ಬಿಜೆಪಿ ಸರ್ಕಾರದ ಭ್ರಷ್ಟಚಾರಕ್ಕೆ ದಾಖಲೆಗಳಿವೆ.

ವದೆಹಲಿ :ಬಿಜೆಪಿ ಸರ್ಕಾರದ ಭ್ರಷ್ಟಚಾರಕ್ಕೆ ದಾಖಲೆಗಳಿವೆ. ಆದರೂ ಬಿಜೆಪಿ ಸುಳ್ಳಿನ ಸಮರ್ಥನೆ ಮೂಲಕ ಮೊಂಡು ವಾದ ಮಾಡುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅರೋಪಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ರಾಹುಲ್‍ಗಾಂಧಿ 3570 ಕಿಲೋ ಮೀಟರ್ ಭಾರತ್ ಜೋಡೋ ಯಾತ್ರೆ ನಡೆಸಿದ್ದಾರೆ.

ಅದು ಅಷ್ಟು ಸುಲಭವಲ್ಲ, ಇದಕ್ಕೆ ಇಚ್ಚಾಶಕ್ತಿ, ಬದ್ಧತೆ ಅಗತ್ಯ. ರಾಹುಲ್‍ಗಾಂಧಿ ದೇಶದಲ್ಲಿನ ದ್ವೇಷದ ರಾಜಕಾರಣಕ್ಕೆ ಉತ್ತರವಾಗಿ ಪಾದಯಾತ್ರೆ ಮಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ದ್ವೇಷ ರಾಜಕಾರಣ ಹೆಚ್ಚಾಗಿದೆ. ದಲಿತರು, ಅಲ್ಪಸಂಖ್ಯಾತರು, ಬಡವರು ಆತಂಕದಲ್ಲಿದ್ದಾರೆ. ಹಿಂದುಗಳನ್ನು ಮುಸಲ್ಮಾನರ ವಿರುದ್ಧ ಎತ್ತಿಕಟ್ಟುವುದು, ಹಿಂದು ರಾಷ್ಟ್ರ ಮಾಡುತ್ತೇವೆ ಎಂಬ ಹಿಂದುತ್ವದ ರಾಜಕಾರಣ ಅಪಾಯಕಾರಿಯಾಗಿತ್ತು. ಅದಕ್ಕಾಗಿ ರಾಹುಲ್‍ಗಾಂಧಿ ಯಾತ್ರೆ ನಡೆಸಿದ್ದರು ಎಂದರು.
ರಮೇಶ್ ಜಾರಕಿಹೊಳಿ ಆರೋಪಗಳಿಗೆ ಪ್ರತಿಕ್ರಿಯಿಸಲು ಸಿದ್ದರಾಮಯ್ಯ ನಿರಾಕರಿಸಿದರು. ಅವರು ಬಿಜೆಪಿಗೆ ಹೋದ ಮೇಲೆ ಅವರ ಜೊತೆ ನಾನು ಮಾತನಾಡುತ್ತಿಲ್ಲ. ಅವರು ಏನು ಹೇಳಿದ್ದಾರೋ ಗೋತ್ತಿಲ್ಲ. ಮಾಹಿತಿ ಇಲ್ಲದೆ ಪ್ರತಿಕ್ರಿಯಿಸುವುದಿಲ್ಲ ಎಂದರು.
ಜೆಡಿಎಸ್‍ನಲ್ಲಿ ಹಾಸನ ಟಿಕೆಟ್ ಸಂಬಂಧ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.
ಯತೀಂದ್ರ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ ಬಿಜೆಪಿ ಸೇರುತ್ತಾರೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿಕೆ ಪ್ರತಿಕ್ರಿಯಿಸಿದ ಅವರು, ನಳೀನ್ ಕುಮಾರ್ ಎಂಬ ವ್ಯಕ್ತಿ ವಿಧೂಷಕ, ಬಪೂನ್ ಇದ್ದ ಹಾಗೆ. ಆತನಿಗೆ ರಾಜಕೀಯ ಜ್ಞಾನ ಇಲ್ಲ. ಅದಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾನೆ. ಅದಕ್ಕೆ ಉತ್ತರ ಕೊಡುವ ಅಗತ್ಯ ಇಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಕೋಲಾರದಲ್ಲಿ ಸ್ಪರ್ಧೆ ಮಾಡುತ್ತೇನೋ ಇಲ್ಲವೋ ಎಂದು ನಾನು ಹೇಳಬೇಕು. ಯಡಿಯೂರಪ್ಪ ಹೇಗೆ ಹೇಳುತ್ತಾರೆ. ನನ್ನ ಮೇಲೆ ಪ್ರೀತಿ ಇದೆ ಎಂದು ಸುಳ್ಳು ಹೇಳಬಹುದೇ. ಎಲ್ಲಿ ನಿಲ್ಲುತ್ತೇನೆ ಎಂಬುದನ್ನು ನಾನೇ ಹೇಳಬೇಕು. ಅದನ್ನು ಬಿಟ್ಟು ಯಡಿಯೂರಪ್ಪ, ನಳೀನಕುಮಾರ್ ಕಟೀಲ್ ಅವರು ಮಾತನಾಡಲು ಯಾರು ಎಂದು ಪ್ರಶ್ನಿಸಿದರು.
ಚಲವಾದಿ ನಾರಾಯಣಸ್ವಾಮಿಯನ್ನು ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ಮಾಡಿದ್ದು ನಾನು, ಈಗ ಬಿಜೆಪಿಗೆ ಹೋಗಿ ಹೊಗಳುಭಟ್ಟನಾಗಿದ್ದಾರೆ. ಅವರಿಗೆಲ್ಲಾ ಉತ್ತರ ಕೊಡಲು ಸಾಧ್ಯವೇ ಎಂದರು.
ಬಿಜೆಪಿಯವರು ಯಾತ್ರೆ ಮಾಡಲು ನಾವು ಬೇಡ ಎಂದು ಹೇಳಿಲ್ಲ. ಅದು ಒಂದು ರಾಜಕೀಯ ಪಕ್ಷ ಯಾತೆ ಮಾಡಿಕೊಳ್ಳಲಿ. ಯಾರು ಏನೇ ಯಾತ್ರೆ ಮಾಡಿದರೂ ಅಧಿಕಾರಕ್ಕೆ ಬರಲು ಜನರ ಪ್ರೀತಿ ಅಗತ್ಯ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಬಿಜೆಪಿ 60ರಿಂದ 70 ಸ್ಥಾನಗಳಿಗೆ ಸೀಮಿತವಾಗಲಿದೆ ಎಂದರು.
ಕೇಂದ್ರ ಬಜೆಟ್‍ನಲ್ಲಿ ರಾಜ್ಯ ಅಭಿವೃದ್ಧಿ ದೃಷ್ಟಿಯಿಂದ ಡಬಲ್ ಇಂಜಿನ್ ಸರ್ಕಾರ ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಕು. ಕೃಷ್ಣ ಮೇಲ್ಡಂಡೆ ಯೋಜನೆಯ ನ್ಯಾಯಾಧೀಕರಣದ ತೀರ್ಪನ್ನು ಅಧಿಸೂಚನೆ ಹೊರಡಿಸಲಿ. ಮಹದಾಯಿ ಯೋಜನೆ ಆರಂಭಿಸಲು ಅಗತ್ಯವಾದ ಅನುಮತಿ ನೀಡಲಿ. ಜಿಎಸ್‍ಟಿ ಪರಿಹಾರವನ್ನು ಇನ್ನೂ ಐದು ವರ್ಷ ಮುಂದುವರೆಸಲಿ. ಇದರಿಂದ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಿಗೆ ಅನುಕೂಲವಾಗಲಿದೆ ಎಂದರು.
ಶೇ.40ರಷ್ಟು ಕಮಿಷನ್ ಸರ್ಕಾರ ಎಂದು ಕರ್ನಾಟಕದ ಇತಿಹಾಸದಲ್ಲಿ ಯಾರ ಮೇಲೂ ಆರೋಪ ಬಂದಿರಲಿಲ್ಲಘಿ. ನಾವು ಅಧಿಕಾರದಲ್ಲಿದ್ದಾಗ ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆದಿರಲಿಲ್ಲಘಿ. ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಂದು ಶೇ.10 ಆರೋಪ ಮಾಡಿದರು. ಅದಕ್ಕೆ ದಾಖಲೆ ಇರಲಿಲ್ಲ. ಈಗ ಬಿಜೆಪಿ ಸರ್ಕಾರದಲ್ಲಿ ಗುತ್ತಿಗೆದಾರರ ಸಂತೋಷ್ ಪಾಟೀಲ್ ಸಚಿವ ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಾಲಾ ಮಕ್ಕಳಿಗೆ ನೋಟ ಬುಕ್ ವಿತರಿಸಿದ , ಭಾರತ ಸೇವಾ ಸಮಿತಿ,

