ಉಕ್ರೇನ್‌ ಯುದ್ಧ: ಕೀವ್‌ ರೈಲು ನಿಲ್ದಾಣ ಸ್ಪೋಟಿಸಿದ ರಷ್ಯಾ

ಕೀವ್‌, ಮಾರ್ಚ್ 03: ಉಕ್ರೇನ್ ಮೇಲೆ ರಷ್ಯಾ ದಾಳಿಯು ಎಂಟನೇ ದಿನಕ್ಕೆ ಕಾಲಿರಿಸಿದೆ. ಸದ್ಯ ವ್ಲಾಡಿಮಿರ್ ಪುಟಿನ್ ಸೇನೆಯು ಉಕ್ರೇನ್‌ ರಾಜಧಾನಿ ಕೀವ್‌ ಅನ್ನು ಸುತ್ತುವರೆದಿದೆ. ನಿರಂತರ ಬಾಂಬ್ ದಾಳಿ ನಡೆಯುತ್ತಿದೆ. ರಷ್ಯಾ ಸೇನೆ ಕೀವ್‌ನ ರೈಲು ನಿಲ್ದಾಣವನ್ನು ಸ್ಫೋಟಿಸಿದೆ.

ನಿಲ್ದಾಣದಿಂದ ಜನರನ್ನು ರಕ್ಷಿಸುವ ವೇಳೆ ದಾಳಿ ನಡೆದಿದೆ. ಮತ್ತೊಂದೆಡೆ, ರಷ್ಯಾದ ಸೈನ್ಯವು ಖೆರ್ಸನ್ ಅನ್ನು ವಶಪಡಿಸಿಕೊಂಡಿದೆ. ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಇದು ಕಂಡು ಬಂದಿದೆ. ಬುಧವಾರವೇ ಈ ಸ್ಫೋಟ ನಡೆದಿದೆ ಎಂದು ವರದಿ ಉಲ್ಲೇಖ ಮಾಡಿದೆ.

 ಪಿವ್ನಿಚ್ನಾ ರೈಲು ನಿಲ್ದಾಣ ಇದಾಗಿದ್ದು, ಇದು ಕೀವ್‌ನ ಕೈವ್‌ನ ಕೇಂದ್ರ ನಿಲ್ದಾಣದಿಂದ ಕೇವಲ 700 ಅಡಿಗಳಷ್ಟು ದೂರದಲ್ಲಿದೆ. ಉಕ್ರೇನ್‌ನಲ್ಲಿನ ಸಂಘರ್ಷದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿರುವ ನೂರಾರು ನಿರಾಶ್ರಿತರು ಕೀವ್‌ನ ಕೇಂದ್ರ ರೈಲು ನಿಲ್ದಾಣದಲ್ಲಿದ್ದಾರೆ.

ವೀಡಿಯೊದಲ್ಲಿ, ಹಾನಿಗೊಳಗಾದ ಕಟ್ಟಡವು ರೈಲು ಪ್ಲಾಟ್‌ಫಾರ್ಮ್‌ನಲ್ಲಿ ಟಿಕೆಟ್ ನಿಲ್ದಾಣದಂತೆ ಕಾಣುತ್ತದೆ. ಉಕ್ರೇನಿಯನ್ ಆಂತರಿಕ ಸಚಿವಾಲಯದ ಪ್ರಕಾರ, ಕೀವ್‌ನ ಪ್ರಮುಖ ಅನಿಲ ಪೈಪ್‌ಲೈನ್‌ ಈಗಾಗಲೇ ಹಾನಿಗೊಳಲಾಗಿದೆ. ಈ ನಡುವೆ ಶಾಂತಿಯ ಪ್ರಯತ್ನಗಳು ಸಹ ನಡೆಯುತ್ತಿವೆ. ಬೆಲಾರಸ್-ಪೋಲೆಂಡ್ ಗಡಿಯಲ್ಲಿ ಎರಡೂ ದೇಶಗಳ ಉನ್ನತ ಅಧಿಕಾರಿಗಳು ಸಭೆ ನಡೆಸುತ್ತಿದ್ದಾರೆ. ಮೊದಲು, ಉಕ್ರೇನ್ ರಷ್ಯಾವನ್ನು ಜಾಗತಿಕ ಇಂಟರ್ನೆಟ್‌ನಲ್ಲಿ ನಿಷೇಧಿಸಬೇಕು, ಈ ಮೂಲಕ ಸುಳ್ಳಿನ ಪ್ರಚಾರವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದೆ.

