ಕರ್ನಾಟಕದಲ್ಲಿ ಹಲವಾರು ಜನಪ್ರಿಯ ದೇವಾಲಯಗಳಿವೆ.

ದೇವಾಲಯಗಳ ಭೇಟಿಗಾಗಿಯೇ ಕರ್ನಾಟಕಕ್ಕೆ ಭಕ್ತರ ದಿಂಡು ಬರುತ್ತದೆ. ಆದರೆ ಈ ಕರ್ನಾಟಕದಲ್ಲಿರುವ ಎಲ್ಲ ದೇವಾಲಯಗಳು ಮುಜರಾಯಿ ವ್ಯಾಪ್ತಿಯ ದೇವಾಲಯಗಳು ಅಲ್ಲ. ನಾವಿಲ್ಲಿ ಮುಜರಾಯಿ ವ್ಯಾಪ್ತಿಯ ದೇವಾಲಯಗಳ ಆದಾಯದ ಬಗ್ಗೆ ವಿವರಣೆ ನೀಡಿದ್ದೇವೆ.ಕರ್ನಾಟಕದಲ್ಲಿ ಸುಮಾರು 1.85 ಲಕ್ಷ ದೇವಾಲಯಗಳಿದ್ದು, ಈ ಪೈಕಿ ಸುಮಾರು 34,563 ದೇವಾಲಯಗಳು ಮುಜರಾಯಿ ವ್ಯಾಪ್ತಿಯಲ್ಲಿರುವ ದೇವಾಲಯಗಳಾಗಿದೆ. ಈ ದೇವಾಲಯಗಳನ್ನು ಎ, ಬಿ, ಸಿ ಎಂದು ವರ್ಗಾವಣೆ ಮಾಡಲಾಗುತ್ತದೆ. ಆದಾಯದ ಲೆಕ್ಕಾಚಾರದಲ್ಲಿ ಈ ವಿಂಗಡನೆಯನ್ನು ಮಾಡಲಾಗಿದೆ.ಕರ್ನಾಟಕದಲ್ಲಿ ಮುಜರಾಯಿ ವ್ಯಾಪ್ತಿಯ ದೇವಾಲಯಗಳ ಪೈಕಿ ಸುಮಾರು 207 ದೇವಾಲಯಗಳ ವಾರ್ಷಿಕ ಆದಾಯವು 25 ಲಕ್ಷ ರೂಪಾಯಿಗಿಂತ ಅಧಿಕವಾಗಿದ್ದು ಇದು ಎ ಶ್ರೇಣಿಯ ದೇವಾಲಯಗಳಾಗಿದೆ. ಹಾಗೆಯೇ 139 ದೇವಾಲಯಗಳ ಆದಾಯವು ಐದು ಲಕ್ಷ ರೂಪಾಯಿಯಿಂದ 25 ಲಕ್ಷ ರೂಪಾಯಿಯ ನಡುವೆ ಬರುವ ಹಿನ್ನೆಲೆ ಇದು ಬಿ ಶ್ರೇಣಿಯ ದೇವಾಲಯ ಎಂದು ವರ್ಗೀಕರಿಸಲಾಗಿದೆ. ಹಾಗೆಯೇ 5 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯವನ್ನು ಹೊಂದಿರುವ ದೇವಾಲಯಗಳು ಸಿ ಶ್ರೇಣಿಯ ದೇವಾಲಯಗಳಾಗಿದ್ದು ಈ ಪಟ್ಟಿಯಲ್ಲಿ 34,217 ದೇವಾಲಯಗಳಿದೆ.

