏರಿಸಿಕೊಂಡಿದೆ. ಗ್ರಾಹಕರಿಗೆ ಯಾವ ತರಕಾರಿಯನ್ನು ಆರಿಸಿಕೊಳ್ಳೋದು ಎಂಬ ತಲೆನೋವು ಹೆಚ್ಚಾಗಿದೆ. ಅಂತದ್ರಲ್ಲಿ ವಿಶ್ವದ ದುಬಾರಿ ತರಾಕಾರಿ ಯಾವುದು ಎಂಬುದು ನಿಮಗೆ ಗೊತ್ತಿದ್ಯಾ?ಇದು ಅಂತಿಂತಾ ತರಕಾರಿಯಲ್ಲ ಇದರ ಬೆಲೆ ಕೆ.ಜಿಗೆ 85,000. ಸಾಮಾನ್ಯ ಜನರಂತೂ ಇದನ್ನು ಖರೀದಿಸೋದಕ್ಕೆ ಸಾಧ್ಯಾನೇ ಇಲ್ಲ ಬಿಡಿ. ಅಷ್ಟಕ್ಕು ಯಾವುದು ಈ ದುಬಾರಿ ತರಕಾರಿ? ಅಷ್ಟಕ್ಕು ಈ ತರಕಾರಿ ಅಷ್ಟೊಂದು ದುಬಾರಿ ಯಾಕೆ? ಈ ತರಕಾರಿಯಿಂದ ಆಗುವ ಆರೋಗ್ಯಕರ ಲಾಭಗಳು ಯಾವುದು ಅನ್ನೋದನ್ನ ನೋಡೋಣ.ಭಾರತದಲ್ಲೂ ಇದನ್ನು ಬೆಳೆಯಲಾಗುತ್ತಿತ್ತುಈ ತರಕಾರಿಯ ಹೆಸರು ಹಾಪ್‌ ಶೂಟ್ಸ್‌. ನೋಡೋದಕ್ಕೆ ಹಸಿರು ಬಣ್ಣದಲ್ಲಿ ಇದ್ದು ಎಲೆಯ ತರಹ ಕಾಣಿಸುತ್ತದೆ. ಭಾರತದಲ್ಲಿ ಮೊದಲ ಬಾರಿಗೆ ಹಿಮಾಚಲ ಪ್ರದೇಶದಲ್ಲಿ ಇದನ್ನು ಬೆಳೆಯಲಾಯಿತು. ಬಿಹಾರ ಮೂಲದ ಅರ್ನೇಶ್‌ ಸಿಂಗ್‌ ಎಂಬ ರೈತ ಈ ತರಕಾರಿಯನ್ನು ಬೆಳೆದಿದ್ದರು. ಆದ್ರೆ ಇದರ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದರಿಂದ ಸದ್ಯ ಬೆಳೆಯಲಾಗುತ್ತಿಲ್ಲ.ಹಾಪ್‌ ಶೂಟ್ಸ್‌ ಅಷ್ಟೊಂದು ದುಬಾರಿ ಯಾಕೆ?ಹಾಪ್‌ ಶೂಟ್ಸ್‌ನ ವೈಜ್ಞಾನಿಕ ಹೆಸರು ಹ್ಯೂಮಿಲಸ್‌ ಲುಪುಲಸ್‌ ಇದು ದೀರ್ಘಕಾಲಿಕ ಆರೋಹಿ ಸಸ್ಯಗಳ ಗುಂಪಿಗೆ ಸೇರಿದೆ. ಇದರ ಬೆಳೆ ರೈತನ ಕೈ ಸೇರಬೇಕಾದರೆ ಬರೋಬ್ಬರಿ ಮೂರು ವರ್ಷಗಳು ಬೇಕು. ಈ ಸಸ್ಯಗಳ ಎಲೆಯನ್ನು ಹಾಪ್‌ ಕೋನ್ಸ್‌ ಎಂದು ಕರೆಯಲಾಗುತ್ತದೆ. ವಿಶೇಷ ಅಂದ್ರೆ ಇದನ್ನು ಬಿಯರ್‌ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.ಹಾಪ್‌ ಶೂಟ್ಸ್‌ನ ಆರೋಗ್ಯಕರ ಉಪಯೋಗಗಳುವಿಟಮಿನ್ ಇ, ಬಿ 6 ಮತ್ತು ಸಿಯು ಹಾಪ್‌ ಶೂಟ್ಸ್‌ ತರಕಾರಿಯಲ್ಲಿ ಸಮೃದ್ಧವಾಗಿದೆ. ಮತ್ತು ಅಪಾರವಾದ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಈ ತರಕಾರಿಯು ಉರಿಯೂತಕ್ಕೆ ಪರಿಣಾಮಕಾರಿಯಾಗಿದೆ ಮತ್ತು ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ. ಈ ತರಕಾರಿಯು ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿರುವುದರಿಂದ ಮಾರ್ಕೆಟ್‌ನಲ್ಲಿ ಇದಕ್ಕೆ ತುಂಬಾನೇ ಬೇಡಿಕೆ ಇದೆ.1. ಕ್ಷಯರೋಗಕ್ಕೆ ಪರಿಣಾಮಕಾರಿಹಾಪ್‌ ಶೂಟ್ಸ್‌ ಕ್ಷಯರೋಗದ ವಿರುದ್ಧ ನಮ್ಮ ದೇಹದಲ್ಲಿ ಪ್ರತಿಕಾಯಗಳನ್ನು ಸೃಷ್ಟಿಸುತ್ತದೆ. ಕ್ಷಯವು ಒಂದು ಗಂಭೀರ ಸಾಂಕ್ರಾಮಿಕ ಕಾಯಿಲೆಯಾಗಿದ್ದು ,ಅದು ಮುಖ್ಯವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಈ ತರಕಾರಿಯಲ್ಲಿ ಬ್ಯಾಕ್ಟೀರಿಯಾ ಹರಡುವುದನ್ನು ತಡೆಯುವ ಪ್ರತಿರಕ್ಷಣಾ ವ್ಯವಸ್ಥೆಯಿದೆ.2. ನಿದ್ರಾಹೀನತೆ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗೆ ಚಿಕಿತ್ಸೆ ನೀಡಲುನಿದ್ರಾಹೀನತೆ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಹಾಪ್‌ಶೂಟ್ಸ್‌ ತರಕಾರಿ ಸಹಾಯಕಾರಿಯಾಗಿದೆ. ನಿದ್ರಾಹೀನತೆ, ಉದ್ವೇಗ, ಒತ್ತಡ ಮತ್ತು ಆತಂಕ ಹಲವು ಕಾರಣಗಳಿಂದ ಉಂಟಾಗುವ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ತರಕಾರಿ ಸಹಕಾರಿಯಾಗಿದೆ. ತಜ್ಞರ ಪ್ರಕಾರ ಹಾಪ್ಸ್‌ನ ಒಣಗಿದ ಹೂವುಗಳನ್ನು ಆತಂಕವನ್ನು ಕಡಿಮೆ ಮಾಡುವ ಔಷಧಿಗಳಲ್ಲಿ ಬಳಸಲಾಗುತ್ತದೆ.3. ಚರ್ಮವನ್ನು ಕಾಂತಿಯುತಗೊಳಿಸುತ್ತದೆಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸುತ್ತಾರೆ. ತ್ವಚೆಯ ಸೌಂದರ್ಯವನ್ನು ಹೆಚ್ಚು ಮಾಡಲು ಬಳಸಲಾಗುತ್ತದೆ. ಇದರ ಹೂವುಗಳು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ. ಚರ್ಮವು ಕಾಂತಿಯುತ ಮತ್ತು ಯೌವನದ ಹೊಳಪನ್ನು ಪಡೆಯಲು ಸಹಾಯ ಮಾಡುತ್ತದೆ. ಸುಕ್ಕು, ಮೊಡವೆ, ಕಲೆಗಳು, ಚರ್ಮದ ತೇಪೆಗಳು ಮುಂತಾದ ಸಮಸ್ಯೆಗಳ ವಿರುದ್ಧ ರಕ್ಷಣೆ ನೀಡುತ್ತದೆ.4. