ಉಕ್ರೇನ್‌ ಯುದ್ಧ :

ವದೆಹಲಿ: ವರ್ಷ ಪೂರೈಸಿದ ಉಕ್ರೇನ್‌ ಯುದ್ಧ ಕೊನೆಗೊಳಿಸುವ ಸಲುವಾಗಿ ಸೇನೆ ಹಿಂಪಡೆಯಲು ರಷ್ಯಾದ ಮೇಲೆ ಒತ್ತಡ ಹೇರುವ ವಿಶ್ವಸಂಸ್ಥೆಯ ನಿರ್ಣಯದಿಂದ ಭಾರತ ಹೊರಗುಳಿಯಿತು. ಉಭಯ ರಾಷ್ಟ್ರಗಳ ಸಂಘರ್ಷದಲ್ಲಿ ಭಾರತ ಮತ್ತೊಮ್ಮೆ ತಟಸ್ಥ ನಿಲುವು ತೆಗೆದುಕೊಂಡಿತು.ಜಾಗತಿಕ ಶಾಂತಿ ಕಾಪಾಡುವಲ್ಲಿ ವಿಶ್ವಸಂಸ್ಥೆಯ ಸಾಮರ್ಥ್ಯವನ್ನೂ ಭಾರತ ಪ್ರಶ್ನಿಸಿತು.ಆದಾಗ್ಯೂ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ‘ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಸಮ್ಮತ ಮತ್ತು ಶಾಶ್ವತ ಶಾಂತಿ’ ಆದಷ್ಟು ಶೀಘ್ರ ಸ್ಥಾಪಿಸಬೇಕೆಂದು ಉಕ್ರೇನ್ ಮತ್ತು ಅದರ ಮಿತ್ರರಾಷ್ಟ್ರಗಳು ನಿರ್ಣಯ ಮಂಡಿಸಿದವು. 193 ಸದಸ್ಯ ಬಲದ ವಿಶ್ವಸಂಸ್ಥೆಯಲ್ಲಿ 141 ರಾಷ್ಟ್ರಗಳ ಬೆಂಬಲದೊಂದಿಗೆ ನಿರ್ಣಯ ಅಂಗೀಕಾರವಾಯಿತು. ನಿರ್ಣಯದ ವಿರುದ್ಧ ಏಳು ರಾಷ್ಟ್ರಗಳು ಮಾತ್ರ ಮತ ಚಲಾಯಿಸಿದವು.ಮತದಾನದಿಂದ ಹೊರಗುಳಿದ ಭಾರತದ ನಿಲುವನ್ನೇ ಪಾಕಿಸ್ತಾನ, ಚೀನಾ ಮತ್ತು ಇತರ 29 ರಾಷ್ಟ್ರಗಳು ಅನುಸರಿಸಿದವು. ಉಕ್ರೇನ್‌ ಅಷ್ಟೇ ಅಲ್ಲ, ಫ್ರಾನ್ಸ್‌, ಜರ್ಮನಿ ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳು ಹಾಗೂ ಐರೋಪ್ಯ ಒಕ್ಕೂಟವು ನಿರ್ಣಯ ಬೆಂಬಲಿಸುವಂತೆ ಭಾರತಕ್ಕೆ ಮನವಿ ಮಾಡಿಕೊಂಡಿದ್ದವು.ಭಾರತದ ನಿರ್ಧಾರಕ್ಕೆ ವಿವರಣೆ ನೀಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ರುಚಿರಾ ಕಾಂಬೊಜ್ ಅವರು, ‘ವಿಶ್ವಸಂಸ್ಥೆಯ ವ್ಯವಸ್ಥೆ ಮತ್ತು ಅದರ ಪ್ರಮುಖ ಅಂಗ ಭದ್ರತಾ ಮಂಡಳಿಯು 1945ರ ವಿಶ್ವ ನಿರ್ಮಾಣದ ಆಧಾರದ ಮೇಲೆ ರಚಿತವಾಗಿದೆ. ಸಮಕಾಲೀನ ಸವಾಲುಗಳನ್ನು ಎದುರಿಸಲು, ಜಾಗತಿಕ ಶಾಂತಿ ಮತ್ತು ಸುರಕ್ಷತೆ ಕಾಪಾಡಲು ಇದು ನಿಷ್ಪರಿಣಾಮಕಾರಿಯಾಗಿಲ್ಲವೇ? ರಷ್ಯಾ- ಉಕ್ರೇನ್‌ ಸಂಘರ್ಷ ಕೊನೆಗಾಣಿಸಲು ಉಭಯತ್ರರು ಒಪ್ಪುವ ಪರಿಹಾರ ಮಾರ್ಗದ ಹತ್ತಿರ ನಾವು ತಲುಪಿದ್ದೀವಾ’ ಎಂದು ಪ್ರಶ್ನಿಸಿದರು.ಪ್ರಧಾನಿ ಮೋದಿ ಅವರು ಪುಟಿನ್‌ ಜತೆಗಿನ ದ್ವಿಪಕ್ಷೀಯ ಮಾತುಕತೆಯಲ್ಲಿ ‘ಇದು ಯುದ್ಧದ ಯುಗವಲ್ಲ’ವೆಂದು ನೀಡಿದ್ದ ಸಂದೇಶವನ್ನು ರುಚಿರಾ ಪುನರುಚ್ಚರಿಸಿದರು.’ಸಂಘರ್ಷ ಶಮನಕ್ಕೆ ಮಾತುಕತೆ ಮತ್ತು ರಾಜತಾಂತ್ರಿಕತೆಯೇ ಏಕೈಕ ಕಾರ್ಯಸಾಧ್ಯ ಮಾರ್ಗವೆಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ. ಈಗಿನ ನಿರ್ಣಯದ ಉದ್ದಿಶ್ಯ, ಅದರಲ್ಲಿರುವ ಅಂತರ್ಗತ ಮಿತಿ ಗಮನಿಸಿದರೆ, ಶಾಶ್ವತ ಶಾಂತಿ ಸ್ಥಾಪನೆಯ ನಮ್ಮ ಅಪೇಕ್ಷಿತ ಗುರಿ ತಲುವುದಕ್ಕೆ ನಿರ್ಬಂಧ ಹಾಕಿಕೊಂಡಂತಿಲ್ಲವೇ?’ ಎಂದು ರುಚಿರಾ ಹೇಳಿದರು.ಆಕ್ರಮಣದಿಂದ ಉಕ್ರೇನ್‌ಗೆ ಆಗಿರುವ ಹಾನಿಗೆ ಸೂಕ್ತ ಪರಿಹಾರ ಒದಗಿಸಲು ಮತ್ತು ಯುದ್ಧಕ್ಕೆ ರಷ್ಯಾವನ್ನು ಹೊಣೆಯಾಗಿಸಿ 2022ರ ನವೆಂಬರ್‌ನಲ್ಲಿ ಮಂಡಿಸಿದ ಕರಡು ನಿರ್ಣಯದ ಮತದಾನದಿಂದಲೂ ಭಾರತ ಅಂತರ ಕಾಯ್ದುಕೊಂಡು, ತಟಸ್ಥವಾಗಿ ಉಳಿದಿತ್ತು.ಭದ್ರತಾ ಮಂಡಳಿಗೆ ಬೇಕು ಭಾರತದ ಪ್ರಾತಿನಿಧ್ಯ’ಮುಂಬೈ : ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದ್ಯದ ವ್ಯವಸ್ಥೆ ನಿಷ್ಕ್ರಿಯವಾಗಿದೆ. ಭದ್ರತಾ ಮಂಡಳಿಯ ಪುನರ್‌ ರಚನೆ ಅತ್ಯಗತ್ಯ. ಇದರಲ್ಲಿ ಭಾರತಕ್ಕೆ ಹೆಚ್ಚಿನ ಪಾತ್ರವಿರಬೇಕು’ ಎಂದು ಬ್ರಿಟನ್‌ ಮಾಜಿ ಪ್ರಧಾನಿ ಲಿಜ್‌ ಟ್ರಸ್‌ ಶುಕ್ರವಾರ ಅಭಿಪ್ರಾಯಪಟ್ಟರು.ಉಕ್ರೇನ್ ಯುದ್ಧದ ಮೇಲೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಯಾವುದೇ ನಿರ್ಣಾಯಕ ಪರಿಣಾಮ ಬೀರುವುದಿಲ್ಲ. ಹಾಗಾಗಿ, ನಾವು ತ್ವರಿತಗತಿಯಲ್ಲಿ ಉಕ್ರೇನ್‌ಗೆ ನ್ಯಾಟೊ ಸದಸ್ಯತ್ವ ನೀಡಬೇಕಾಗಿತ್ತು ಎಂದು ಟ್ರಸ್ ಹೇಳಿದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗ್ರಾಹಕರೇ ಗಮನಿಸಿ :