ಆದರೆ ಆದಾಯದ ಪ್ರಕಾರ, ಕರ್ನಾಟಕದ ಟಾಪ್ 10 ಮುಜರಾಯಿ ವ್ಯಾಪ್ತಿಯ ದೇವಾಲಯಗಳಾವುವು, ಆದಾಯ ಎಷ್ಟಿದೆ ಎಂಬ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ…

ಟಾಪ್ 1: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಯ ಕಬಕ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದಲ್ಲಿರುವ ದೇವಾಲಯವಾಗಿದೆ. ಇದು ಜಿಲ್ಲೆಯ ಹಾಗೂ ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದ್ದು, ಇದು ಆದಾಯದ ಲೆಕ್ಕಾಚಾರದಲ್ಲಿ ರಾಜ್ಯದ ಟಾಪ್ 1 ದೇವಾಲಯವಾಗಿದೆ. 2019ರಲ್ಲಿ ಈ ದೇವಾಲಯವು ಅಂದಾಜು 100 ಕೋಟಿ ಆದಾಯವನ್ನು ಗಳಿಸಿದೆ. ಹುಂಡಿಗೆ ಭಕ್ತರು ಹಾಕುವ ಕಾಣಿಕೆಯನ್ನು ಹೊರತುಪಡಿಸಿ, ದೇವಾಲಯಕ್ಕೆ ಬ್ಯಾಂಕ್ ಡೆಪಾಸಿಟ್‌ ಬಡ್ಡಿದರ, ಸೇವೆ, ದೇವಾಲಯದ ಹಾಲ್‌ ಬಾಡಿಗೆಯಿಂದಲೂ ಆದಾಯ ಲಭ್ಯವಾಗುತ್ತದೆ.

ಟಾಪ್ 2: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನಲ್ಲಿರುವ ದೇವಾಲಯವಾಗಿದೆ. ಇದು ಹಿಂದೂ ದೇವಾಲಯವಾಗಿದ್ದು, ಮೂಕಾಂಬಿಕಾ ದೇವಿಯ ದೇವಸ್ಥಾನವಾಗಿದೆ. ಕರ್ನಾಟಕ ಮಾತ್ರವಲ್ಲದೆ, ಕೇರಳ, ಬೇರೆ ರಾಜ್ಯಗಳಿಂದ ಈ ದೇವಾಲಯಕ್ಕೆ ಭಕ್ತರು ಆಗಮಿಸುತ್ತಾರೆ. 2019ರ ಲೆಕ್ಕಾಚಾರದ ಪ್ರಕಾರ ಈ ದೇವಾಲಯದ ವಾರ್ಷಿಕ ಆದಾಯವು 90-92 ಕೋಟಿ ರೂಪಾಯಿಯಾಗಿದೆ. ಇದು ಕರ್ನಾಟಕದ ಆದಾಯದ ಲೆಕ್ಕಾಚಾರದಲ್ಲಿ ಟಾಪ್‌ 10 ಮುಜರಾಯಿ ವ್ಯಾಪ್ತಿಯ ದೇವಾಲಯಗಳಲ್ಲಿ ಎರಡನೇ ಸ್ಥಾನದಲ್ಲಿದೆ.

ಟಾಪ್ 3: ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ

ಕರ್ನಾಟಕದಲ್ಲಿ ಆದಾಯದ ಲೆಕ್ಕಾಚಾರದಲ್ಲಿ ಮುಜರಾಯಿ ವ್ಯಾಪ್ತಿಯ ಟಾಪ್ 10 ದೇವಾಲಯಗಳ ಪೈಕಿ ಟಾಪ್ 3 ದೇವಾಲಯಗಳು ಕರಾವಳಿ ಭಾಗದ ದೇವಾಲಯಗಳೇ ಆಗಿದೆ. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನವು ಕರ್ನಾಟಕ ರಾಜ್ಯದಲ್ಲಿ ಅಧಿಕ ಭಕ್ತರು ಆಗಮಿಸುವ ದೇವಾಲಯಗಳಲ್ಲಿ ಒಂದಾಗಿದೆ. ಇದು ಮಂಗಳೂರಿನಿಂದ ಸುಮಾರು 24 ಕಿ.ಮೀ ದೂರದಲ್ಲಿರುವ ದೇವಾಲಯವಾಗಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ದೇಶದಲ್ಲಿ ಕಾಣಿಸಿಕೊಳ್ಳುವುದಕ್ಕೂ ಮುನ್ನ ದೇವಾಲಯದ ಆದಾಯವು 40-42 ಕೋಟಿ ರೂಪಾಯಿ ಆಗಿತ್ತು. ಈ ದೇವಾಲಯಕ್ಕೆ ಹುಂಡಿ, ಸೇವೆ ಹಾಗೂ ಕಾಣಿಕೆ ಮೂಲಕ ಅಧಿಕ ಆದಾಯ ಲಭ್ಯವಾಗುತ್ತದೆ.

