ಟಾಲಿವುಡ್​ನ ಜನಪ್ರಿಯ ನಿರೂಪಕಿ ಹಾಗೂ ನಟಿ ಅನಸೂಯ ಭಾರದ್ವಜ್ ಅವರು ತಮ್ಮ ಕುರಿತು ಪ್ರಕಟವಾದ ಸುದ್ದಿ ಒಂದ ಮೇಲೆ ಗರಂ ಆಗಿದ್ದಾರೆ.

ಹೈದರಾಬಾದ್​: ಟಾಲಿವುಡ್​ನ ಜನಪ್ರಿಯ ನಿರೂಪಕಿ ಹಾಗೂ ನಟಿ ಅನಸೂಯ ಭಾರದ್ವಜ್ ಅವರು ತಮ್ಮ ಕುರಿತು ಪ್ರಕಟವಾದ ಸುದ್ದಿ ಒಂದ ಮೇಲೆ ಗರಂ ಆಗಿದ್ದಾರೆ. ವರದಿಯಲ್ಲಿ ಅವರ ವಿರುದ್ಧ ಅವಹೇಳನಕಾರಿಯಾದ ಬರವಣಿಗೆ ಇಲ್ಲ. ಆದರೂ, ಅವರು ಗರಂ ಆಗಲು ಒಂದು ಕಾರಣವಿದೆ.

ಅದು ಏನಂತಾ ತಿಳಿಯುವ ಕುತೂಹಲವಿದ್ದರೆ ಮುಂದೆ ಓದಿ.

ಅನಸೂಯ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುತ್ತಾರೆ. ಆಗಾಗ ಫೋಟೋಶೂಟ್​ ಮಾಡಿಸುವ ಅನಸೂಯ, ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಅವರು ಬಿಳಿ ಬಣ್ಣದ ಸೀರೆಯನ್ನುಟ್ಟು ಮಾಡಿಸಿರುವ ಫೋಟೋವನ್ನು ಹಂಚಿಕೊಂಡಿದ್ದರು.

ಫೋಟೋಗಳ ಕುರಿತು ವೆಬ್​ಸೈಟ್​ ಒಂದು ಸುದ್ದಿಯನ್ನು ಪ್ರಕಟಿಸಿತ್ತು. ಬರವಣಿಗೆಯಲ್ಲಿ ಏನು ತಪ್ಪಿರಲಿಲ್ಲ ಮತ್ತು ಅವಹೇಳನವೂ ಇರಲಿಲ್ಲ. ಆದರೆ, ಸಂಖ್ಯೆಯೊಂದರ ಎಡವಟ್ಟು ಅನಸೂಯ ಕೋಪಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಹುಡುಗಿಯ ವಯಸ್ಸು ಕೇಳಬಾರದು ಅಂತಾರೆ. ಆದರೆ, ವರದಿಯಲ್ಲಿ ಅನಸೂಯ ವಯಸ್ಸನ್ನು ಉಲ್ಲೇಖಿಸಿದ್ದಾರೆ. ಇಷ್ಟೇ ಆಗಿದ್ದರೇ ಏನು ಆಗುತ್ತಿರಲಿಲ್ಲ. ಆದರೆ, ಅವರ ವಯಸ್ಸಿನ ಅಂಕಿಯನ್ನು ಹೆಚ್ಚು ಮಾಡಿರುವುದು ಅನಸೂಯ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅನಸೂಯ ನನಗೆ 40 ವರ್ಷವಲ್ಲ ಜಸ್ಟ್​ 36. ವಯಸ್ಸಾಗುವುದು ಮತ್ತು ಬೆಳೆಯುವುದು ಸಾಮಾನ್ಯ ವಿಷಯ. ನನ್ನ ವಯಸ್ಸನ್ನು ಹೇಳಲು ನಾನು ನಾಚಿಕೆಪಡುವುದಿಲ್ಲ. ಆದರೆ, ಸುದ್ದಿ ಬರೆಯುವಾಗ ಖಚಿತವಾದ ಮಾಹಿತಿ ಕೊಡಿ ಮತ್ತು ಸ್ವಲ್ಪ ಸಭ್ಯವಾಗಿ ಹೇಳಿದರೆ ಚೆನ್ನಾಗಿರುತ್ತದೆ. ಏಕೆಂದರೆ ಪತ್ರಿಕೋದ್ಯಮ ಒಂದು ಅಸ್ತ್ರ. ಸರಿಯಾಗಿ ಮಾಡದಿದ್ದರೆ ಹಿನ್ನಡೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಮ್ಮ ಜಗತ್ತಿಗೆ ಭೂಮಿ ಕೇಂದ್ರವಲ್ಲ, ಸೂರ್ಯನೇ ಕೇಂದ್ರ ಎಂಬ ವಾದವನ್ನು ಜನಗಳ ಮುಂದೆ ಮಂಡಿಸಿ, ಸ್ಥಾಪಿಸಿದ ವ್ಯಕ್ತಿಯೆಂದರೆ ನಿಕೊಲಾಸ್ ಕೋಪರ್ನಿಕಸ್.

Sat Feb 19 , 2022
ಖಗೋಳ ವಿಜ್ಞಾನಕ್ಕೆ ಹೊಸ ವೈಜ್ಞಾನಿಕ ತಿರುವು ಕೊಟ್ಟ ನಿಕೊಲಾಸ್ ಕೋಪರ್ನಿಕಸ್ 1473ರ ಫೆಬ್ರುವರಿ 19ರಂದು ಪೋಲೆಂಡಿನ ಥಾರ್ನ್ ಎಂಬ ಊರಲ್ಲಿ ಜನಿಸಿದರು. ಈತ ಮೂಲತಃ ಕಲಿತದ್ದು ವೈದ್ಯಶಾಸ್ತ್ರ. ಅದರಲ್ಲಿ ಪದವಿಯನ್ನೂ ಪಡೆದಿದ್ದರು. ಆದರೆ ಅವರ ಆಸಕ್ತಿಯೆಲ್ಲಾ ಖಗೋಳ ವಿಜ್ಞಾನದಲ್ಲೇ. ಅಂತಲೇ ಆತ ತಮ್ಮ ವ್ಯಾಸಂಗವನ್ನು ಬೊಲೊನ ವಿಶ್ವವಿದ್ಯಾಲಯದಲ್ಲಿ ಮುಂದುವರಿಸಿ ಖಗೋಳ ಶಾಸ್ತ್ರ ಕಲಿತರು. ರೋಮ್ ವಿಶ್ವವಿದ್ಯಾಲಯದಲ್ಲಿ ಖಗೋಳಶಾಸ್ತ್ರದ ಪ್ರಾಧ್ಯಾಪಕರಾದರು. ಮುಂದೆ ಆ ವೃತ್ತಿಯನ್ನು ಬಿಟ್ಟು ವೈದ್ಯವೃತ್ತಿ ಹಿಡಿದರು. ತುಂಬ ಕರುಣಾಮಯಿಯಾಗಿದ್ದ […]

Advertisement

Wordpress Social Share Plugin powered by Ultimatelysocial