ಉಡುಪಿ : ಜಿಲ್ಲೆಯ ಶಾಸಕ ರಘುಪತಿ ಭಟ್ ಅವರು, ಕುಂದಾಪುರದ ಶಾಲೆಯಲ್ಲಿನ ಹಿಜಾಬ್ ವಿವಾದದ ಬಗ್ಗೆ ಹಲವು ಮಾಹಿತಿಯನ್ನು ಹೊರ ಹಾಕಿದ್ದರು.

ಉಡುಪಿ : ಜಿಲ್ಲೆಯ ಶಾಸಕ ರಘುಪತಿ ಭಟ್  ಅವರು, ಕುಂದಾಪುರದ ಶಾಲೆಯಲ್ಲಿನ ಹಿಜಾಬ್ ವಿವಾದದ  ಬಗ್ಗೆ ಹಲವು ಮಾಹಿತಿಯನ್ನು ಹೊರ ಹಾಕಿದ್ದರು. ಈ ಬೆನ್ನಲ್ಲೇ ಅವರಿಗೆ ಹಲವರು ಕರೆ ಮಾಡಿ ಕೊಲೆ ಬೆದರಿಕೆ ಹಾಕುತ್ತಿರೋದಾಗಿ ತಿಳಿದು ಬಂದಿದೆ.ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅವರಿಗೆ ಗನ್ ಮ್ಯಾನ್   ಕೂಡ ನಿಯೋಜಿಸಲಾಗಿದೆ.ಶಾಸಕ ರಘುಪತಿ ಭಟ್ ಅವರಿಗೆ ವಿವಿಧ ಸಂಖ್ಯೆಗಳಿಂದ ಇಂಟರ್ನೆಟ್ ಕರೆಗಳನ್ನು ಮಾಡುತ್ತಿರುವಂತ ಅನೇಕರು, ಮುಸ್ಲಮಾನರ ಬಗ್ಗೆ ಮೆರೆಯುವುದು ಬೇಡ. ನಿನ್ನನ್ನು ನಾವು ನೋಡಿಕೊಳ್ಳುತ್ತೇವೆ ಎಂಬುದಾಗಿ ಕೊಲೆ ಮಾಡುವ ಬೆದರಿಕೆ ಕರೆಗಳು ಬರುತ್ತಿದ್ದಾವೆ ಎನ್ನಲಾಗಿದೆ. ಈ ಸಂಬಂಧ ಶಾಸಕರು ಗೃಹ ಸಚಿವರಿಗೆ ಮೌಖಿಕವಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.ಈ ಬಗ್ಗೆ ಪ್ರತಿಕ್ರಿಯಿಸಿರುವಂತ ಅವರು, ನಾನು ಇದಕ್ಕೆಲ್ಲ ಹೆದರೋದಿಲ್ಲ. ಹೀಗೆ ಕರೆಗಳು ಅನೇಕವು ಈಗಾಗಲೇ ಬಂದಿವೆ. ಉಡುಪಿ ಮುಸಲ್ಮಾನರಿಂದ ಕರೆಗಳು ಬಂದಿಲ್ಲ. ಉಡುಪಿ, ಬೆಂಗಳೂರು ಮುಸಲ್ಮಾನರಿಂದ ವಿರೋಧವಿಲ್ಲ. ಉಡುಪಿ ಮುಸ್ಲೀಂ ಒಕ್ಕೂಟದ ಖಾಜಿ ನನ್ನನ್ನು ಬೆಂಬಲಿಸಿದ್ದಾರೆ ಎಂದು ತಿಳಿಸಿದ್ದಾರೆಇತ್ತ ಶಾಸಕ ರಘುಪತಿ ಭಟ್ ಗೆ ಬೆದರಿಕೆ ಕರೆ ಬರುತ್ತಿರುವ ಹಿನ್ನಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಉಡುಪಿ ಎಸ್ ಪಿ ವಿಷ್ಣುವರ್ಧನ್ ಅವರು, ಗನ್ ಮ್ಯಾನ್ ನಿಯೋಜಿಸಿ ಆದೇಶಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಶಾಸಕರಿಗೆ ಭದ್ರತೆಯನ್ನು ಕಲ್ಪಿಸುವಂತ ಕ್ರಮ ಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

COVID-19: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 50,407 ಹೊಸ ಪ್ರಕರಣಗಳು, 1,36,962 ಚೇತರಿಕೆ ಮತ್ತು 804 ಸಾವುಗಳು ವರದಿಯಾಗಿದೆ

Sat Feb 12 , 2022
  ದೇಶದಲ್ಲಿ 50,407 ಹೊಸ ಕೋವಿಡ್ 19 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ತಿಳಿಸಿದೆ. ಇದರೊಂದಿಗೆ, ದೇಶದ ಸಕ್ರಿಯ ಕ್ಯಾಸೆಲೋಡ್ ಪ್ರಸ್ತುತ 6,10,443 ರಷ್ಟಿದೆ, ಇದು ಒಟ್ಟು ಪ್ರಕರಣಗಳ ಶೇಕಡಾ 1.43 ರಷ್ಟಿದೆ. ಭಾರತದಲ್ಲಿ ದೈನಂದಿನ ಧನಾತ್ಮಕತೆಯ ದರವು 3.48 ಪ್ರತಿಶತ ಮತ್ತು ಸಾಪ್ತಾಹಿಕ ಧನಾತ್ಮಕತೆಯ ದರವು 5.07 ಪ್ರತಿಶತದಲ್ಲಿ ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 1,36,962 ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು […]

Advertisement

Wordpress Social Share Plugin powered by Ultimatelysocial