ಟಾಪ್ 4: ಮೈಸೂರಿನ ಚಾಮುಂಡೇಶ್ವರಿ ದೇವಾಲಯ

ಮೊದಲ ಮೂರು ಸ್ಥಾನದಲ್ಲಿ ಕರಾವಳಿಯ ದೇವಾಲಯಗಳಿದ್ದರೆ ನಾಲ್ಕನೇ ಸ್ಥಾನದಲ್ಲಿ ಮೈಸೂರಿನ ಪ್ರಸಿದ್ಧ ದೇವಾಲಯವಿದೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಾಲಯವು ನಾಲ್ಕನೇ ಸ್ಥಾನದಲ್ಲಿದೆ. ಇದು ವಿಶೇಷ ಪ್ರವೇಶ ಟಿಕೆಟ್‌ನ ಮೂಲಕ, ಪ್ರಸಾದ ರೂಪದಲ್ಲಿ ಲಡ್ಡು ಮಾರಾಟ, ಸೇವೆಗಳು, ಇ-ಸೇವೆ, ಬ್ಯಾಂಕ್‌ಗಳಲ್ಲಿ ಡೆಪಾಸಿಟ್‌ನ ಬಡ್ಡಿದರದ ಮೂಲಕ ಆದಾಯವನ್ನು ಗಳಿಸುತ್ತದೆ. 2019ರಲ್ಲಿ ದೇವಾಲಯವು 30-33 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ.

ಟಾಪ್ 5: ನಂಜುಂಡೇಶ್ವರಿ ದೇವಾಲಯ

ಅತೀ ಹಳೆಯ ದೇವಾಲಯಗಳಲ್ಲಿ ನಂಜುಂಡೇಶ್ವರಿ ದೇವಾಲಯ ಕೂಡಾ ಒಂದಾಗಿದೆ. ಇದನ್ನು ಶ್ರೀಕಂಠೇಶ್ವರ ದೇವಾಲಯ ಎಂದು ಕೂಡಾ ಕರೆಯಲಾಗುತ್ತದೆ. ಇದು ಹುಂಡಿ ಕಾಣಿಕೆ, ಸೇವೆ ಹಾಗೂ ಪ್ರಸಾದದ ಮೂಲಕ ಆದಾಯವನ್ನು ಗಳಿಸುತ್ತದೆ. 2019ರಲ್ಲಿ ದೇವಾಲಯದ ವಾರ್ಷಿಕ ಆದಾಯ 15-20 ಕೋಟಿ ರೂಪಾಯಿ ಆಗಿದೆ.

ಟಾಪ್ 6: ಸವದತ್ತಿ ಯಲ್ಲಮ್ಮ ದೇವಾಲಯ

ಸವದತ್ತಿ ಯಲ್ಲಮ್ಮ ದೇವಾಲಯವನ್ನು ರೇಣುಕಾ ದೇವಸ್ಥಾನ ಎಂದೂ ಕೂಡ ಕರೆಯಲಾಗುತ್ತದೆ. ಇದು ಬೆಳಗಾವಿಯ ಸವದತ್ತಿ ಪಟ್ಟಣದಿಂದ 5 ಕಿ.ಮೀ ದೂರದಲ್ಲಿರುವ ಯಾತ್ರಾಸ್ಥಳವಾಗಿದೆ. ಪ್ರತಿ ವರ್ಷ ಅಕ್ಟೋಬರ್‌ನಿಂದ ಏಪ್ರಿಲ್ ತಿಂಗಳಿನಲ್ಲಿ ಎರಡು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಇಲ್ಲಿಗೆ ಕರ್ನಾಟಕ, ಆಂಧ್ರಪದೇಶ, ಗೋವಾ, ಮಹಾರಾಷ್ಟ್ರದಿಂದ ಭಕ್ತರು ಆಗಮಿಸುತ್ತಾರೆ. ಈ ದೇವಾಲಯದ ಆದಾಯವು 15-17 ಕೋಟಿ ರೂಪಾಯಿ ಆಗಿದೆ.

