“ದೊಡ್ಡಹಟ್ಟಿ ಬೋರೇಗೌಡ” ಚಿತ್ರದ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರ.

ಪ್ರಶಸ್ತಿ ವಿಜೇತ, ಗ್ರಾಮೀಣ ಸೊಗಡಿನ ಈ ಚಿತ್ರ ಫೆಬ್ರವರಿಯಲ್ಲಿ ತೆರೆಗೆ.

ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಚಿತ್ರಗಳು ಗೆಲುತ್ತಿದೆ. ಆ ಸಾಲಿಗೆ ಸೇರುವ ಗ್ರಾಮೀಣ ಸೊಗಡಿನ “ದೊಡ್ಡಹಟ್ಟಿ ಬೋರೇಗೌಡ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ. ರಾಜರಾಜೇಶ್ವರಿ ಕಂಬೈನ್ಸ್ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗಿದೆ.ನಾನು ಈ ಹಿಂದೆ “ತರ್ಲೆ ವಿಲೇಜ್”,
“ಪರಸಂಗ” ಚಿತ್ರಗಳನ್ನು ನಿರ್ದೇಶಿಸಿದ್ದೆ. ಈಗ ಗ್ರಾಮೀಣ ಸೊಗಡಿನ “ದೊಡ್ಡಹಟ್ಟಿ ಬೋರೇಗೌಡ” ಚಿತ್ರವನ್ನು ನಿರ್ದೇಶಿಸಿದ್ದೇನೆ. ನಮ್ಮ ಚಿತ್ರ ಮನೆಯ ಸುತ್ತ ಹೆಣೆಯಲಾಗಿರುವ ಕಥೆ. ಹಳ್ಳಿಯಲ್ಲಿ ಬಡವರಿಗೆ ಸರ್ಕಾರದಿಂದ ನೀಡುವ ಆಶ್ರಯ ಯೋಜನೆ ಮನೆಯನ್ನು ವ್ಯಕ್ತಿಯೊಬ್ಬ ಪಡೆದುಕೊಳ್ಳಲು ಯಾವರೀತಿ ಕಷ್ಟಪಡುತ್ತಾನೆ ಎಂಬುದನ್ನು ನಮ್ಮ ಚಿತ್ರದಲ್ಲಿ ತೋರಿಸಿದ್ದೇವೆ. ನಮ್ಮ ಚಿತ್ರಕ್ಕೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಕೂಡ ದೊರಕಿದೆ. ಫೆಬ್ರವರಿಯಲ್ಲಿ ಚಿತ್ರ ತೆರೆಗೆ ಬರಲಿದೆ. ಇದು ಕಲಾತ್ಮಕ ಚಿತ್ರ ಅಲ್ಲ. ಕಮರ್ಷಿಯಲ್ ಚಿತ್ರ. ನನ್ನ ಪ್ರಕಾರ ಆರರಿಂದ ಅರವತ್ತು ವರ್ಷಗಳ ತನಕ ಎಲ್ಲರಿಗೂ ಹಿಡಿಸುವ ಚಿತ್ರಗಳು ಕಮರ್ಷಿಯಲ್ ಚಿತ್ರಗಳೇ.ಈ ಚಿತ್ರದಲ್ಲಿ ಗ್ರಾಮೀಣ ಪ್ರತಿಭೆಗಳೇ ಅಭಿನಯಿಸಿರುವುದು ವಿಶೇಷ. ಮೂರು ತಿಂಗಳ ಕಾಲ ಎಲ್ಲರಿಗೂ ತರಭೇತಿ ನೀಡಲಾಗಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಿರ್ದೇಶಕ ಕೆ‌.ಎಂ.ರಘು.ನಾನು ಮೈಸೂರಿನ ಬಳಿಯ ಬೀರಹುಂಡಿ ಎಂಬ ಹಳ್ಳಿಯವನು. ಗ್ರಾಮ ಪಂಚಾಯತಿ ಸದಸ್ಯರನಾಗಿ ಕಾರ್ಯ ನಿರ್ವಹಿಸಿದ್ದೇನೆ. ರಂಗಭೂಮಿಯಲ್ಲಿ ಅನುಭವವಿದೆ.‌ ಹಿರಿತೆರೆಯಲ್ಲಿ ಮೊದಲ ಚಿತ್ರ. ನಾನೇ ಬೋರೇಗೌಡ ಪಾತ್ರ ಮಾಡಿದ್ದೀನಿ ಎಂದರು ನಟ ಶಿವಣ್ಣ ಬೀರಹುಂಡಿ.ಚಿತ್ರದಲ್ಲಿ ಅಭಿನಯಿಸಿರುವ ಗೀತಾ, ಲಾವಣ್ಯ, ಕಲಾರತಿ ಮಹದೇವ್, ಕಾತ್ಯಾಯಿನಿ, ಯೋಗೇಶ್ ಮುಂತಾದ ಕಲಾವಿದರು ಅಭಿನಯದ ಅನುಭವ ಹಂಚಿಕೊಂಡರು. ಹಾಡುಗಳ ಬಗ್ಗೆ ಹರ್ಷವರ್ಧನ್ ರಾಜ್ ಮಾಹಿತಿ ನೀಡಿದರು. ನಿರ್ಮಾಪಕರಾದ ಶಶಿಕುಮಾರ್ ಬಿ ಸಿ ಹಾಗೂ ಲೋಕೇಶ್ ಕೆ.ಎಂ ಹಾಗೂ ಚಿತ್ರ ಬಿಡುಗಡೆಗೆ ಸಹಕಾರ ನೀಡಿರುವ ವೆಂಕಟೇಶ್ ಮತ್ತು ಶ್ರೀಮತಿ ಜಿ.ಅನ್ನಪೂರ್ಣ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಪ್ರತಿದಿನ 4-5 ಮೊಟ್ಟೆ ತಿನ್ನುವುದು ಅಪಾಯಕಾರಿ!

Thu Dec 29 , 2022
ಮೊಟ್ಟೆ ಸಂಪೂರ್ಣ ಆಹಾರ, ಅದನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ ಅನ್ನೋದು ಎಲ್ಲರಿಗೂ ತಿಳಿದಿದೆ. ಚಳಿಗಾಲದಲ್ಲಿ ಜನರು ಮೊಟ್ಟೆಯನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ. ಆದರೆ ದಿನಕ್ಕೆ ಗರಿಷ್ಠ ಎಷ್ಟು ಮೊಟ್ಟೆಗಳನ್ನು ತಿನ್ನಬಹುದು ಅನ್ನೋದನ್ನು ತಿಳಿದುಕೊಳ್ಳುವುದು ಉತ್ತಮ.ಮೊಟ್ಟೆ ತಿನ್ನುವುದರಿಂದ ನಮಗೆ ಸಾಕಷ್ಟು ಪ್ರೋಟೀನ್ ಸಿಗುತ್ತದೆ ಮತ್ತು ಅನಗತ್ಯ ಕೊಬ್ಬು ಹೆಚ್ಚಾಗುವುದಿಲ್ಲ. ಮೊಟ್ಟೆಯಲ್ಲಿ ಎರಡು ಭಾಗಗಳಿವೆ. ಬಿಳಿ ಮತ್ತು ಹಳದಿ. ಮೊಟ್ಟೆಯ ಎರಡೂ ಭಾಗಗಳು ವಿಭಿನ್ನ ಪ್ರಯೋಜನಗಳನ್ನು ಹೊಂದಿವೆ. ಆದರೆ ಯಾವ […]

Advertisement

Wordpress Social Share Plugin powered by Ultimatelysocial