ಟರ್ಕಿ ಭೂಕಂಪ: ಸಾವಿನ ಸಂಖ್ಯೆ ೫೦ ಸಾವಿರ ದಾಟುವ ಸಾಧ್ಯತೆ.

ಭೂಕಂಪನದಿಂದ ತತ್ತರಿಸಿರುವ ಟರ್ಕಿ ಮತ್ತು ಸಿರಿಯಾದಲ್ಲಿ ಸಾವಿನ ಸಂಖ್ಯೆ ದಿನೇ ದಿನೇ ಏರುತ್ತಿದ್ದು, ಇದುವರೆಗೂ ೨೮ ಸಾವಿರ ಮಂದಿ ಭೂಕಂಪನದಿಂದ ಪ್ರಾಣ ಕಳೆದುಕೊಂಡಿದ್ದು, ಸಾವಿನ ಸಂಖ್ಯೆ ೫೦ ಸಾವಿರ ದಾಟಲಿದೆ ಎಂದು ಅಂದಾಜಿಸಲಾಗಿದೆ.ಭೂಕಂಪನದಿಂದ ಇದುವರೆಗೂ ಟರ್ಕಿಯಲ್ಲಿ ೨೪,೬೧೭ ಮಂದಿ ಮೃತಪಟ್ಟಿದ್ದರೆ, ಸಿರಿಯಾದಲ್ಲಿ ೩,೫೭೪ ಮಂದಿ ಮೃತಪಟ್ಟಿದ್ದು, ಟರ್ಕಿ ಮತ್ತು ಸಿರಿಯಾದಲ್ಲಿ ೫.೩ ಮಿಲಿಯನ್ ಜನ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಭೂಕಂಪ ಪೀಡಿತ ಪ್ರದೇಶಗಳಿಂದ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಟಿರ್ಕಿಯಲ್ಲಿ ಹೊಸದಾಗಿ ೫.೯೦ ಲಕ್ಷ, ಹಾಗೂ ಸಿರಿಯಾದಿಂದ ೨.೮೪ ಲಕ್ಷ ಮಂದಿಯನ್ನು ಸುರಕ್ಷಿತ ಸಥಳಗಳೀಗೆ ಸ್ಥಳಾಂತರಿಸಾಗಿದೆ. ಇವರುಗಳಿಗೆ ಆಹಾರ ಪದಾರ್ಥಗಳನ್ನು ಪೂರೈಸುವುದಕ್ಕಾಗಿ ನೆರವು ಒದಗಿಸುವಂತೆ ವಿಶ್ವಸಂಸ್ಥೆ ಎಲ್ಲ ದೇಶಗಳಿಗೆ ಮನವಿ ಮಾಡಿದೆ.ಭೂಕಂಪನದಿಂದ ಉರುಳಿ ಬಿದ್ದಿರುವ ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಸಾವಿನ ಸಂಖ್ಯೆ ೫೦ ಸಾವಿರ ದಾಟುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.ಭೂಕಂಪನದಿಂದ ಕುಸಿದು ಬಿದ್ದಿರುವ ಅವಶೇಷಗಳಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಹಲವರನ್ನು ರಕ್ಷಿಸಲಾಗಿದೆ. ಭೂಕಂಪನದಿಂದ ಜೀವ ಉಳಿಸಿಕೊಂಡಿರುವವರಿಗೆ ಕೊರೆಯುವ ಚಳಿ ಬಾಧಿಸುತ್ತಿದ್ದು, ಚಳಿಯಿಂದ ಜನ ನಲುಗಿ ಹೋಗಿದ್ದಾರೆ. ಕೊರೆಯುವ ಚಳಿ ಭೂಕಂಪನ ಪೀಡಿತ ಜನರನ್ನು ನೋವನ್ನು ಹೆಚ್ಚಿಸಿದ್ದು, ಚಳಿಯಿಂದ ರಕ್ಷಣೆ ಪಡೆಯಲು ಬೆಂಕಿ ಕಾಯಿಸಿಕೊಳ್ಳುತ್ತಿರುವ ದೃಶ್ಯಗಳು ಸಾಮನ್ಯವೆನಿಸಿದೆ.
ರಕ್ಷಣಾ ಕಾರ್ಯದಲ್ಲಿ ೩೨ ಸಾವಿರಕ್ಕೂ ಹೆಚ್ಚು ಜನ ತೊಡಗಿಕೊಂಡಿದ್ದು, ವಿವಿಧ ದೇಶಗಳ ೮೨೯೪ ರಕ್ಷಣಾ ಯೋಧರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಅವಶೇಷಗಳಡಿಯಲ್ಲಿ ೧೧೦ ಗಂಟೆಕಾಲ ಸಿಲುಕಿದ್ದಮೂವರನ್ನು ಸಿರಿಯಾದಲ್ಲಿ ರಕ್ಷಿಸಲಾಗಿದೆ. ದಕ್ಷಿಣ ಟರ್ಕಿಯಲ್ಲೂ ೧೦೪ ಗಂಟ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಮಹಿಳೆಯೊಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಟರ್ಕಿಯಲ್ಲಿ ಭೂಕಂಪನದಿಂದ ೧೨,೧೪೧ ಕಟ್ಟಡಗಳು ಧ್ವಂಸವಾಗಿವೆ ಎಂದು ಹೇಳಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಮ್ಮ ರಸ್ತೆ ಕೆಟ್ಟದ್ದಾಗಿದೆ.

Sun Feb 12 , 2023
ನಮ್ಮ ರಸ್ತೆ ಎಷ್ಟು ಕೆಟ್ಟದಾಗಿದೆ ಎಂದರೆ ನಾನು ಕಾರು ಬಿಟ್ಟು ರೈಲಿನಲ್ಲಿ ಪ್ರಯಾಣ ಮಾಡಬೇಕಾಗಿದೆ ಎಂದು ಉಲ್ಲೇಖಿಸಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ.ಇಲ್ಲಿನ ಚೆನ್ನೈ ಮತ್ತು ರಾಣಿಪೇಟ್ ನಡುವಿನ ರಾಷ್ಟ್ರೀಯ ಹೆದ್ದಾರಿಯನ್ನು ದುರಸ್ತಿ ಮಾಡಿಕೊಡಲು ಕೇಂದ್ರ ಸಚಿವರಲ್ಲಿ ಮನವಿ ಮಾಡಿರುವ ಅವರು, ಈ ರಸ್ತೆ ವಿಭಾಗವು ಚೆನ್ನೈ ಮತ್ತು ಅದರ ಬಂದರುಗಳಿಂದ ಕಾಂಚೀಪುರಂ, ವೆಲ್ಲೂರು, ರಾಣಿಪೇಟ್, ಹೊಸೂರು […]

Advertisement

Wordpress Social Share Plugin powered by Ultimatelysocial