ಟಾಪ್ 7: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನಲ್ಲಿರುವ ಮಂದಾರ್ತಿ ಎಂಬ ಪ್ರದೇಶದಲ್ಲಿ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವಿದೆ. ರಾಜ್ಯದಲ್ಲಿ ಆದಾಯದ ಲೆಕ್ಕಾಚಾರದಲ್ಲಿ ಟಾಪ್ 10 ಪಟ್ಟಿಯಲ್ಲಿರುವ ಮುಜರಾಯಿ ವ್ಯಾಪ್ತಿಯ ದೇವಾಲಯಗಳಲ್ಲಿ ಕರಾವಳಿ ಭಾಗದ 4ನೇ ದೇವಾಲಯ ಇದಾಗಿದೆ. ಈ ದೇವಾಲಯಕ್ಕೆ ಪೂಜೆ, ಯಕ್ಷಗಾನದ ಮೂಲಕ ಆದಾಯ ಲಭಿಸುತ್ತದೆ. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದಲ್ಲಿ ಐದು ಮೇಳಗಳಿವೆ. ವರ್ಷದಲ್ಲಿ 1000ಕ್ಕೂ ಅಧಿಕ ಹರಕೆ ಆಟಗಳು ನಡೆಯುತ್ತದೆ. 2027-28ರವರೆಗೆ ಈಗಾಗಲೇ ಹರಕೆ ಆಟವು ಮುಂಗಡವಾಗಿ ಭರ್ತಿಯಾಗಿದೆ. ಈ ದೇವಾಲಯದ ಆದಾಯವು 10-12 ಕೋಟಿ ರೂಪಾಯಿ ಆಗಿದೆ.

ಟಾಪ್ 8: ಹುಲಿಗೆಮ್ಮ ದೇವಾಲಯ, ಕೊಪ್ಪಳ

ಆದಾಯದ ಲೆಕ್ಕಾಚಾರದಲ್ಲಿ ರಾಜ್ಯದ ಟಾಪ್ 10 ಮುಜರಾಯಿ ವ್ಯಾಪ್ತಿಯ ದೇವಾಲಯಗಳಲ್ಲಿ ಕೊಪ್ಪಳದ ಹುಲಿಗೆಮ್ಮ ದೇವಾಲಯ ಕೂಡಾ ಒಂದಾಗಿದೆ. ಹುಲಗಿ ಕ್ಷೇತ್ರ ಎಂಟುನೂರು ವರ್ಷಗಳ ಹಳೆಯ ದೇವಾಲಯವಾಗಿದೆ. ಕೋವಿಡ್ ಸಂದರ್ಭದಲ್ಲಿ ನಿರ್ಬಂಧಗಳಿದ್ದರೂ ಕೂಡಾ ಈ ದೇವಾಲಯಕ್ಕೆ ಭಕ್ತರ ದಂಡು ಹರಿದು ಬಂದಿತ್ತು. ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿ ಬೇರೆ ಬೇರೆ ರಾಜ್ಯದಿಂದ ಭಕ್ತರು ಈ ದೇವಾಲಯಕ್ಕೆ ಆಗಮಿಸುತ್ತಾರೆ. ಇದರ ಆದಾಯ 8-10 ಕೋಟಿ ರೂಪಾಯಿ ಆಗಿದೆ.

