ಆಂಧ್ರ; ನಲ್ಲಮಲ ಅರಣ್ಯದಲ್ಲಿ 6 ತಿಂಗಳಿನಲ್ಲಿ ಮೂರು ಹುಲಿ ಸಾವು!

ಅಮರಾವತಿ, ಮೇ 15: ಆಂಧ್ರಪ್ರದೇಶದ ನಾಗಾರ್ಜುನಸಾಗರ್ ಶ್ರೀಶೈಲಂ ಹುಲಿ ಸಂರಕ್ಷಿತ ಪ್ರದೇಶದ ಆತ್ಮಕೂರ್ ವಿಭಾಗದ ಬೈರ್ಲುಟಿಯಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದೆ. ಕಳೆದ ಮೇ 10ರ ಮಂಗಳವಾರ ಸಂಜೆ ಅರಣ್ಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಅರಣ್ಯದ ಪ್ರದೇಶದಲ್ಲಿ ಹುಲಿಯ ಶವ ಪತ್ತೆಯಾಗಿದೆ.

ನಾಗಾರ್ಜುನಸಾಗರ ಶ್ರೀಶೈಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಎನ್‌ಎಸ್‌ಟಿಆರ್) ಕಳೆದ ಆರು ತಿಂಗಳಲ್ಲಿ ಮೂರು ಹುಲಿಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಈ ಕುರಿತು ಆತ್ಮಕೂರ್ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ಅಲೆಂಚನ್ ತೇರನ್ ಮಾತನಾಡಿ, “ಮೃತದೇಹ ಕೊಳೆತ ಸ್ಥಿತಿಯಲ್ಲಿತ್ತು. ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಹುಲಿ ಸಾವಿನ ಕುರಿತು ಮಾಹಿತಿ ನೀಡಲಾಗಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಹುಲಿ ಮತ್ತು ಇನ್ನೊಂದು ಪ್ರಾಣಿಯ ನಡುವಿನ ಕಾದಾಟವೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ” ಎಂದರು.

ಕಳೆದ ವರ್ಷ ರಾಜ್ಯ ಅರಣ್ಯ ಇಲಾಖೆ ನಡೆಸಿದ ಹುಲಿ ಗಣತಿಯಲ್ಲಿ ಈ ಹುಲಿಯ ಫೋಟೋ ತೆಗೆಯಲಾಗಿತ್ತು ಎಂದು ಡಿಎಫ್‌ಒ ಉಲ್ಲೇಖಿಸಿದ್ದಾರೆ. ನಾಲ್ಕು ವರ್ಷಗಳಿಗಳಲ್ಲಿ ರಾಷ್ಟ್ರಮಟ್ಟದಲ್ಲಿ ಹುಲಿ ಗಣತಿ ಅಂದಾಜನ್ನು ನಡೆಸಲಾಗಿದ್ದರೂ ಪ್ರತಿ ವರ್ಷ ರಾಜ್ಯ ಅರಣ್ಯ ಇಲಾಖೆಯು ತಮ್ಮ ಸಮೀಕ್ಷೆ ಮತ್ತು ವಿಶ್ಲೇಷಣೆಯ ಭಾಗವಾಗಿ ಪ್ರಾಣಿಗಳ ವೀಡಿಯೊಗಳು ಮತ್ತು ಚಿತ್ರಗಳನ್ನು ಸೆರೆಹಿಡಿಯಲಾಗಿತ್ತು.

ಕಳೆದ ಆರು ತಿಂಗಳಲ್ಲಿ ಮೀಸಲು ಪ್ರದೇಶದಲ್ಲಿ ಮೂರನೇ ಹುಲಿ ಮೃತಪಟ್ಟಿದೆ. ಇದು ಪ್ರಕೃತಿಯಲ್ಲಿ ಕಂಡುಬರುವ ಸಾಮಾನ್ಯ ಸಂಗತಿಯಾಗಿರುವುದರಿಂದ ಸಾವನ್ನು ಅಸ್ವಾಭಾವಿಕ ಎಂದು ಪರಿಗಣಿಸಲಾಗುವುದಿಲ್ಲ ಎಂದು ಡಿಎಫ್‌ಒ ಹೇಳಿದರು. ಪ್ರಾಣಿಗಳ ನಡುವೆ ಮಾರಣಾಂತಿಕವಾಗಿ ಪರಿಣಮಿಸುವ ಪ್ರಾದೇಶಿಕ ಕಾದಾಟಗಳು ಹೆಚ್ಚಾಗುತ್ತಿವೆ ಎಂದು ಅರಣ್ಯಾಧಿಕಾರಿ ತಿಳಿಸಿದರು.

ನಲ್ಲಮಲ್ಲ ಬೆಟ್ಟಗಳಲ್ಲಿರುವ ನಾಗಾರ್ಜುನಸಾಗರ ಹುಲಿ ಸಂರಕ್ಷಿತ ಪ್ರದೇಶವು 5,927 ಚದರ ಕಿ. ಮೀ. ವಿಸ್ತಾರವಾಗಿದೆ. ಮೀಸಲು ಪ್ರದೇಶವು ಆಂಧ್ರಪ್ರದೇಶದ ಅವಿಭಜಿತ ಕರ್ನೂಲ್, ಗುಂಟೂರು ಮತ್ತು ಪ್ರಕಾಶಂ ಜಿಲ್ಲೆಗಳಲ್ಲಿ ಮತ್ತು ತೆಲಂಗಾಣದ ಮೆಹಬೂಬ್‌ನಗರ ಮತ್ತು ನಲ್ಗೊಂಡ ಜಿಲ್ಲೆಗಳಲ್ಲಿ ಹರಡಿದೆ.

ಈ ಪ್ರದೇಶದಲ್ಲಿ 2018-19ರಲ್ಲಿ ಹುಲಿಗಳ ಸಂಖ್ಯೆ ಸುಮಾರು 47 ಎಂದು ಅಂದಾಜಿಸಲಾಗಿತ್ತು. ನಂತರದ ವರ್ಷದಲ್ಲಿ 63ಕ್ಕೆ ಏರಿತು. 2020-2021ರಲ್ಲಿ ಅದರ ಸಂಖ್ಯೆಯು ಸರಿಸುಮಾರು 65ಕ್ಕೆ ಏರಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನಿ ಸರ್ಕಾರ ರಚನೆಯಾಗುತ್ತೆ;

Sun May 15 , 2022
ಮಂಡ್ಯ: ಕಾಂಗ್ರೆಸ್ ಪಕ್ಷದಲ್ಲಿ ಹಿಂದೂಗಳ ಪರ ಧ್ವನಿಯೆತ್ತುವವರು ಯಾರಿದ್ದಾರೆ? ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರಿಗೂ ಸಾಬ್ರೆ ಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನ್ ಸರ್ಕಾರ ರಚನೆಯಾಗುತ್ತೆ. ಕಾಂಗ್ರೆಸ್ ನಲ್ಲಿ ಇಂದು ಎರಡು ಟೀಂ ಗಳಿವೆ. ಒಂದು ಸಿದ್ದರಾಮಯ್ಯ ಟೀಂ, ಇನ್ನೊಂದು ಡಿ.ಕೆ.ಶಿ ಟೀಂ. ಗೋರಿಪಾಳ್ಯದ ಬಸ್ಸು ಸಿದ್ದರಾಮಯ್ಯ ಟೀಂನ ವೈಸ್ ಕ್ಯಾಪ್ಟನ್. ಡಿ.ಕೆ.ಶಿವಕುಮಾರ್ ಟೀಂ […]

Advertisement

Wordpress Social Share Plugin powered by Ultimatelysocial