ಬೆಲಾರಸ್ ಮೇಲೆ ಕಟ್ಟುನಿಟ್ಟಾದ ನಿರ್ಬಂಧ

ಉಕ್ರೇನ್‌ನಲ್ಲಿನ ಯುದ್ಧದ ದೃಷ್ಟಿಯಿಂದ, ಅಮೆರಿಕವು ರಷ್ಯಾದೊಂದಿಗೆ ಬೆಲಾರಸ್ ಮೇಲೆ ಕಟ್ಟುನಿಟ್ಟಾದ ನಿರ್ಬಂಧಗಳನ್ನು ಘೋಷಿಸಿದೆ. ರಷ್ಯಾ ಮತ್ತು ಬೆಲಾರಸ್‌ನ ರಕ್ಷಣಾ ವಲಯದ ರಫ್ತುಗಳನ್ನು ನಿಷೇಧಿಸಲಾಗಿದೆ ಎಂದು ಶ್ವೇತಭವನ ಹೇಳಿದೆ. ಇವುಗಳಲ್ಲಿ ಯುದ್ಧ ವಿಮಾನಗಳ ಭಾಗಗಳು, ಸೇನಾ ವಾಹನಗಳು ಸೇರಿವೆ.

ಉಕ್ರೇನ್‌ನಲ್ಲಿ ಸುಮಾರು 500 ರಷ್ಯಾದ ಸೈನಿಕರ ಸಾವು

ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರರು ಉಕ್ರೇನ್ ಯುದ್ಧದಲ್ಲಿ ತನ್ನ 498 ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 1,597 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಮೇಜರ್ ಜನರಲ್ ಇಗೊರ್ ಕೊನಾಶೆಂಕೋವ್, ರಷ್ಯಾಕ್ಕೆ ‘ಗಣನೀಯ ನಷ್ಟ’ದ ವರದಿಗಳನ್ನು ‘ತಪ್ಪು ಮಾಹಿತಿ’ ಎಂದು ತಳ್ಳಿಹಾಕಿದ್ದಾರೆ. 2,870 ಕ್ಕೂ ಹೆಚ್ಚು ಉಕ್ರೇನಿಯನ್ ಸೈನಿಕರು ಕೊಲ್ಲಲ್ಪಟ್ಟರು ಮತ್ತು ಸುಮಾರು 3,700 ಮಂದಿ ಗಾಯಗೊಂಡರು, 572 ಮಂದಿ ಉಕ್ರೇನ್‌ ಸೈನಿಕರನ್ನು ಸೆರೆಹಿಡಿಯಲಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆ ರಷ್ಯಾದ ಪಡೆಗಳು ಖಾರ್ಕಿವ್‌ ನಗರದಲ್ಲಿ ಗ್ಯಾಸ್‌ ಪೈಪ್‌ಲೈನ್‌ ಅನ್ನು ಸ್ಫೋಟ ಮಾಡಿದೆ ಎಂದು ಉಕ್ರೇನ್‌ ಅಧ್ಯಕ್ಷರ ಕಚೇರಿಯು ಹೇಳಿತ್ತು. ಉಕ್ರೇನ್‌ನ ಖಾರ್ಕಿವ್ ಪ್ರದೇಶವು ಬುಧವಾರ ಸಂಜೆ 7 ರಿಂದ ಗುರುವಾರ ಬೆಳಿಗ್ಗೆ 7 ರವರೆಗೆ ಕರ್ಫ್ಯೂ ಘೋಷಿಸಲಾಗಿತ್ತು. ಆದರೆ ಉಕ್ರೇನ್‌ನ ಎರಡನೇಯ ಅತೀ ದೊಡ್ಡ ನಗರವಾದ ಖಾರ್ಕಿವ್‌ ಅನ್ನು ಈಗಾಗಲೇ ರಷ್ಯಾ ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಬಗ್ಗೆ ಉಕ್ರೇನ್‌ ಅಧಿಕಾರಿಗಳೇ ಖಚಿತಪಡಿಸಿದ್ದಾರೆ. ಕೀವ್‌ನ ಡ್ರುಜ್ಬಿ ನರೋಡಿವ್ ಮೆಟ್ರೋ ನಿಲ್ದಾಣದ ಬಳಿ ಈಗ ಮೂರನೇ ಹಾಗೂ ನಾಲ್ಕನೇ ಸ್ಫೋಟವು ಕೇಳಿ ಬಂದಿದೆ ಎಂದು ದಿ ಕೀವ್‌ ಇಂಡಿಪೆಂಡೆಂಟ್‌ ವರದಿ ಮಾಡಿದೆ.