ಟಾಪ್ 9: ಬನಶಂಕರಿ ದೇವಸ್ಥಾನ, ಬೆಂಗಳೂರು

ರಾಜ್ಯದ ರಾಜಧಾನಿ ಬೆಂಗಳೂರಿನ ಬನಶಂಕರಿ ದೇವಸ್ಥಾನವೂ ಕೂಡಾ ಆದಾಯದ ಲೆಕ್ಕಾಚಾರದಲ್ಲಿ ರಾಜ್ಯದ ಟಾಪ್ 10 ಮುಜರಾಯಿ ವ್ಯಾಪ್ತಿಯ ದೇವಾಲಯಗಳಲ್ಲಿ ಒಂದಾಗಿದ್ದು, ಟಾಪ್ 9ನೇ ಸ್ಥಾನದಲ್ಲಿದೆ. ಇದು ಕನಕಪುರ ರಸ್ತೆಯಲ್ಲಿದೆ. ಈ ದೇವಾಲಯದ ಆದಾಯವು 8-10 ಕೋಟಿ ರೂಪಾಯಿ ಆಗಿದೆ.

ಟಾಪ್ 10: ಘಾಟಿ ಸುಬ್ರಹ್ಮಣ್ಯ ದೇವಸ್ಥಾನ, ದೊಡ್ಡಬಳ್ಳಾಪುರ

ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಘಾಟಿ ಸುಬ್ರಹ್ಮಣ್ಯ ಆದಾಯದ ಲೆಕ್ಕಾಚಾರದಲ್ಲಿ ರಾಜ್ಯದ ಟಾಪ್ 10 ಮುಜರಾಯಿ ವ್ಯಾಪ್ತಿಯ ದೇವಾಲಯವಾಗಿದೆ. 600 ವರ್ಷಗಳ ಇತಿಹಾಸವನ್ನು ಈ ದೇವಾಲಯವು ಹೊಂದಿದೆ. ಡಿಸೆಂಬರ್ ತಿಂಗಳಿನಲ್ಲಿ ಈ ದೇವಾಲಯದಲ್ಲಿ ಜಾತ್ರೆ ನಡೆಯಲಿದ್ದು, ಬೇರೆ ಬೇರೆ ರಾಜ್ಯಗಳಿಂದ ಜನರು ಆಗಮಿಸುತ್ತಾರೆ. ಈ ದೇವಾಲಯದ ಆದಾಯವು 8-10 ಕೋಟಿ ರೂಪಾಯಿ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜಕೀಯ ಜಾಹೀರಾತಿನ ಮೇಲಿನ ನಿಷೇಧ ತೆಗೆದು ಹಾಕಿದ ಟ್ವಿಟರ್!

Thu Jan 5 , 2023
ನ್ಯೂಯಾರ್ಕ್ : ಕಳೆದ ವರ್ಷ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್ ಅನ್ನು ಖರೀದಿಸಿದ ನಂತರ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಎಲಾನ್ ಮಸ್ಕ್ ಅವರ ಇತ್ತೀಚಿನ ಬದಲಾವಣೆಯು ರಾಜಕೀಯ ಜಾಹೀರಾತಿನ ಮೇಲಿನ 3 ವರ್ಷಗಳ ಹಳೆಯ ನಿಷೇಧವನ್ನು ತೆಗೆದು ಹಾಕಲಾಗಿದೆ ಎಂದು ಹೇಳಿದೆ. “ನಾವು ಅಮೆರಿಕದಲ್ಲಿ ಕಾರಣ ಆಧಾರಿತ ಜಾಹೀರಾತುಗಳಿಗಾಗಿ ನಮ್ಮ ಜಾಹೀರಾತು ನೀತಿಯನ್ನು ಸಡಿಲಿಸುತ್ತಿದ್ದೇವೆ” ಎಂದು ಕಂಪನಿಯು ಟ್ವೀಟ್ ಮಾಡಿದೆ. “ಮುಂಬರುವ ವಾರಗಳಲ್ಲಿ ನಾವು ಅನುಮತಿಸುವ ರಾಜಕೀಯ ಜಾಹೀರಾತನ್ನು ವಿಸ್ತರಿಸಲು ನಾವು […]

Advertisement

Wordpress Social Share Plugin powered by Ultimatelysocial