ತೂಕ ಇಳಿಸಬೇಕಾ…? ರಾತ್ರಿ ಊಟಕ್ಕೆ ಇದನ್ನೇ ತಿನ್ನಿ

ಭಾರತೀಯರಿಗೆ ಅನ್ನ, ಬೇಳೆ ಸಾರು ಅತ್ಯಂತ ಪ್ರಿಯವಾದ ಆಹಾರ. ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಮಧ್ಯಾಹ್ನದೂಟಕ್ಕೆ ಬೇಳೆ ಸಾರು, ಅನ್ನ ಇದ್ದೇ ಇರುತ್ತೆ. ರುಚಿಯ ಜೊತೆಗೆ ತೃಪ್ತಿ ನೀಡುವ ಊಟವಿದು. ದಾಲ್‌ ಚಾವಲ್‌ ತಿನ್ನುವ ಮೂಲಕ ಹಸಿದ ಹೊಟ್ಟೆಯನ್ನು ಪಳಗಿಸಿ, ನೀವು ತೂಕ ಕೂಡ ಇಳಿಸಬಹುದು ಅನ್ನೋದು ವೈಜ್ಞಾನಿಕವಾಗಿಯೇ ಸಾಬೀತಾಗಿದೆ.ನ್ಯೂಟ್ರಿಶನ್‌ ಗಳು ರಾತ್ರಿ ಊಟಕ್ಕೆ ದಾಲ್ ಚಾವಲ್ ತಿನ್ನಲು ಸಲಹೆ ನೀಡುತ್ತಾರೆ. ರಾತ್ರಿ 8 ಗಂಟೆಯೊಳಗೆ ಊಟ ಮುಗಿಸಬೇಕು. ಮಲಗುವ ಎರಡು ಗಂಟೆಗಳ ಮೊದಲು ರಾತ್ರಿಯ ಊಟವನ್ನು ಸೇವಿಸಬೇಕು. ಇದು ಫಿಟ್ ಆಗಲು ಸಹಾಯ ಮಾಡುತ್ತದೆ.

ಇದಲ್ಲದೆ ಪ್ರತಿನಿತ್ಯ ಕನಿಷ್ಠ 45 ನಿಮಿಷಗಳ ಕಾಲ ಕೆಲಸ ಅಥವಾ ವ್ಯಾಯಾಮ ಮಾಡಬೇಕು. ಬೇಳೆ ಸಾರಿನಲ್ಲಿ ಎಲ್ಲಾ ಅಗತ್ಯ ಪೋಷಕಾಂಶಗಳಿವೆ. ಪ್ರೋಟೀನ್‌, ವಿಟಮಿನ್‌, ಕಬ್ಬಿಣದ ಅಂಶ, ಕ್ಯಾಲ್ಷಿಯಂ, ಕಾರ್ಬೋಹೈಡ್ರೇಟ್‌ ಹಾಗೂ ಫೈಬರ್‌ ಅಂಶ ಹೇರಳವಾಗಿದೆ. ಬೇಳೆ ಸಾರು, ಅನ್ನದೊಂದಿಗೆ ಕಲೆತಾಗ ದೇಹಕ್ಕೆ ಬೇಕಾದ ಪೋಷಣೆ ಕೊಡುವುದರ ಜೊತೆಗೆ ಹಸಿವನ್ನು ನಿಗ್ರಹಿಸುತ್ತದೆ.

ಅನ್ನ ಕೂಡ ಪ್ರೋಟೀನ್‌ ಭರಿತವಾಗಿದ್ದು, ಕರುಳಿನ ಸ್ನೇಹಿ ಆಹಾರ ಎನಿಸಿಕೊಂಡಿದೆ. ಇದಲ್ಲದೆ ಬೇರೆ ಬೇರೆ ಬಗೆಯ ಕಾಳುಗಳು ಮತ್ತು ಧಾನ್ಯಗಳನ್ನು ಕೂಡ ಸೇವಿಸುವುದ ಉತ್ತಮ. ಮೊಳಕೆ ಕಾಳನ್ನ ಸಲಾಡ್‌ ರೀತಿ ಮಾಡಿ ತಿನ್ನಬಹುದು. ಅಥವಾ ಕಾಳುಗಳಿಂದ ಹಪ್ಪಳ ಮಾಡಿಕೊಳ್ಳಬಹುದು. ಸಾರು, ಸಾಂಬಾರ್‌ ಮಾಡಬಹುದು. ಉಪ್ಪಿನಕಾಯಿ, ಹಲ್ವಾ, ಇಡ್ಲಿ, ಲಾಡು, ದೋಸೆ ಹೀಗೆ ಬೇರೆ ಬೇರೆ ವಿಧಾನಗಳಲ್ಲಿ ಧಾನ್ಯಗಳನ್ನು ಸೇವಿಸಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಾಯಿರಾ ಬಾನು ತನ್ನೊಂದಿಗೆ ಸಾಜಿಶ್ ಚಿತ್ರಕ್ಕೆ ಬೇಡ ಎಂದು ಹೇಳುತ್ತಾಳೆ ಎಂದು ಧರ್ಮೇಂದ್ರ ಆಶಿಸಿದರು, ಆದರೆ ಅವರು ಒಪ್ಪಿಕೊಂಡರು!

Wed Mar 16 , 2022
ಧರ್ಮೇಂದ್ರ  ಅವರು ತಮ್ಮ 1975 ರ ಚಲನಚಿತ್ರ ಸಾಜಿಶ್ ಬಗ್ಗೆ ಆಸಕ್ತಿದಾಯಕ ಉಪಾಖ್ಯಾನವನ್ನು ಹಂಚಿಕೊಂಡಿದ್ದಾರೆ. ನಟನು ತಾನು ಎಂದಿಗೂ ಚಲನಚಿತ್ರವನ್ನು ಮಾಡಲು ಬಯಸುವುದಿಲ್ಲ ಮತ್ತು ಚಲನಚಿತ್ರ ನಿರ್ಮಾಪಕನು ಅವನನ್ನು ಕ್ಷಮಿಸುವಂತೆ ಮಾಡುವ ಆಲೋಚನೆಯೊಂದಿಗೆ ಬಂದಿದ್ದೇನೆ ಎಂದು ಹೇಳಿದರು. ಆದಾಗ್ಯೂ, ಅವರ ಯೋಜನೆ ವಿಫಲವಾಗಿದೆ ಮತ್ತು ಅವರು ಕೆಲಸದಲ್ಲಿ ಕೊನೆಗೊಂಡರು ಸಾಯಿರಾ ಬಾನು ಚಿತ್ರದಲ್ಲಿ. ಅವರು ಟ್ವಿಟರ್‌ನಲ್ಲಿ ಸಾಜಿಶ್ ಅವರ ಹಾಡನ್ನು ಹಂಚಿಕೊಂಡಿದ್ದಾರೆ ಮತ್ತು ಅದರ ಹಿಂದಿನ ಕಥೆಯನ್ನು ಹಂಚಿಕೊಂಡಿದ್ದಾರೆ. ಇದನ್ನೂ […]

Advertisement

Wordpress Social Share Plugin powered by Ultimatelysocial