KARNATAKA:ನಾಳೆಯಿಂದ 3 ದಿನ ಹೈಸ್ಕೂಲ್‌, ಪ.ಪೂರ್ವ, ಪದವಿ ಎಂಜಿನಿಯರ್‌ ಕಾಲೇಜುಗಳಿಗೆ ರಜೆ;

ಬೆಂಗಳೂರು: ನಾಳೆಯಿಂದ 3 ದಿನ ಹೈ ಸ್ಕೂಲ್‌, ಪ.ಪೂರ್ವ, ಪದವಿ ಎಂಜಿನಿಯರ್‌ ಕಾಲೇಜುಗಳಿಗೆ ರಜೆ ನೀಡಲಾಗುವುದು ಅಂತ ಸಚಿವ ಅಶ್ವತ್‌ ನಾರಾಯಣ್‌ ತಿಳಿಸಿದ್ದಾರೆ. ಈ ಬಗ್ಗೆ ಅವರು ಸುದ್ದಿಗಾರರ ಜೊತೆಗೆ ಮಾತನಾಡುತ್ತ ಮಾಹಿತಿ ನೀಡಿದರು. ನಾಳೆಯಿಂದ 3 ದಿನ ಹೈ ಸ್ಕೂಲ್‌, ಪ.ಪೂರ್ವ, ಪದವಿ ಎಂಜಿನಿಯರ್‌ ಕಾಲೇಜುಗಳಿಗೆ ರಜೆ ನೀಡಲಾಗುವುದು ಅಂತ ಅವರು ಹೇಳಿದರು.

ಹಿಜಾಬ್‌ ವಿವಾದ ರಾಜ್ಯದಲ್ಲಿ ಹೆಚ್ಚಿದ್ದು, ಈ ವಿವಾದ ಹೈ ಸ್ಕೂಲ್‌, ಪ.ಪೂರ್ವ, ಪದವಿ ಎಂಜಿನಿಯರ್‌ ಕಾಲೇಜುಗಳಿಗೆ ಗಳಿಗೆ ವಿಸ್ತರಣೆಯಾಗಬಾರದು ಎನ್ನುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಇತರೆ ಕಡೆ ಈ ಪ್ರತಿಭಟನೆ ನಡೆದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲಿದೆ ಹೀಗಾಗಿ ಮುಂಜಾಗ್ರತ ಕ್ರಮವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಚಿವ ಅಶ್ವಥ್‌ ನಾರಾಯಣ್‌ ಅವರ ನೇತೃತ್ವದಲ್ಲಿ ಪದವಿ ಕಾಲೇಜು ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ಈ ನಡುವೆ ದೆಹಲಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ರಾಜ್ಯದ ಜನತೆಯಲ್ಲಿ ಶಾಂತಿ ಕಾಪಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಸದ್ಯ ಈ ವಿವಾದವು ನ್ಯಾಯಾಪೀಠದ ಮುಂದೆ ಇದ್ದು, ನ್ಯಾಯಾಲಯದ ತೀರ್ಪು ಕಾಯುವಂತೆ ಅವರು ಮನವಿ ಮಾಡಿದರು. ಇದೇ ವೇಳೇ ತಮ್ಮ ಸಚಿವ ಸಂಪುಟದ ಸಹೋದ್ಯೋಗಳಿಗೆ ನೀಡುತ್ತಿರುವ ಹೇಳಿಕೆಗೂ ಕೂಡ ಅವರು ವಿರೋಧ ವ್ಯಕ್ತಪಡಿಸಿದರು. ಇನ್ನೂ ಗಲಾಟೆಯಾಗಿರುವ ಪ್ರದೇಶದಲ್ಲಿ ರಜೆ ನೀಡುವಂತೆ ಸೂಚನೆ ನೀಡಿರುವೆ. ಇಂದು ಸಂಜೆ ಬೆಂಗಳೂರಿಗೆ ತೆರಳಿದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಾಗುವುದು ಅಂತ ತಿಳಿಸಿದರು. ಇನ್ನೂ ಯಾರು ಕೂಡ ಪ್ರಚೋದನೆ ಮಾಡುವ ಕೆಲಸ ಮಾಡಬಾರದು, ಈಗಾಗಲೇ ಹೈಕೋರ್ಟ್‌ ನಲ್ಲಿ ವಿಚಾರಣೆ ನಡೆಯುತ್ತಿದೆ, ಹೈಕೋರ್ಟ್‌ನಿಂದ ಅಂತಿಮ ಆದೇಶ ಬರುವ ತನಕ ತಾಳ್ಮೆಯಿಂದ ಇರುವಂತೆ ಅವರು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಧಾನಸಭೆಗೆ ರಾಜೀನಾಮೆ ನೀಡಿ ಬಿಜೆಪಿ ತೊರೆದ ತ್ರಿಪುರದ 2 ಶಾಸಕರು ಕಾಂಗ್ರೆಸ್‌ ಸೇರ್ಪಡೆ

Tue Feb 8 , 2022
  ತ್ರಿಪುರಾ ಶಾಸಕರಾದ ಸುದೀಪ್ ರಾಯ್ ಬರ್ಮನ್ ಮತ್ತು ಆಶಿಶ್ ಕುಮಾರ್ ಸಹಾ ರಾಜೀನಾಮೆ ನೀಡಿದರು ವಿಧಾನಸಭೆಯಿಂದ ಸೋಮವಾರ ಭಾರತೀಯ ಜನತಾ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಇಬ್ಬರು ಶಾಸಕರು ಗ್ರ್ಯಾಂಡ್ ಓಲ್ಡ್ ಪಾರ್ಟಿಗೆ ಸೇರುವ ಮೊದಲು ದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿಯಾದರು. 60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಯಲ್ಲಿ ಪಕ್ಷದ ಬಲ ಈಗ […]

Advertisement

Wordpress Social Share Plugin powered by Ultimatelysocial