ಸಂಚಾರ ಉಲ್ಲಂಘನೆ 85.83 ಕೋಟಿ ದಾಟಿದ ದಂಡ ಸಂಗ್ರಹ.

ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಗೆ ಶೇ. 50 ರಿಯಾಯಿತಿ ಲಾಭ ಪಡೆದಿರುವ ವಾಹನಗಳ ಮಾಲೀಕರು ಕಳೆದ 8 ದಿನಗಳಿಂದ 85.83 ಕೋಟಿಗೂ ಹೆಚ್ಚಿನ ದಂಡ ಪಾವತಿಸಿದ್ದು ಇಂದು ದಾಖಲೆ ಪ್ರಮಾಣದ 17.61ಕೋಟಿ ದಂಡ ಸಂಗ್ರಹ ಮಾಡಲಾಗಿದೆ.ವಾಹನಗಳ ಸಂಚಾರ ನಿಯಮ ಉಲ್ಲಂಘನೆಯ ಸಂಬಂಧ ಇಲ್ಲಿಯವರೆಗೆ 85.83 ಕೋಟಿಗೂ ಹೆಚ್ಚು ದಂಡ ಸಂಗ್ರಹಗೊಂಡಿದೆ ಒಟ್ಟಾರೆ 31,11,546 ಪ್ರಕರಣಗಳು ಇತ್ಯರ್ಥಗೊಂಡು 85.83,07,541 ರೂಗಳ ದಂಡ ಸಂಗ್ರಹವಾಗಿದೆ ‌ಕಳೆದ ಫೆ.8ರಂದು 9,06,94,800 ರೂ ನಿನ್ನೆ 12,36,35,450 ರೂ,ಇಂದು ರಾತ್ರಿ 8ರವರೆಗೆ ದಾಖಲೆ ಪ್ರಮಾಣದ 85.83,07,541 ರೂಗಳ ದಂಡ ಸಂಗ್ರಹವಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.ದಂಡ ಪಾವತಿಗೆ ಇಂದು ವಾಹನಗಳ ಮಾಲೀಕರು ಮುಗಿಬಿದ್ದಿದ್ದು 85.83,07,541 ರೂಗಳ ಗಡಿಯನ್ನು ದಾಟಿದೆ.ಕಳೆದ ಫೆ. 3ರಂದು ಈ ವಿನಾಯಿತಿ ಜಾರಿಗೆ ಬಂದಿದ್ದು, ಮೊದಲ ದಿನವೇ 5,61,45,000 ರೂಪಾಯಿಗೂ ಅಧಿಕ ದಂಡದ ಮೊತ್ತ ಸಂಗ್ರಹವಾಗಿತ್ತು. ಎರಡನೇ ದಿನ ಬರೋಬ್ಬರಿ 6,80,72,500 ರೂ. ದಂಡ ಸಂಗ್ರಹವಾಗಿತ್ತು.ಮೂರನೇ ದಿನ 7,49,94,870 ರೂಗಳು ಸಂಗ್ರಹವಾದರೆ,ನಾಲ್ಕನೇ ದಿನ 9,57,12,420, ಸಂಗ್ರಹಗೊಂಡರೆ,ಐದನೇ ದಿನ 8,13,12,200 ಆರನೇ ದಿನವಾದ ನಿನ್ನೆ 9,06,94,800 ರೂ ಸಂಗ್ರಹಗೊಂಡು ಒಟ್ಟು ,51,85,40,531 ರೂ ಸಂಗ್ರಹವಾಗಿ 18,26,060 ಪ್ರಕರಣಗಳು ಇತ್ಯರ್ಥಗೊಂಡಿದ್ದು ನಿನ್ನೆ ದಂಡ ಪಾವತಿ ಬಿರುಸಿನಿಂದ ನಡೆದು12,36,35,450 ರೂ ಗಳ ದಾಖಲೆ ಪ್ರಮಾಣದ ದಂಡ ಸಂಗ್ರಹವಾಗಿತ್ತು.ನಗರದ ಸಂಚಾರ ಪೊಲೀಸ್‌ ಠಾಣೆಗಳು ಮಾತ್ರವಲ್ಲದೆ, ಇನ್ಫಾಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರ(ಟಿಎಂಸಿ)ದಲ್ಲಿ ಕೌಂಟರ್‌ ತೆರೆದು ಬಾಕಿ ದಂಡದ ಮೊತ್ತ ಪಾವತಿಗೆ ಅವಕಾಶ ಕಲ್ಪಿಸಲಾಗಿದ್ದು, ದಂಡ ಪಾವತಿಗೆ ಭಾರಿ ಪ್ರಮಾಣದ ಜನಸಂದಣಿ ಉಂಟಾಗಿತ್ತು.ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಜ.27ರಂದು ನಡೆದ ಸಭೆಯಲ್ಲಿ ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಬಾಕಿ ಇರುವ ಟ್ರಾಫಿಕ್ ಫೈನ್ ಪಾವತಿಗೆ ವಿನಾಯಿತಿ ನೀಡುವಂತೆ ಚರ್ಚೆ ನಡೆಸಿದ್ದರು. ಇದಕ್ಕೆ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಗ್ರೀನ್ ಸಿಗ್ನಲ್ ತೋರಿದ್ದರು. ಇದರ ಮೇರೆಗೆ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯಾದ್ಯಂತ ಸಂಚಾರ ಪೊಲೀಸರು ದಾಖಲಿಸಿರುವ ಸಂಚಾರ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.ಈ ಬಗ್ಗೆ ಕಾನೂನು ಇಲಾಖೆ ಅಧಿಕಾರಿಗಳ ಒಪ್ಪಿಗೆ ಪಡೆದ ಸಾರಿಗೆ ಇಲಾಖೆ, ಶೇ.50 ವಿನಾಯಿತಿ ನೀಡಿದೆ. ಹಲವು ದಿನಗಳಿಂದ ಬಾಕಿ ಉಳಿಸಿಕೊಂಡಿರುವ ಸಂಚಾರ ದಂಡವನ್ನು ಫೆ.11ರ ಒಳಗೆ ಪಾವತಿಸಿದರೇ ಶೇ.50 ವಿನಾಯಿತಿ ಸಿಗಲಿದೆ.ದಂಡ ಪಾವತಿಗೆ ದಿನಾಂಕ ವಿಸ್ತರಣೆ ಮಾಡುವಂತೆ ಒತ್ತಾಯವೂ ಕೇಳಿ ಬರುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೇಷ ರಾಶಿ ಭವಿಷ್ಯ