ಹಾಗೆಯೇ ದಕ್ಷಿಣ ಉಕ್ರೇನ್‌ನ ಡ್ನೀಪರ್ ನದಿಯ ಜಪೋರಿಝಿಯಾ ನಗರದ ಸಮೀಪವಿರುವ ಉಕ್ರೇನ್‌ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಸುತ್ತಲಿನ ಪ್ರದೇಶ ರಷ್ಯಾ ನಿಯಂತ್ರಣದಲ್ಲಿದೆ. ಮೂರನೇ ಮಹಾಯುದ್ಧವು ‘ಪರಮಾಣು ಮತ್ತು ವಿನಾಶಕಾರಿ’ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಹೇಳಿದ್ದು, ಯಾವುದೇ ಕಾರಣಕ್ಕೂ ಉಕ್ರೇನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ರಷ್ಯಾ ಅನುಮತಿಸುವುದಿಲ್ಲ ಎಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾದಿಂದ ಕ್ಷಿಪಣಿ ಖರೀದಿಗೆ ಭಾರತದ ಮೇಲೆ ನಿರ್ಬಂಧ ಸಾಧ್ಯತೆ?

Thu Mar 3 , 2022
ರಷ್ಯಾದಿಂದ S-400 ಟ್ರಯಂಫ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಭಾರತದ ಮೇಲೆ ನಿರ್ಬಂಧಗಳನ್ನು ಅನ್ವಯಿಸಲು ಅಥವಾ ಮನ್ನಾ ಮಾಡಲು ಬಿಡೆನ್ ಆಡಳಿತವು ನೋಡುತ್ತಿದೆ ಎಂದು ಯುಎಸ್ ರಾಜತಾಂತ್ರಿಕ ಡೊನಾಲ್ಡ್ ಲು ಬುಧವಾರ ಹೇಳಿದ್ದಾರೆ. ಮುಂಬರುವ ತಿಂಗಳುಗಳು ಮತ್ತು ವರ್ಷಗಳಲ್ಲಿ ರಷ್ಯಾದೊಂದಿಗಿನ ತನ್ನ ರಕ್ಷಣಾ ಒಪ್ಪಂದಗಳ ಬಗ್ಗೆ ಭಾರತವು ಚಿಂತಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು, ಇದು ಹೆಚ್ಚುತ್ತಿರುವ ನಿರ್ಬಂಧಗಳಿಂದ ಪ್ರಭಾವಿತವಾಗಿರುತ್ತದೆ. ರಷ್ಯಾವು ಹೊಸ ಮಾರಾಟವನ್ನು ಮಾಡಲು ಅಥವಾ ಅದರ ಅಸ್ತಿತ್ವದಲ್ಲಿರುವ […]

Advertisement

Wordpress Social Share Plugin powered by Ultimatelysocial