ಅತಿಹೆಚ್ಚು ಕಲೆಕ್ಷನ್ ಮಾಡಿದ ಟಾಪ್ 5 ಚಿತ್ರಗಳಾವುವು?

2022ರಲ್ಲಿ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಭಾರತದ ಬಹುತೇಕ ಎಲ್ಲಾ ಚಿತ್ರರಂಗಗಳೂ ಸಹ ಚಿನ್ನದ ಬೆಳೆ ಬೆಳೆದಿವೆ ಎಂದೇ ಹೇಳಬಹುದು‌. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ವೈರಸ್ ಕಾಟದಿಂದಾಗಿ ಲಾಕ್ ಡೌನ್ ಸಮಸ್ಯೆ ಎದುರಿಸಿದ್ದ ಚಿತ್ರರಂಗಗಳು ನಷ್ಟ ಅನುಭವಿಸಿದ್ದರು.ಚಿತ್ರಗಳು ಬಿಡುಗಡೆಯಾಗದ ಕಾರಣ ಹಾಗೂ ಜನರು ಹೆದರಿ ಚಿತ್ರಮಂದಿರಗಳಿಗೆ ಬಾರದ ಕಾರಣ ಹಲವಾರು ಚಿತ್ರಮಂದಿರಗಳಿಗೆ ಬೀಗ ಬಿದ್ದಿತ್ತು.ಈ ವರ್ಷ ಏಪ್ರಿಲ್ 14ರಂದು ತೆರೆಕಂಡಿದ್ದ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರ ಕೆಜಿಎಫ್ ಚಾಪ್ಟರ್ 2 ಈ ವರ್ಷ ಅತಿಹೆಚ್ಚು ಗಳಿಸಿದ ಕನ್ನಡ ಚಿತ್ರ ಎನಿಸಿಕೊಂಡಿದೆ. ವಿಶ್ವದಾದ್ಯಂತ 1250 ಕೋಟಿ ಗಳಿಸಿದ ಕೆಜಿಎಫ್ ಚಾಪ್ಟರ್ 2 ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಈ ವರ್ಷ ಭಾರತದಲ್ಲಿ ಅತಿಹೆಚ್ಚು ಗಳಿಸಿದ ಚಿತ್ರ ಎಂಬ ದಾಖಲೆಯನ್ನೂ ಸಹ ಬರೆದಿದೆ. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 404 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಈ ವರ್ಷ ಅತಿಹೆಚ್ಚು ಗಳಿಸಿದ ಸ್ಯಾಂಡಲ್‌ವುಡ್ ಚಿತ್ರಗಳ ಪೈಕಿ ಎರಡನೇ ಸ್ಥಾನವನ್ನು ಅಲಂಕರಿಸಿದೆ.ಅನುಪ್ ಭಂಡಾರಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಶನ್‌ನ ಬಹು ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಚಿತ್ರ ವಿಕ್ರಾಂತ್ ರೋಣ ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಕನ್ನಡದ ಮೂರನೇ ಚಿತ್ರ ಎನಿಸಿಕೊಂಡಿದೆ.ನಟ ಪುನೀತ್ ರಾಜ್‌ಕುಮಾರ್ ನಿಧನದ ನಂತರ ಬಿಡುಗಡೆಗೊಂಡ ಅಪ್ಪು ನಟನೆಯ ಮೊದಲ ಚಿತ್ರ ಜೇಮ್ಸ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಪುನೀತ್ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆಗೊಂಡಿದ್ದ ಈ ಚಿತ್ರ 150 ಕೋಟಿ ಗಳಿಸಿ ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಕನ್ನಡದ ನಾಲ್ಕನೇ ಚಿತ್ರ ಎನಿಸಿಕೊಂಡಿದೆ.777 ಚಾರ್ಲಿ ಈ ವರ್ಷ ಬಿಡುಗಡೆಗೊಂಡ ವಿಭಿನ್ನ ಕಥಾಹಂದರ ಹೊಂದಿದ್ದ ಚಿತ್ರ. ಶ್ವಾನ ಪ್ರೇಮಿಗಳ ಮನಗೆದ್ದಿದ್ದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕೂಡ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ವಿಶ್ವದಾದ್ಯಂತ 105 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ 777 ಚಾರ್ಲಿ ಈ ವರ್ಷ ಅತಿಹೆಚ್ಚು ಗಳಿಸಿದ ಕನ್ನಡ ಚಿತ್ರಗಳ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಅಲ್-ಖೈದಾ ಮುಖ್ಯಸ್ಥ ಅಲ್-ಜವಾಹಿರಿಯನ್ನು ಕೊಂದ MQ-9 UAV

Wed Dec 21 , 2022
  ಹಂಟರ್-ಕಿಲ್ಲರ್ ಮಾನವರಹಿತ ವೈಮಾನಿಕ ವಾಹನಗಳ (UAVs) ವರ್ಗಕ್ಕೆ ಸೇರುವ ಎಂಕ್ಯೂ -9 ರೀಪರ್ ಡ್ರೋನ್ಗಳನ್ನು ಖರೀದಿಸಲು ಭಾರತವು ಅಮೆರಿಕದೊಂದಿಗೆ ಬಿಲಿಯನ್ ಡಾಲರ್ಗಳ ಒಪ್ಪಂದವನ್ನು ಮಾಡಿಕೊಳ್ಳುವ ಸಾಧ್ಯತೆಯಿದೆ. ನವದೆಹಲಿ: ಹಂಟರ್-ಕಿಲ್ಲರ್ ಮಾನವರಹಿತ ವೈಮಾನಿಕ ವಾಹನಗಳ (UAVs) ವರ್ಗಕ್ಕೆ ಸೇರುವ ಎಂಕ್ಯೂ -9 ರೀಪರ್ ಡ್ರೋನ್ಗಳನ್ನು ಖರೀದಿಸಲು ಭಾರತವು ಅಮೆರಿಕದೊಂದಿಗೆ ಬಿಲಿಯನ್ ಡಾಲರ್ಗಳ ಒಪ್ಪಂದವನ್ನು ಮಾಡಿಕೊಳ್ಳುವ ಸಾಧ್ಯತೆಯಿದೆ. ನಿಖರವಾದ ಸ್ಟ್ರೈಕ್ಗಳಿಗೆ ಲೇಸರ್-ಗೈಡೆಡ್ ಹೆಲ್ಫೈರ್ ಕ್ಷಿಪಣಿಗಳನ್ನು ಬಳಸುವುದರಿಂದ ಅವುಗಳನ್ನು ವಿಶ್ವದ ಅತ್ಯಂತ ಅಪಾಯಕಾರಿ […]

Advertisement

Wordpress Social Share Plugin powered by Ultimatelysocial