ಸರ್ಕಾರದ ಮಹತ್ವದ ಸಪ್ತಪದಿ ಯೋಜನೆ

ಜು.18- ರಾಜ್ಯ ಸರ್ಕಾರದ ಮಹತ್ವದ ಸಪ್ತಪದಿ ಯೋಜನೆ ಮೇಲೆ ಕೊರೋನಾ ವೈರಸ್ ಕರಿನೆರಳು ಬಿದ್ದಿದ್ದು, ಈ ವರ್ಷ ಸಾಮೂಹಿಕ ವಿವಾಹ ನಡೆಸುವುದು ಸಂಶಯ ಎಂದು ಹೇಳಲಾಗುತ್ತಿದೆ.ಯೋಜನೆಯಡಿ ಒಮ್ಮೆಲೆ 1,000 ಜೋಡಿಗಳಿಗೆ ವಿವಾಹ ನಡೆಸಲು ಹಾಗೂ 8 ಗ್ರಾಂ ಮಂಗಳಸೂತ್ರದೊಂದೆ ವಧು ಹಾಗೂ ವರನಿಗೆ ರೂ.55,000 ರೇಷ್ಮೆ ಬಟ್ಟೆಗಳನ್ನು ನೀಡಲು ಸರ್ಕಾರ ನಿರ್ಧರಿಸಿತ್ತು.ಮುಂಜರಾಯಿ ಇಲಾಖೆಯ 100 ದೇಗುಲಗಳಲ್ಲಿ ಈ ವಿವಾಹಗಳನ್ನು ನಡೆಸಬೇಕಿತ್ತು. ಏಪ್ರಿಲ್26 ಮತ್ತು ಮೇ.24 ರಂದು ಸಾಮೂಹಿಕ ವಿವಾಹ ನಡೆಸಲು ನಿರ್ಧರಿಸಲಾಗಿತ್ತು.ಲಾಕ್ ಡೌನ್  ಪರಿಣಾಮ ಕಾರ್ಯಕ್ರಮ ನಡೆಸಲು ಸಾಧ್ಯವಾಗಲಿಲ್ಲ.ಬಳಿಕ ಸರ್ಕಾರ ಮತ್ತೆ ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ನಡೆಸುವುದಾಗಿ ತಿಳಿಸಿತ್ತು. ಈ ಹಿಂದಿನ ಪರಿಸ್ಥಿತಿಗಿಂತಲೂ ರಾಜ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಈ ವರ್ಷ ಸಾಮೂಹಿಕ ವಿವಾಹ ನಡೆಯಲು ಸಾಧ್ಯವಿಲ್ಲ ಎಂದು ಮುಜರಾಯಿ ಇಲಾಖೆಯ ಆಯುಕ್ತ ರೋಹಿಣಿ ಸಿಂಧೂರಿಯವರು ತಿಳಿಸಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಲಾಕ್ ಡೌನ್ ನ ಅನುಭವವನ್ನು ಬರೆಯಲಿರುವ ಸೋನು ಸೂದ್

Fri Jul 17 , 2020
ಕೊರೊನಾ ಲಾಕ್ ಡೌನ್ ನಂತರ ವಲಸೆ ಕಾರ್ಮಿಕರ ಕಷ್ಟಕ್ಕೆ ನೆರವಾದ ನಟ ಸೋನು ಸೂದ್, ಈ ಅನುಭವವನ್ನು ಪುಸ್ತಕ ರೂಪದಲ್ಲಿ ಹೊರತರುತ್ತಿದ್ದಾರೆ. ಈಗಾಗಲೆ ಸೋನು ಸೂದ್ ಪುಸ್ತಕ ಬರೆಯಲು ಶುರು ಮಾಡಿದ್ದು, ವರ್ಷಾಂತ್ಯದಲ್ಲಿ ಪುಸ್ತಕ ಹೊರಬರುವ ಸಾಧ್ಯತೆ ಇದೆ. ಪೆಂಗ್ವಿನ್ ರ್ಯಾಂಡಮ್ ಹೌಸ್ ಸಂಸ್ಥೆಯು ಪುಸ್ತಕವನ್ನು ಹೊರತರುತ್ತಿದೆ. ಪುಸ್ತಕ ಬರೆಯುವ ಬಗ್ಗೆ ಮಾತನಾಡಿರುವ ಸೋನು ಸೂದ್ ” ಕಳೆದ ಮೂರೂವರೆ ತಿಂಗಳಿಂದ ನನಗೆ ಜೀವನವನ್ನು ಬದಲಾಯಿಸಿದ ಅನುಭವವಾಗಿದೆ. ವಲಸಿಗರೊಂದಿಗೆ ದಿನಕ್ಕೆ […]

Advertisement

Wordpress Social Share Plugin powered by Ultimatelysocial