ವ್ಯಕ್ತಿಯೋರ್ವನ ಆತ್ಮಹತ್ಯೆ ಯತ್ನವನ್ನು ಟ್ವಿಟರ್ ಮೂಲಕ ತಿಳಿದ ಪೊಲೀಸರು ಆತನ ಜೀವ ಉಳಿಸಿದರು.

ವ್ಯಕ್ತಿಯೋರ್ವನ ಆತ್ಮಹತ್ಯೆ ಯತ್ನವನ್ನು ಟ್ವಿಟರ್ ಮೂಲಕ ತಿಳಿದ ಪೊಲೀಸರು ಆತನ ಜೀವ ಉಳಿಸುವಲ್ಲಿ ಯಶಸ್ವಿಯಾಗಿರುವ ಘಟನೆ ಮುಂಬೈ ನಲ್ಲಿ ನಡೆದಿದೆ. ಮುಂಬೈ: ವ್ಯಕ್ತಿಯೋರ್ವನ ಆತ್ಮಹತ್ಯೆ ಯತ್ನವನ್ನು ಟ್ವಿಟರ್ ಮೂಲಕ ತಿಳಿದ ಪೊಲೀಸರು ಆತನ ಜೀವ ಉಳಿಸುವಲ್ಲಿ ಯಶಸ್ವಿಯಾಗಿರುವ ಘಟನೆ ಮುಂಬೈ ನಲ್ಲಿ ನಡೆದಿದೆ.
ತಾನು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿರುವುದಾಗಿ ವ್ಯಕ್ತಿಯೋರ್ವ ಟ್ವಿಟರ್ ನಲ್ಲಿ ಬರೆದುಕೊಂಡಿದ್ದ. ಇದನ್ನು ಗಮನಿಸಿದ ಪೊಲೀಸರು ಆತನಿಗೆ ಆಪ್ತ ಸಲಹೆ ನೀಡಿ ಮನಃಪರಿವರ್ತನೆ ಮಾಡಿದ್ದಾರೆ. ಕಡಲೆ ಮಿಠಾಯಿ ಮಾರುತ್ತಿದ್ದ, ಚೆಂಬೂರ್ ಬಳಿ ಇರುವ ಚುನಾಭಟ್ಟಿ ನಿವಾಸಿಯಾಗಿರುವ ವ್ಯಕ್ತಿಗೆ ನಷ್ಟ ಉಂಟಾಗಿ, ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದರು. ಟ್ವಿಟರ್ ನಲ್ಲಿ ಉದ್ದದ ಸಂದೇಶ ರವಾನಿಸಿದ್ದನ್ನು ಪೊಲೀಸರು ಗಮನಿಸಿದ್ದು, ಉದ್ಯಮ, ಇನ್ನಿತರ ಹಿನ್ನಡೆಗಳಿಂದ ತೀವ್ರವಾಗಿ ನೊಂದಿದ್ದ ಆತ, ಆತ್ಮಹತ್ಯೆಗೆ ನಿರ್ಧರಿಸಿದ್ದ.

ಕ್ರೈಮ್ ಬ್ರಾಂಚ್ ತಂಡ ಸೈಬರ್ ತಂಡಕ್ಕೆ ಮಾಹಿತಿ ರವಾನೆ ಮಾಡಿತ್ತು. ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಿ ಆತನನ್ನು ಸೈಬರ್ ವಿಭಾಗಕ್ಕೆ ಆಪ್ತಸಲಹೆಗಾಗಿ ಕರೆತರಲಾಗಿತ್ತು. 3 ಲಕ್ಷ ರೂಪಾಯಿ ಸಾಲದಲ್ಲಿ ಆತ ಸಿಲುಕಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಂಟಲಿನಲ್ಲಿ ಕಿಚ್ ಕಿಚ್ ಸಮಸ್ಯೆ ಚಿಕ್ಕದಾಗಿದೆ.

Sat Feb 18 , 2023
ಗಂಟಲಿನಲ್ಲಿ ಕಿಚ್ ಕಿಚ್ ಸಮಸ್ಯೆ ಚಿಕ್ಕದಾಗಿದೆ.ಆದರೆ ಅದು ಉಂಟುಮಾಡುವ ತೊಂದರೆ ಮತ್ತು ಕಿರಿಕಿರಿಯನ್ನು ಸಹಿಸುವುದು ಕಷ್ಟ. ಪದೇ ಪದೇ ಗಂಟಲನ್ನು ಸ್ವಚ್ಛಗೊಳಿಸುವುದು.. ಇದು ಬರುತ್ತಿರುವ ಕಫವನ್ನು ನುಂಗಲು ಅಥವಾ ನುಂಗಲು ಸಾಧ್ಯವಾಗದ ಬಗ್ಗೆ ಅಲ್ಲ. ಆದಾಗ್ಯೂ, ಇದನ್ನು ದೀರ್ಘಕಾಲದವರೆಗೆ ಇಟ್ಟರೆ, ಸಮಸ್ಯೆ ಉಲ್ಬಣಗೊಳ್ಳುತ್ತದೆ. ಅದಕ್ಕಾಗಿಯೇ ನೀವು ಗಂಟಲನ್ನು ಪರೀಕ್ಷಿಸಬೇಕು. ಕಿಚ್ ಕಿಚ್ ಮೂಲ ಗಂಟಲಿನಲ್ಲಿ ಬರಲು ಕಾರಣವೆಂದರೆ ಕೆಲವು ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸಿದಾಗ, ನಮ್ಮ ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯು ಅವುಗಳ […]

Advertisement

Wordpress Social Share Plugin powered by Ultimatelysocial