ನೀವು ನಮ್ಮ ಸೋಲು, ಸಂಕಟಗಳಿಂದ ಲಾಭ ಪಡೆದುಕೊಂಡಿದ್ದೀರಿ.ಭಾರತದ ವಿರುದ್ಧ ಉಕ್ರೇನ್ ಅಸಮಾಧಾನ.

 

ಕೀವ್(ಉಕ್ರೇನ್): ಯುದ್ಧದ ಸಂದರ್ಭದಲ್ಲಿ ರಷ್ಯಾದಿಂದ ಕಡಿಮೆ ಬೆಲೆಗೆ ತೈಲವನ್ನು ಖರೀದಿಸಿರುವ ಭಾರತದ ವಿರುದ್ಧ ಉಕ್ರೇನ್ ವಿದೇಶಾಂಗ ಸಚಿವ ಅಸಮಾಧಾನ ವ್ಯಕ್ತಪಡಿಸಿದ್ದು, ಇದೊಂದು ನೈತಿಕವಾಗಿ ಸಮರ್ಪಕವಾದ ನಿರ್ಧಾರವಲ್ಲ ಎಂದು ತಿಳಿಸಿರುವುದಾಗಿ ವರದಿಯಾಗಿದೆ.ರಷ್ಯಾದ ದಾಳಿಯಿಂದಾಗಿ ಉಕ್ರೇನ್ ನಿವಾಸಿಗಳು ಬಿಕ್ಕಟ್ಟಿಗೆ ಸಿಲುಕಿದ್ದು, ಮತ್ತೊಂದೆಡೆ ಸಾವು, ನೋವು ಅನುಭವಿಸುತ್ತಿದ್ದಾರೆ. ಇಂತಹ ಅವಕಾಶವನ್ನು ಬಳಸಿಕೊಂಡು ಭಾರತ ರಷ್ಯಾದಿಂದ ಅಗ್ಗದ ಬೆಲೆಗೆ ತೈಲ ಖರೀದಿಸುತ್ತಿದೆ ಎಂದು ಡೆಮೈಟ್ರೋ ಕುಲೇಬಾ ಎನ್ ಡಿಟಿವಿ ಜತೆಗಿನ ವಿಶೇಷ ಸಂದರ್ಶನದಲ್ಲಿ ದೂರಿದ್ದಾರೆ.ಒಂದು ವೇಳೆ ನಿಮಗೆ (ಭಾರತ) ಲಾಭವಾಗಿದ್ದರೆ ಅದು ನಮ್ಮ (ಉಕ್ರೇನ್) ಸೋಲಿನಿಂದಾಗಿ, ಈ ನಿಟ್ಟಿನಲ್ಲಿ ನಮ್ಮ ಸಂಕಷ್ಟ ಬಗೆಹರಿಸಲು ನಿಮ್ಮಿಂದ (ಭಾರತ) ನೆರವು ಸಿಗಬಹುದೆಂಬ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದಾರೆ.ರಷ್ಯಾದಿಂದ ಭಾರತ ಅಗ್ಗದ ಬೆಲೆಗೆ ತೈಲವನ್ನು ಖರೀದಿಸುವ ನಿರ್ಧಾರವನ್ನು ಉಕ್ರೇನ್ ಜನ ಅನುಭವಿಸುತ್ತಿರುವ ನರಕಯಾತನೆಯ ಕನ್ನಡಿಯ ಮೂಲಕ ನೋಡಬೇಕಾಗಿದೆ ಎಂಬುದಾಗಿ ಕುಲೇಬಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.ಅಷ್ಟೇ ಅಲ್ಲ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗಾಣಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮುಖ ಪಾತ್ರ ವಹಿಸಬೇಕೆಂದು ಕುಲೇಬಾ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ATM ಮೂಲಕವೂ ಖರೀದಿಸಬಹುದು ಚಿನ್ನ..! ಶುರುವಾಗಿದೆ ದೇಶದ ಮೊದಲ ಗೋಲ್ಡ್ ಎಟಿಎಂ!

Tue Dec 6 , 2022
ಭಾರತೀಯರಿಗೆ ಹಳದಿ ಲೋಹ ಚಿನ್ನದ ಮೇಲೆ ವ್ಯಾಮೋಹ ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೀಗ ಚಿನ್ನ ಖರೀದಿಸುವುದು ಮತ್ತಷ್ಟು ಸಲೀಸಾಗಿದ್ದು, ಇದಕ್ಕಾಗಿ ಅಂಗಡಿಗೆ ಹೋಗಬೇಕೆಂದಿಲ್ಲ. ಎಟಿಎಂ ಗಳಲ್ಲಿ ಹಣ ತೆಗೆದಂತೆ ಇನ್ನು ಮುಂದೆ ಚಿನ್ನವನ್ನು ಸಹ ತೆಗೆಯಬಹುದಾಗಿದೆ.ಹೈದರಾಬಾದ್ ಮೂಲದ Goldsikka ಪ್ರೈವೇಟ್ ಲಿಮಿಟೆಡ್ ಕಂಪನಿ ತನ್ನ ಮುಖ್ಯ ಕಚೇರಿ ಇರುವ ಬೇಗಂಪೇಟೆಯ ಅಶೋಕ ರಘುಪತಿ ಚೇಂಬರ್ಸ್ ನಲ್ಲಿ ದೇಶದ ಮೊದಲ ಗೋಲ್ಡ್ ಎಟಿಎಂ ಆರಂಭಿಸಿದ್ದು, ಇದು ದಿನದ 24 […]

Advertisement

Wordpress Social Share Plugin powered by Ultimatelysocial