Mon Feb 13 , 2023
  ಸ್ನೇಹಿತರು ನಿಮ್ಮ ಆಲೋಚನೆಗಳ ಮೇಲೆ ಗಮನಾರ್ಹ ಪ್ರಭಾವ ಬೀರಬಹುದಾದ ಯಾರಾದರೂಬ್ಬರನ್ನು ನಿಮಗೆ ಪರಿಚಯಿಸುತ್ತಾರೆ. ನಿಮ್ಮ ಬಳಿ ಹೆಚ್ಚು ಹಣವಿಲ್ಲ ಎಂದು ಯೋಚಿಸಿದರೆ, ಇಂದು ಮನೆಯ ದೊಡ್ಡವರಿಂದ ಹಣವನ್ನು ಹಣವನ್ನು ಸಂಗ್ರಹಿಸುವ ಸಲಹೆ ತೆಗೆದುಕೊಳ್ಳಿ . ನಿಮ್ಮ ಕುಟುಂಬದೊಂದಿಗೆ ಸಾಮಾಜಿಕ ಚಟುವಟಿಕೆ ಎಲ್ಲರನ್ನೂ ಆರಾಮವಾಗಿ ಮತ್ತು ಆಹ್ಲಾದಕರ ಮನಸ್ಥಿತಿಯಲ್ಲಿಡುತ್ತದೆ. ಪ್ರೀತಿಪಾತ್ರರು ಇಂದು ನಿಮ್ಮಿಂದ ಏನು ಬೇಕಾದರೂ ಬೇಡಿಕೊಳ್ಳಬಹುದು ಆದರೆ ನೀವು ಅದನ್ನು ಪೂರೈಸಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ನಿಮ್ಮ ಪ್ರೀತಿಪಾತ್ರರು ನಿಮ್ಮ […]

Advertisement

Wordpress Social Share Plugin powered by Ultimatelysocial