ಕಳೆದ 8 ವರ್ಷಗಳಲ್ಲಿ ವಿಮಾನ ಯಾನ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗಿದ್ದು,

ವದೆಹಲಿ,ಜ.31- ಕಳೆದ 8 ವರ್ಷಗಳಲ್ಲಿ ವಿಮಾನ ಯಾನ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗಿದ್ದು, ಮುಂದಿನ ತಿಂಗಳ ವೇಳೆಗೆ ದೇಶದಲ್ಲಿ 148 ನೇ ವಿಮಾನ ನಿಲ್ದಾಣಗಳು ಕಾರ್ಯಾಚರಿಸಲಿವೆ ಎಂದು ಜೋತಿರಾತ್ಯ ಸಿಂಯಾ ಹೇಳಿದ್ದಾರೆ.

ಜಮೆಶ್ಡಪುರದಿಂದ ಕೋಲ್ಕತ್ತಾಗೆ ಪ್ರಾದೇಶಿಕ ಇಂಡಿಯಾ ಒನ್ ಏರ್ರ್‍ಲೈನ್ ಸೇವೆಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಮುಂದಿನ ತಿಂಗಳು ಕರ್ನಾಟಕದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಾಗುವುದನ್ನು ಪ್ರಸ್ತಾಪಿಸಿದರು.

ಕಳೆದ 20 ವರ್ಷಗಳಲ್ಲಿ ವಿಮಾನಯಾನ ಸಂಸ್ಥೆಗಳು ಮುಚ್ಚುವುದನ್ನೇ ನೋಡಲಾಗುತ್ತಿತ್ತು. ನಮ್ಮ ಸರ್ಕಾರ ಹೊಸ ಆಯಾಮ ನೀಡಿದೆ. ದೇಶದಲ್ಲಿ ಪ್ರಾದೇಶಿಕ ವಿಮಾನ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಈ ಮೂಲಕ ಸರಕು ಸಾಗಾಣಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಉಡೇ ದೇಶ್ ಕಾ ಅಮ್ ನಾಗರೀಕ್ (ಉಡಾನ್) ಯೋಜನೆಯಿಂದ ಪ್ರಾದೇಶಿಕವಾಗಿ ವಿಮಾನಯಾನ ಸೇವೆ ಒದಗಿಸಲು ಸ್ಟಾರ್ ಏರ್, ಇಂಡಿಯಾಒನ್‍ಏರ್, ಫ್ಲೈಬಿಗ್ ನಂತಹ ಸಂಸ್ಥೆಗಳು ಜನ್ಮ ತಳೆದಿವೆ. ಪ್ರಾದೇಶಿಕ ವಾಯು ಸಂಪರ್ಕ ಯೋಜನೆ ಕಳೆದ ಆರು ವರ್ಷಗಳಲ್ಲಿ ಸುಮಾರು 1.15 ಕೋಟಿ ಜನರ ಪ್ರಯಾಣಕ್ಕೆ ನೆರವು ನೀಡಿದೆ.

2013-14ರಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ 74 ಇತ್ತು. ಜೆಮ್ಶೆಡ್ಪುರದಿಂದ ವಿಮಾನ ಸೇವೆ ಪ್ರಾರಂಭವಾಗುವುದರೊಂದಿಗೆ ಅವುಗಳ ಸಂಖ್ಯೆ 147 ಕ್ಕೆ ಏರಿದೆ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತನ್ನ ಅಜ್ಜಿಯನ್ನೇ ಮನೆಯಿಂದ ಹೊರ ಹಾಕಿದ್ದ ಮೊಮ್ಮಗ.

Tue Jan 31 , 2023
ತನ್ನ ಅಜ್ಜಿಯನ್ನೇ ಮನೆಯಿಂದ ಹೊರ ಹಾಕಿದ್ದ ಮೊಮ್ಮಗ. ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಯ ಕಾರ್ಯದಿಂದ ಮರಳಿ ಮನೆ ಸೇರಿದ ಅಜ್ಜಿ. ಆಂಕರ್.. ಕೊರಟಗೆರೆ : ಪಟ್ಟಣದ ಮೂರನೇ ವಾರ್ಡಿನ ಕಾವಲಮ್ಮ ಎನ್ನುವ ವೃದ್ದೆಯನ್ನು ತನ್ನ ಮೊಮ್ಮಗನೇ ಮನೆಯಿಂದ ಹೊರ ಹಾಕಿದ್ದ ದಾರುಣ ಘಟನೆ ನಡೆದ ಹಿನ್ನೆಲೆ… ಮದುಗಿರಿ ಉಪ ವಿಭಾಗಾಧಿಕಾರಿಗಳ ಆದೇಶದಂತೆ ಕೊರಟಗೆರೆ ತಹಸಿಲ್ದಾರ್ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಿರಿಯ […]

Advertisement

Wordpress Social Share Plugin powered by Ultimatelysocial