ಹವಾ ಅಂದ್ರೆ ಹವಾ ಡಿ ಬಾಸ್‌ ಹವಾ – ಅಕ್ಟೋಬರ್ 15 ರಂದು ದರ್ಶನ್ ‘ಕ್ರಾಂತಿ’ ಗೆ ಮುಹೂರ್ತ

 

ಡಿ ಬಾಸ್‌ ಸಿನಿಮಾ ಅಂದ್ರೆನೇ ಹಾಗೆ ಮಾಸ್‌ ಅಭಿಮಾನಿಗಳಿಗೆ ಈ ಮಾಸ್‌ ಹೀರೋ ಅಂದ್ರೆ ಅದೇನೋ ಹುಚ್ಚು. ಇನ್ನು ಇವರ ಸಿನಿಮಾದ ಸಣ್ಣ ಸುಳಿವು ಬಂದ್ರು ಹಬ್ಬದಂತೆ ಸಂಭ್ರಮಿಸುತ್ತಾರೆ. ಹೀಗಾಗಿ ಅಭಿಮಾನಿಗಳಿಗೆ ಕ್ರಾಂತಿ ಸಿನಿಮಾ ತಂಡ ಗುಡ್ ನ್ಯೂಸ್ ನೀಡಿದೆ. ಈ ಹಿಂದೆ ಕ್ರಾಂತಿ ಚಿತ್ರಕ್ಕೆ D 55 ಎಂಬ ಹೆಸರಿನ ಪೋಸ್ಟ್‌ ಬಿಡುಗಡೆ ಮಾಡಿದ್ರು.ಅಲ್ಲೇ ಶುರುವಾಯ್ತು ನೋಡಿ  ದರ್ಶನ್‌ ಹವಾ .ಇದೀಗ ಅಕ್ಟೋಬರ್ 15 ರ ವಿಜಯದಶಮಿಯ ಶುಭ ಸಂದರ್ಭದಲ್ಲಿ ಕ್ರಾಂತಿ ಸಿನಿಮಾ ಮೂಹೂರ್ತ ನಡೆಯಲಿದ್ದು ಶೀಘ್ರದಲ್ಲೇ ಶೂಟಿಂಗ್ ಆರಂಭವಾಗಲಿದೆ. ಮೀಡಿಯಾ ಹೌಸ್ ಬ್ಯಾನರ್ ನಲ್ಲಿ ಶೈಲಜಾ ನಾಗ್ ಮತ್ತು ಬಿ ಸುರೇಶ್ ನಿರ್ಮಾಣ ಮಾಡುತ್ತಿರುವ ಕ್ರಾಂತಿ ಚಿತ್ರ  ತಮಿಳು, ತೆಲುಗು ಮತ್ತು ಮಲಯಾಳಂ ಹಾಗೂ ಹಿಂದಿಯಲ್ಲಿ ತಯಾರಾಗಲಿದೆ. ಈ ಹಿಂದೆ ಯಜಮಾನ ಸಿನಿಮಾವನ್ನು ಪ್ರೊಡಕ್ಷನ್ ಹೌಸ್ ಮತ್ತು ನಿರ್ದೇಶಕರು ಒಂದಾಗಿ ತಯಾರಿಸಿದ್ರು. ಅದು ಹಿಟ್ ಕಂಡಿತ್ತು. ಈ ತಂಡ ಮತ್ತೊಂದು ಹಿಟ್ ಸಿನಿಮಾ ನೀಡಲು ಮುಂದಾಗಿದ್ದು, ಭಾರಿ ಕುತೂಗಲ ಹುಟ್ಟಿಸಿದೆ.

 

 

Please follow and like us:

Leave a Reply

Your email address will not be published. Required fields are marked *

Next Post

ವಿಮಾನ ಪತನ ಇಬ್ಬರು ದಾರುಣ ಸಾವು..!

Tue Oct 12 , 2021
  ಕ್ಯಾಲಿಫೋರ್ನಿಯಾದ ಜನದಟ್ಟಣೆ ಇರುವ ಪ್ರದೇಶದಲ್ಲಿ ಸಣ್ಣ ವಿಮಾನವೊಂದು ದುರಂತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೇ ವಿಮಾನ ಪತನವಾದ ಬಳಿಕ ಉಂಟಾದ ಬೆಂಕಿಗೆ ಎರಡು ಮನೆಗಳು ಸೇರಿದಂತೆ ಸಾಕಷ್ಟು ವಾಹನಗಳು ಅಗ್ನಿಗೆ ಆಹುತಿಯಾಗಿವೆ.ಇನ್ನು  ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಸಿಬ್ಬಂದಿ ಘಟನಾ ಸ್ಥಳವಾದ ಸ್ಯಾನ್​ ಡಿಯಾಗೋದ ಉಪನಗರವಾದ ಸಾಂಟಿಗೆ ಆಗಮಿಸಿದ್ದು, ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸಿದ್ದಾರೆ. ಫಾಕ್ಸ್​ 5 ಸ್ಯಾನ್ ಡಿಯಾಗೋ ವಿಮಾನವು ಅವಳಿ ಎಂಜಿನ್​​ ಸೆಸೆನಾ 340ಯಾಗಿದೆ, ಆರು […]

Advertisement

Wordpress Social Share Plugin powered by Ultimatelysocial