ಪೋಷಕರು ದೂರು ನೀಡುವ ಮೊದಲೇ ಪೊಲೀಸರಿಂದ ಅಪಹರಣಕ್ಕೊಳಗಾಗಿದ್ದ ಯುವಕ.

ಬೆಂಗಳೂರು: ಪೋಷಕರು ದೂರು (Complaint) ನೀಡುವ ಮುನ್ನವೇ ಕಿಡ್ನಾಪ್ (Kidnap) ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಸುಮಾರು ಎರಡು ಕಿಲೋ ಮೀಟರ್ ದೂರ ಅಪಹರಣಕಾರರನ್ನು (Kidnappers) ಬೆನ್ನಟ್ಟಿದ್ದ ಪೊಲೀಸರು, ಅಪಹರಣಕ್ಕೊಳಗಾಗಿದ್ದ ಯುವಕನನ್ನು ರಕ್ಷಣೆ (Youth Rescued) ಮಾಡಿ, ಓರ್ವನನ್ನು ಬಂಧಿಸಿದ್ದಾರೆ.
ಮೂವರು ಎಸ್ಕೇಪ್ ಆಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಆಡುಗೋಡಿ ಇನ್​ಸ್ಪೆಕ್ಟರ್ ಮಂಜುನಾಥ್ (Inspector Manjunath) ಸಮಯಪ್ರಜ್ಞೆಯಿಂದ ಕಿಡ್ನಾಪ್ ಆಗಿದ್ದ ಯುವಕನನ್ನು ರಕ್ಷಣೆ ಮಾಡಲಾಗಿದೆ. ಸಿನಿಮೀಯ ರೀತಿಯಲ್ಲಿ ಕಿಡ್ನಾಪ್ ಗ್ಯಾಂಗ್ (Kidnap Gang) ಚೇಸ್ ಮಾಡಲಾಗಿತ್ತು. ಯುವಕನನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ.
ಕೋರಮಂಗಲ 100 ಅಡಿ ರಸ್ತೆಯಲ್ಲಿ ಇನ್​​ಸ್ಪೆಕ್ಟರ್ ಮಂಜುನಾಥ್ ಚೆಕ್ ಪೋಸ್ಟ್ ಹಾಕಿದ್ದರು. ಈ ವೇಳೆ ವೇಗವಾಗಿ ಬಂದ ಹೋಂಡಾ ಸಿಟಿ ಕಾರ್​​ ಬ್ಯಾರಿಕೇಡ್​​ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದೆ. ಕಾರ್​ನಲ್ಲಿದ್ದ ಯುವಕನೋರ್ವ ಕಾಪಾಡಿ.. ಕಾಪಾಡಿ ಎಂದು ಕೂಗಿದ್ದಾನೆ.
ಪೊಲೀಸ್ ಜೀಪ್ ನೋಡಿ ಮೂವರು ಎಸ್ಕೇಪ್
ತಕ್ಷಣ ಎಚ್ಚೆತ್ತ ಇನ್​ಸ್ಪೆಕ್ಟರ್ ಮಂಜುನಾಥ್ ತಮ್ಮ ಜೀಪ್​​ನಲ್ಲಿ 2 ಕಿಮೀ ಕಾರು ಚೇಸ್ ಮಾಡಿ ಕೋರಮಂಗಲ ವಾಟರ್ ಟ್ಯಾಂಕ್ ಜಂಕ್ಷನ್ ಬಳಿ ವಾಹನ ಅಡ್ಡಗಟ್ಟಿದ್ದಾರೆ. ಈ ವೇಳೆ ಕಾರಿನಲ್ಲಿ ನಾಲ್ವರು ಇರುವುದು ಪತ್ತೆಯಾಗಿದೆ. ಮೂವರು ಓರ್ವನನ್ನು ಕಿಡ್ನ್ಯಾಪ್ ಮಾಡಿ ಹೊರಟಿದ್ದರು. ಪೊಲೀಸ್ ಜೀಪ್ ನೋಡಿ ಮೂವರು ಕಾರು ಇಳಿದು ಪರಾರಿಯಾಗಿದ್ದಾರೆ. ಗೋಪಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಬಂಡೆಪಾಳ್ಯದ ತೌಹಿದ್ ಯುವಕನನ್ನ ರಕ್ಷಣೆ ಮಾಡಲಾಗಿದೆ.
60 ಸಾವಿರಕ್ಕೆ ಡಿಮ್ಯಾಂಡ್
ಮೂರು ದಿನದ ಹಿಂದೆ ಬಂಡೆಪಾಳ್ಯ ಬಳಿ ತೌಹಿದ್​ ಎಂಬ ಯುವಕನನ್ನು ಅಪಹರಣ ಮಾಡಲಾಗಿತ್ತು. ಅಪಹರಣಕಾರರು 60 ಸಾವಿರ ಹಣ ನೀಡುವಂತೆ ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದರು. ಪೊಲೀಸರಿಗೆ ವಿಷಯ ತಿಳಿಸಿದ್ರೆ ನಿಮ್ಮ ಮಗನನ್ನು ಕೊಲ್ಲೋದಾಗಿ ಬೆದರಿಕೆ ಹಾಕಲಾಗಿತ್ತು. ಕಳೆದ ಮೂರು ದಿನದಿಂದ ಗೌಪ್ಯ ಸ್ಥಳದಲ್ಲಿರಿಸಿಕೊಂಡು ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದರು.
ಬುಧವಾರ ಸಂಜೆ ಸುಮಾರು 4.30ರ ವೇಳೆಗೆ ತೌಹಿದ್ ತಾಯಿ ಅಪಹರಣಕಾರರಿಗೆ 35 ಸಾವಿರ ರೂಪಾಯಿ ನೀಡಿದ್ದರು. ಆದ್ರೂ ತೌಹಿದ್​​​ನನ್ನಿ ಮನೆಗೆ ಕಳುಹಿಸಿರಲಿಲ್ಲ. ಹಾಗಾಗಿ ರಾತ್ರಿ ಮಡಿವಾಳ‌ ಪೊಲೀಸ್ ಠಾಣೆಗೆ ದೂರು‌ ನೀಡಲು ತೌಹಿದ್ ಕುಟುಂಬ ಆಗಮಿಸಿತ್ತು.
ಬಂಡೆಪಾಳ್ಯಕ್ಕೆ ಕೇಸ್ ವರ್ಗಾವಣೆ
ದೂರು ನೀಡುವ ಮೊದಲೇ ಪೊಲೀಸರು ಯುವಕನನ್ನು ರಕ್ಷಣೆ ಮಾಡಲಾಗಿದೆ. ತೌಹಿದ್ ಮೇಲೆಯೂ ಕೇಸ್ ಗಳಿರುವುದು ಬೆಳಕಿಗೆ ಬಂದಿದೆ. ಬಂಡೆಪಾಳ್ಯ ವ್ಯಾಪ್ತಿಯಲ್ಲಿ ಕಿಡ್ನಾಪ್ ಆಗಿದ್ದರಿಂದ ಪ್ರಕರಣ ವರ್ಗಾವಣೆ ಮಾಡಲಾಗಿದೆ. ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ತೌಹಿದ್ ಆರೋಪ ಮಾಡಿದ್ದಾನೆ. ಮೂರು ದಿನಗಳ ನಂತರ ಮಗನ ಕಂಡು ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ರೌಡಿಶೀಟರ್ ಸೆರೆ
ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಮುನೇಲ್ ಎಂಬಾತನನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮುನೇಲ್ ವಿರುದ್ಧ ದಕ್ಷಿಣ ವಿಭಾಗದ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಕೊಲೆಯತ್ನ, ರಾಬರಿ, ಜೀವ ಬೆದರಿಕೆ ಪ್ರಕರಣಗಳಲ್ಲಿ ಬೇಕಾಗಿದ್ದ ಮುನೇಲ್ ಎರಡು ವರ್ಷಗಳಿಂದ ಕಣ್ತಪ್ಪಿಸಿಕೊಂಡಿದ್ದನು. ಖಚಿತ ಮಾಹಿತಿ ಆಧರಿಸಿ ಮುನೇಲ್​ನನ್ನು ಬಂಧಿಸಲಾಗಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕನ್ಯಾ ರಾಶಿ ಭವಿಷ್ಯ (Thursday, January 12, 2023)

