ಶಿವಸೇನಾ ಪಕ್ಷ ಹಾಗೂ ಬಿಲ್ಲು ಬಾಣದ ಚಿಹ್ನೆಯನ್ನ ಡೀಲ್ ಮಾಡಲಾಗಿದೆ.

ಮುಂಬೈ: ಶಿವಸೇನಾ ಪಕ್ಷ ಹಾಗೂ ಬಿಲ್ಲು ಬಾಣದ ಚಿಹ್ನೆ 2 ಸಾವಿರ ಕೋಟಿ ರೂಪಾಯಿಗೆ ಡೀಲ್ ಆಗಿದೆ. ಇದು ನೂರಕ್ಕೆ ನೂರರಷ್ಟು ಸತ್ಯ ಎಂದು ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಆರೋಪ ಮಾಡಿದ್ದಾರೆ.

ಶಿವಸೇನಾ ಪಕ್ಷ ಹಾಗೂ ಬಿಲ್ಲು ಬಾಣದ ಚಿಹ್ನೆಯನ್ನ ಡೀಲ್ ಮಾಡಲಾಗಿದೆ.

ನನ್ನ ಹತ್ತಿರ ಇದಕ್ಕೆ ಸಂಬಂಧಪಟ್ಟ ಪಕ್ಕಾ ಮಾಹಿತಿ ಇದೆ. ಚುನಾವಣಾ ಆಯೋಗದ ನಿರ್ಧಾರ ನ್ಯಾಯಯುತವಲ್ಲ. ಇದು ಪಕ್ಕಾ ಡೀಲ್‌. 2000 ಕೋಟಿ ರೂಪಾಯಿಗೆ ಡೀಲ್ ಆಗಿರುವುದು ನೂರಕ್ಕೆ ನೂರರಷ್ಟು ಸತ್ಯ. ಆಡಳಿತ ಪಕ್ಷಕ್ಕೆ ಹತ್ತಿರವಾಗಿರುವ ಬಿಲ್ಡರ್‌ ಒಬ್ಬರಿಂದ ಈ ಮಾಹಿತಿ ಲಭ್ಯವಾಗಿದೆ. ಆದಷ್ಟು ಬೇಗ ಈ ಡೀಲ್‌ಗೆ ಸಂಬಂಧಪಟ್ಟ ಸಾಕ್ಷಿಯನ್ನು ಬಹಿರಂಗಪಡಿಸುವುದಾಗಿ ರಾವತ್ ತಿಳಿಸಿದ್ದಾರೆ.

ಉದ್ಧವ್ ಠಾಕ್ರೆ ಬಣದ ಈ ಗಂಭೀರ ಆರೋಪವನ್ನ ಸಿಎಂ ಏಕನಾಥ್ ಶಿಂಧೆ ಬಣ ತಳ್ಳಿ ಹಾಕಿದೆ. ಸಂಜಯ್ ರಾವತ್ ಏನು ಕ್ಯಾಷಿಯರ್‌ ಆಗಿದ್ದರಾ? ಎಂದು ಪ್ರಶ್ನಿಸಿದ್ದಾರೆ. ಸಂಜಯ್ ರಾವತ್ ತಮ್ಮ ಆರೋಪವನ್ನ ಸಮರ್ಥಿಸಿಕೊಂಡಿದ್ದು, 2000 ಸಾವಿರ ಕೋಟಿ ರೂಪಾಯಿಯನ್ನ ತಲಾ 50 ಕೋಟಿ ರೂಪಾಯಿಯಂತೆ 40 ಶಾಸಕರಿಗೆ ಹಂಚಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇನ್ನೆರಡು ದಿನದಲ್ಲಿ ನಾರಾಯಣಗುರು ನಿಗಮ ಘೋಷಣೆ!

Sun Feb 19 , 2023
ಉಡುಪಿ: ಇನ್ನೆರಡು ದಿನಗಳಲ್ಲಿ ನಾರಾಯಣಗುರು ನಿಗಮ ರಚನೆ ಮಾಡಿ ಘೋಷಣೆ ಮಾಡಲಾಗುವುದು. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಆತಂಕ ಬೇಡ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟ್ವೀಟ್‌ ಮೂಲಕ ಭರವಸೆ ನೀಡಿದ್ದಾರೆ. ಬಿಲ್ಲವ ಸಮುದಾಯದವರು ಹಲವು ವರ್ಷಗಳಿಂದ ನಿಗಮ ಮಂಡಳಿ ರಚನೆಗಾಗಿ ನಿರಂತರವಾಗಿ ಬೇಡಿಕೆ ಇಡುತ್ತಾ ಬಂದಿದ್ದು, ಕೆಲವು ದಿನಗಳ ಹಿಂದೆ ಇಂಧನ ಸಚಿವ ಸುನೀಲ್ ಕುಮಾರ್ ನೇತೃತ್ವದಲ್ಲಿ ನಿಯೋಗ ತೆರಳಿತ್ತು. ಬಿಲ್ಲವ […]

Advertisement

Wordpress Social Share Plugin powered by Ultimatelysocial