Mon Jan 30 , 2023
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪ್ರಬುದ್ಧ ಭಾರತ ಸೇವಾ ಸಮಿತಿ ಇಂದ ಗಣರಾಜ್ಯೋತ್ಸವದ ನಿಮಿತ್ಯ ಊರಿನ ಎಲ್ಲಾ ಶಾಲೆಯ ಮಕ್ಕಳಿಗೆ 1200 ಕಿಂತ ಅದಿಕ ನೋಟ್ಬುಕ್ ವಿತರಿಸಲಾಯಿತು ಹಾಗೂ ಈ ಒಂದು ಪ್ರಬುದ್ಧ ಭಾರತ್ ಸೇವಾ ಸಮಿತಿ ಗ್ರಾಮದ ಯುವಕರು ಕಟ್ಟಿದ ಸಮಿತಿ ಸಮಾಜಮುಖಿ ಕಾರ್ಯಗಳ ಮೂಲಕ ಯುವಕರಿಗೆ ಮಾದರಿಯಾಗಿದೆ ಇದು ಅಲ್ಲದೆ ತುಂಬಾ ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗಿದೆ ಹಲವಾರು ಕಾರ್ಯಗಳು ಮಾಡುವರ ಮೂಲಕ ಮಾದರಿಯಾಗಿದೆ. 74 ನೇ ಗಣರಾಜ್ಯೋತ್ಸವ […]

Advertisement

Wordpress Social Share Plugin powered by Ultimatelysocial