Thu Jan 12 , 2023
ಸಂತೋಷದ ದಿನಕ್ಕಾಗಿ ಮಾನಸಿಕ ಒತ್ತಡವನ್ನು ತಪ್ಪಿಸಿ. ನೀವು ಸಂಪ್ರದಾಯಬದ್ಧ ಹೂಡಿಕೆಗಳನ್ನು ಮಾಡಿದಲ್ಲಿ ಒಳ್ಳೆಯ ಹಣ ಮಾಡುತ್ತೀರಿ. ಅಗತ್ಯವಿದ್ದರೆ ಸ್ನೇಹಿತರು ನಿಮ್ಮ ನೆರವಿಗೆ ಬರುತ್ತಾರೆ. ಇಂದು ನಿಮ್ಮ ಹೃದಯ ಬಡಿತವು ನಿಮ್ಮ ಸಂಗಾತಿಯೊಡನೆ ಲಯದಲ್ಲಿ ಪ್ರೀತಿಯ ಸಂಗೀತವನ್ನು ನುಡಿಸುತ್ತದೆ. ಬಾಸ್‌ನ ಒಳ್ಳೆಯ ಮೂಡ್ ಇಡೀ ಕೆಲಸದ ಪರಿಸರವನ್ನು ಒಳ್ಳೆಯದಾಗಿಸಬಹುದು. ಕಳೆದ ಕೆಲವು ದಿನಗಳಿಂದ ತುಂಬಾ ಕಾರ್ಯನಿರತವಾಗಿದ್ದವರು ಇಂದು ತಮಗಾಗಿ ಉಚಿತ ಸಮಯವನ್ನು ಪಡೆಯಬಹುದು. ಇಂದು, ನಿಮ್ಮ ಸಂಗಾತಿಯ ಮುಗ್ಧ ನಡವಳಿಕೆ ನಿಮ್ಮ […]

Advertisement

Wordpress Social Share Plugin powered by Ultimatelysocial