ತೋಟದ ಮನೆಯಲ್ಲಿ ನಾಯಿಯನ್ನು ನುಂಗಲು ಕಾಫಿ ತೋಟಕ್ಕೆ ಬಂದ 13 ಅಡಿ ಉದ್ದದ ಹೆಬ್ಬಾವು

 

ಚಿಕ್ಕಮಗಳೂರು: ಕಾಫಿ ತೋಟಕ್ಕೆ ಬಂದಿದ್ದ 13 ಅಡಿ ಉದ್ದದ ಹೆಬ್ಬಾವನ್ನು ಸ್ನೇಕ್ ನರೇಶ್ ಎಂಬುವವರು ರಕ್ಷಿಸಿ ಚುರ್ಚೆಗುಡ್ಡದ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ.ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಚಿನ್ಮಕ್ಕಿ ಗ್ರಾಮದ ತಾರೇಶ್ ಎಂದಿನಂತೆ ಬುಧವಾರ ಕಾಫಿ ತೋಟದಲ್ಲಿ ಓಡಾಡುವಾಗ ಹೆಬ್ಬಾವು ಹರಿದಾಡುತ್ತಿರುವುದನ್ನು ಕಂಡಿದ್ದಾರೆ.ನಂತರ ಬೇಲಿ ಮೇಲೆ ಬಂದು ಹಾವು ಮಲಗಿದೆ. ಕಾರ್ಮಿಕರು ಹಾಗೂ ಸ್ಥಳೀಯರು ಭಾರಿ ಗಾತ್ರದ ಹಾವನ್ನು ನೋಡಿ ಭಯಗೊಂಡಿದ್ದಾರೆ. ಕೂಡಲೇ ಸ್ನೇಕ್ ನರೇಶ್‌ಗೆ ಕರೆ ಮಾಡಿದಾಗ ಅವರು ಬಂದು ಹಾವನ್ನು ಸೆರೆ ಹಿಡಿದರು. ಗ್ರಾಮಸ್ಥರು, ಮಕ್ಕಳು ಹಾವನ್ನು ಮುಟ್ಟಿ, ಹೆಗಲ ಮೇಲೆ ಹೊತ್ತು ಸಂಭ್ರಮಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡರು.ಹೆಬ್ಬಾವು ಮಂಗಳವಾರ ರಾತ್ರಿ ತೋಟದ ಮನೆಯಲ್ಲಿದ್ದ ನಾಯಿ ಹಿಡಿಯಲು ಹೋಗಿ ವಿಫಲವಾಗಿ ತೋಟದಲ್ಲೇ ಓಡಾಡುತ್ತಿತ್ತು. ರಾತ್ರಿ ರಸ್ತೆ ದಾಟುವಾಗ ನೋಡಿದ್ದ ಗ್ರಾಮಸ್ಥರು ಬೆಳಗ್ಗೆ ನೋಡಿದಾಗ ಮನೆ ಎದುರು ಹರಿದಾಡುತ್ತಿದ್ದುದು ಮಾಲೀಕರ ಕಣ್ಣಿಗೆ ಬಿದ್ದಿತ್ತು. ಆಹಾರಕ್ಕಾಗಿ ಕಾಡಿನಿಂದ ಹೊರಬಂದು ಆಹಾರ ಹುಡುಕುತ್ತಾ ಓಡಾಡುವುದು ಸಾಮಾನ್ಯ ಎಂದು ಸ್ನೇಕ್ ನರೇಶ್ ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್ ಮತದ ಕಾರಣದಿಂದ ಭಾರತದ ಬಾಂಧವ್ಯಕ್ಕೆ ಧಕ್ಕೆ ತರುವುದು ಮೂರ್ಖತನ!

Thu Mar 3 , 2022
ಬುಧವಾರದಂದು ಭಾರತದೊಂದಿಗಿನ ಸಂಬಂಧಗಳ ಕುರಿತಾದ ಸೆನೆಟ್ ಸಮಿತಿಯ ವಿಚಾರಣೆಯ ಸಂದರ್ಭದಲ್ಲಿ, ಉಕ್ರೇನ್‌ಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಮತದಾನದಲ್ಲಿ ನಾಲ್ಕನೆಯದಾಗಿ ಭಾರತವು ಗೈರುಹಾಜರಾಗಿರುವುದನ್ನು ಹೈಲೈಟ್ ಮಾಡಲಾಗಿದೆ, ಇಂಡಿಯಾನಾ ಸೆನೆಟರ್ ಟಾಡ್ ಯಂಗ್ ಹೇಳಿದರು: “ಯುನೈಟೆಡ್ ಸ್ಟೇಟ್ಸ್‌ಗೆ ಹಾನಿ ಮಾಡುವುದು ಮೂರ್ಖತನ ಮತ್ತು ಆಳವಾದ ದೂರದೃಷ್ಟಿಯಾಗಿದೆ. ಉಕ್ರೇನ್‌ನಲ್ಲಿ ಏನಾಗುತ್ತಿದೆ ಎಂಬುದರ ಕುರಿತು ಭಾರತದೊಂದಿಗೆ ನಮ್ಮ ಸಂಬಂಧ. ವಿಚಾರಣೆಯಲ್ಲಿ ಅವರು ಮತ್ತು ಇತರ ಸೆನೆಟರ್‌ಗಳು ಯುಎಸ್‌ಗೆ ಭಾರತದ ಪ್ರಾಮುಖ್ಯತೆಯನ್ನು ಅದರ ಕಾರ್ಯತಂತ್ರದ ಸ್ಥಾನ ಮತ್ತು ಅದರ […]

Advertisement

Wordpress Social Share Plugin powered by Ultimatelysocial