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆಹಾಪ್‌ಶೂಟ್ಸ್‌ ತರಕಾರಿ ಜೀರ್ಣಕ್ರಿಯೆಗೆ ಸಹಾಯಕಾರಿಯಾಗಿದೆ. ದೇಹದೊಳಗೆ ಚಯಾಪಚಯ ಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ. ಮಲಬದ್ಧತೆಯಂತಹ ಸಮಸ್ಯೆ ನಿವಾರಣೆಯಾಗುತ್ತದೆ.5. ಪುರುಷರಲ್ಲಿ ಲೈಂಗಿಕ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆಹಾಪ್‌ಶೂಟ್ಸ್‌ ತರಕಾರಿಯು ಗಿಡಮೂಲಿಕೆಗಳ ಸಾರಭೂತ ತೈಲಗಳನ್ನು ಹೊಂದಿದೆ. ಅದು ಪುರುಷರಲ್ಲಿ ಲೈಂಗಿಕ ಸಾಮರ್ಥ್ಯವನ್ನು ಸುಧಾರಿಸಲು ಮತ್ತು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಅಕಾಲಿಕ ಸ್ಖಲನಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.ಹಣ್ಣು ದುಬಾರಿಯಾದರೂ ಇದರಿಂದ ಹತ್ತು ಹಲವು ಆರೋಗ್ಯಕಾರಿ ಪ್ರಯೋಜನೆಗಳಿದೆ. ಆದ್ರೂ ಬಡ-ಮಧ್ಯಮವರ್ಗದ ಜನರಿಗೆ ಇದು ಕೈಗೆಟುಕದ ಹುಳಿ ದ್ರಾಕ್ಷಿ ಹಣ್ಣೇ ಸರಿ.ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಇಂಟರ್ನೆಟ್‌ನಲ್ಲಿ ಲಭ್ಯವಾಗಿದ್ದು, ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದೆ. ನೀವು ಈ ಹಣ್ಣನ್ನು ಉಪಯೋಗಿಸುವ ಮೊದಲು ತಜ್ಞ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ರೋಸ್ ವಾಟರ್ ಬಳಕೆಯಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನ...!

Sun Feb 26 , 2023
ಗುಲಾಬಿ ಜಲ ಅಥವಾ ಪನ್ನೀರು ಸಾವಿರಾರು ವರ್ಷಗಳಿಂದ ಬಳಕೆಯಲ್ಲಿದೆ. ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.ಇದು ಉರಿಯೂತದ ಕಿರಿಕಿರಿಯನ್ನು ಶಮನಗೊಳಿಸುತ್ತದೆ. ಇದು ಮೊಡವೆ, ಚರ್ಮದ ಮೇಲಿನ ಗುಳ್ಳೆ ಹಾಗೂ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಸುಕ್ಕು ಮತ್ತು ಗೆರೆಗಳನ್ನು ಕಡಿಮೆ ಮಾಡುತ್ತದೆ. ಒತ್ತಡ, ತಲೆನೋವು ಮತ್ತು ಮೈಗ್ರೇನ್ ನಂಥ ಕಾಯಿಲೆಗಳಿವೆ ಔಷಧಿಯಾಗಿ ಇದನ್ನು ಬಳಸಲಾಗುತ್ತದೆ.ಅರೋಮಾಥೆರಪಿಯಲ್ಲಿ ತಲೆನೋವಿಗೆ ಚಿಕಿತ್ಸೆ ಕೊಡಲು ಇದನ್ನು ಬಳಸುತ್ತಾರೆ. ಬಟ್ಟೆಯನ್ನು ರೋಸ್ ವಾಟರ್ ನಿಂದ ಒದ್ದೆ ಮಾಡಿ […]

Advertisement

Wordpress Social Share Plugin powered by Ultimatelysocial