Sat Feb 25 , 2023
ನವದೆಹಲಿ : ಫೆಬ್ರವರಿ ಕೆಲವೇ ದಿನಗಳಲ್ಲಿ ಕೊನೆಗೊಳ್ಳಲಿದೆ. ಅದರ ನಂತರ ಮಾರ್ಚ್ ತಿಂಗಳು ಬರುತ್ತದೆ. ಫೆಬ್ರವರಿಯಲ್ಲಿ ಸರ್ಕಾರವು ಅನೇಕ ನಿಯಮಗಳನ್ನು ಬದಲಾಯಿಸಿದೆ. ಮಾರ್ಚ್ ನಲ್ಲಿಯೂ ಇದೇ ಪರಿಸ್ಥಿತಿ ಇರಬಹುದು. ಜನರು ಅನೇಕ ಹೊಸ ಬದಲಾವಣೆಗಳನ್ನು ನೋಡಬಹುದು.ಬ್ಯಾಂಕುಗಳು ಸಾಲವನ್ನು ದುಬಾರಿಯಾಗಿಸಬಹುದು. ಹೊಸ ವೈಶಿಷ್ಟ್ಯಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳಲ್ಲಿಯೂ ನೋಡಬಹುದು. ರೈಲಿನ ವೇಳಾಪಟ್ಟಿಯಲ್ಲಿಯೂ ಬದಲಾವಣೆಯಾಗಬಹುದು. ಈ ಬದಲಾವಣೆಗಳು ಸಾಮಾನ್ಯ ಜನರ ಮೇಲೆ ನೇರ ಪರಿಣಾಮ ಬೀರುತ್ತವೆ.ಮಾರ್ಚ್ ನಲ್ಲಿ ಯಾವ ಹೊಸ […]

Advertisement

Wordpress Social Share Plugin powered by Ultimatelysocial