ರೈಲು ಅತ್ಯಂತ ವೇಗವಾಗಿ ಚಲಿಸುವ ವಾಹನ ಎಂದು ನಿಮಗೆಲ್ಲರಿಗೂ ತಿಳಿದಿದೆ.

 

ರೈಲು ಅತ್ಯಂತ ವೇಗವಾಗಿ ಚಲಿಸುವ ವಾಹನ ಎಂದು ನಿಮಗೆಲ್ಲರಿಗೂ ತಿಳಿದಿದೆ.  ಚುಕುಬುಕು ಎಂದು ವೇಗವಾಗಿ ಚಲಿಸುವ ಈ ರೈಲಿನಲ್ಲಿ ಚಲಿಸುವುದು ಅಂದ್ರೆ ಅದೇನೋ ಖುಷಿ.

ಆದರೀಗ ಇಲ್ಲೊಂದು ರೈಲು ಅತೀ ನಿಧಾನವಾಗಿ ಚಲಿಸುತ್ತಂತೆ . ಅರೇ ರೈಲು ನಿಧಾನವಾಗಿಯಾ ಅಂತ ಶಾಕ್​ ಆಗ್ಬೇಡಿ. ನಿಮಗೆ ಆ ರೈಲು ಯಾವುದು ಅಂತ ತಿಳಿಸ್ತೀವಿ ನೋಡಿ. ಇದು ಭಾರತದ ಅತ್ಯಂತ ನಿಧಾನಗತಿಯ ರೈಲು… ಇದು ಕೆಲ್ಲರ್, ಕೂನೂರು, ವೆಲ್ಲಿಂಗ್ಟನ್, ಲವ್‌ಡೇಲ್, ಊಟಕಮಂಡ್ ನಿಲ್ದಾಣಗಳ ಮೂಲಕ ಹೋಗುತ್ತದೆ. ಮೆಟ್ಟುಪಾಳ್ಯಂ – ಊಟಿ ನೀಲಗಿರಿ ಪ್ಯಾಸೆಂಜರ್ ರೈಲಿನ ಕೋಚ್‌ಗಳನ್ನು ನೀಲಿ ಮತ್ತು ಕೆನೆ ಬಣ್ಣದ ಮರದಿಂದ ಮಾಡಲಾಗಿದ್ದು, ನೀಲಗಿರಿ ಬೆಟ್ಟಗಳ ರಮಣೀಯ ಸೌಂದರ್ಯವನ್ನು ಆನಂದಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

ವೆಬ್‌ಸೈಟ್ ಪ್ರಕಾರ, ನೀಲಗಿರಿ ಮೌಂಟೇನ್ ರೈಲ್ವೇ ನಿರ್ಮಾಣವನ್ನು ಮೊದಲು 1854 ರಲ್ಲಿ ಪ್ರಸ್ತಾಪಿಸಲಾಯಿತು. 1891 ರಲ್ಲಿ ಕೆಲಸ ಪ್ರಾರಂಭವಾಯಿತು

ಪರ್ವತ ಭೂಪ್ರದೇಶದ ತೊಂದರೆಯಿಂದಾಗಿ 1908 ರಲ್ಲಿ ಪೂರ್ಣಗೊಂಡಿತು. ಯುನೆಸ್ಕೋ ಪ್ರಕಾರ, ಈ ರೈಲು 326 ಮೀಟರ್‌ನಿಂದ 2,203 ಮೀಟರ್ ಎತ್ತರವನ್ನು ತಲುಪುತ್ತದೆ.

ಈ ರೈಲು ಪ್ರಥಮ ದರ್ಜೆ ಮತ್ತು ಸಾಮಾನ್ಯ ಬೋಗಿಗಳನ್ನು ಹೊಂದಿದೆ. ಈ ರೈಲು ಮೆಟ್ಟುಪಾಳ್ಯಂ ನಿಲ್ದಾಣದಿಂದ ಬೆಳಗ್ಗೆ 7:10 ಕ್ಕೆ ಹೊರಟು ಮಧ್ಯಾಹ್ನ 12 ಗಂಟೆಗೆ ಊಟಿ ತಲುಪುತ್ತದೆ. ಈ ರೈಲು ಒಟ್ಟು 46 ಕಿಮೀ ದೂರವನ್ನು ಕ್ರಮಿಸಲು ಸುಮಾರು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಅದಕ್ಕಾಗಿಯೇ ಇದನ್ನು ಟಾಯ್ ಟ್ರೈನ್ ಎಂದು ಕರೆಯಲಾಗುತ್ತದೆ.

ಈ ರೈಲು ಊಟಿಯಿಂದ ಮಧ್ಯಾಹ್ನ 2 ಗಂಟೆಗೆ ಹೊರಡುತ್ತದೆ ಮತ್ತು ಸಂಜೆ 5:30 ಕ್ಕೆ ಮೆಟ್ಟುಪಾಳ್ಯಂ ನಿಲ್ದಾಣಕ್ಕೆ ಹಿಂತಿರುಗುತ್ತದೆ. ರೈಲು ಟಿಕೆಟ್‌ಗಳನ್ನು ರೈಲ್ವೆ ನಿಲ್ದಾಣದ ಕೌಂಟರ್‌ನಲ್ಲಿ ಅಥವಾ IRCTC ವೆಬ್‌ಸೈಟ್‌ನಲ್ಲಿ ಬುಕ್ ಮಾಡಬಹುದು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಪರಿಚಿತ ಶವ ಪ್ರಕರಣ ಬೇಧಿಸಿದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು.

Wed Jan 18 , 2023
ಅಪರಿಚಿತ ಶವ ಪ್ರಕರಣ ಬೇಧಿಸಿದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಅನುಮಾನಸ್ಪದವಾಗಿ ಸಿಕ್ಕ ಮೃತದೇಹದ ಅಸಲಿಯತ್ತು ಬೆಳಕಿಗೆ ಜನವರಿ 13 ರಂದು ಸುಂಕದಕಟ್ಟೆ ಮೋರಿಯಲ್ಲಿ ಶವವೊಂದು ಸಿಕ್ಕಿತ್ತು ಅಸಹಜ‌ ಸಾವು ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ವೇಳೆ ಮೃತವ್ಯಕ್ತಿ ವೆಂಕಟಸ್ವಾಮಿ(52) ಅನ್ನೋದು ಪತ್ತೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು ಮರಣೋತ್ತರ ಪರೀಕ್ಷೆಯಲ್ಲಿ ಇದು ಕೊಲೆ ಅನ್ನೋದು ಬೆಳಕಿಗೆ ಎಡಭಾಗದ ಎಲುಬುಗಳು ಮುರಿದು ರಕ್ತಸ್ರಾವವಾಗಿ ಶ್ವಾಸಕೋಶ ಸಂಕುಚಿತ ಗೊಂಡಿತ್ತು ನಂತರ ತನಿಖೆ […]

Advertisement

Wordpress Social Share Plugin powered by Ultimatelysocial