UNION BUDGET 2022:ಭಾರತದ ಅಧಿಕೃತ ಡಿಜಿಟಲ್‌ ಕರೆನ್ಸಿ ಘೋಷಣೆ;

2022-23ನೇ ಸಾಲಿನ ಕೇಂದ್ರ ಬಜೆಟ್‌ ಇಂದು ಮಂಡನೆಯಾಗಿದೆ. ಬಜೆಟ್‌ ಮಂಡನೆ ಮಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಭಾರತದಲ್ಲಿ ಡಿಜಿಟಲ್‌ ಕರೆನ್ಸಿಯನ್ನು ಪರಿಚಯಿಸುವುದಾಗಿ ಘೋಷಿಸಿದ್ದಾರೆ. ಭಾರತ ಸರ್ಕಾರವು ಭಾರತದ ಸ್ವಂತ ಕ್ರಿಪ್ಟೋಕರೆನ್ಸಿಯನ್ನು ಪ್ರಾರಂಭಿಸುವುದಾಗಿ ಅಧಿಕೃತವಾಗಿ ದೃಢಪಡಿಸಿದೆ.

ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊರತರಲಿದ್ದು, “ಡಿಜಿಟಲ್ ರೂಪಾಯಿ” ಎಂದು ಹೆಸರಿಸುವ ಸಾಧ್ಯತೆಯಿದೆ.

ಘೋಷಣೆಹೌದು, ಭಾರತ ಸರ್ಕಾರ ಭಾರತದ ಸ್ವಂತ ಡಿಜಿಟಲ್‌ ಕರೆನ್ಸಿಯನ್ನು ಪರಿಚಯಿಸುವುದಾಗಿ ಘೋಷಣೆ ಮಾಡಿದೆ. 2022-23ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಡಿಜಿಟಲ್‌ ಕರೆನ್ಸಿಯ ಬಗ್ಗೆ ಹೇಳಲಾಗಿದೆ. ಆದರೆ ಭಾರತದಲ್ಲಿ ಈ ಡಿಜಿಟಲ್ ರೂಪಾಯಿ ಹೇಗೆ ಕಾರ್ಯನಿರ್ವಹಿಸುತ್ತದೆ? ದೇಶಾದ್ಯಂತ ಬಳಕೆದಾರರಿಗೆ ಹೇಗೆ ನೀಡಲಾಗುತ್ತದೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ಹಾಗಾದ್ರೆ ಡಿಜಿಟಲ್‌ ಕರೆನ್ಸಿ ಎಂದರೇನು ? ಇದು ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಜಿಟಲ್

ಭಾರತ ಸರ್ಕಾರದ ಹೊಸದಾಗಿ ಡಿಜಿಟಲ್ ಕರೆನ್ಸಿಯನ್ನು ಪರಿಚಯಿಸುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಡಿಜಿಟಲ್‌ ಕರೆನ್ಸಿ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಆಧರಿಸಿದೆ ಎಂದು ದೃಢಪಡಿಸಲಾಗಿದೆ. ಅಂದರೆ ಈ ಕರೆನ್ಸಿ ಬಿಟ್‌ಕಾಯಿನ್ ಮತ್ತು ಎಥೆರಿಯಮ್‌ನಂತಹ ಕ್ರಿಪ್ಟೋಕರೆನ್ಸಿ ಮಾದರಿಯಲ್ಲಿ ಲಭ್ಯವಾಗಲಿದೆ. ಇದಲ್ಲದೆ ಭಾರತದಲ್ಲಿನ ಎಲ್ಲಾ ಕ್ರಿಪ್ಟೋಕರೆನ್ಸಿಗಳು ಇನ್‌ಕಮ್‌ ಟ್ಯಾಕ್ಸ್‌ ಅಡಿಯಲ್ಲಿ ಬರುತ್ತವೆ ಎಂದು ಘೋಷಿಸಲಾಗಿದೆ. ಇದು ವರ್ಚುವಲ್ ಡಿಜಿಟಲ್ ಆಸ್ತಿಗಳ ವರ್ಗಾವಣೆಯಿಂದ ಯಾವುದೇ ಆದಾಯದ ಮೇಲೆ 30% ತೆರಿಗೆಯನ್ನು ವಿಧಿಸಲಿದೆ ಎಂದು ಹೇಳಲಾಗಿದೆ.

ಡಿಜಿಟಲ್‌

ಭಾರತದಲ್ಲಿ ಪರಿಚಯಿಸಲಾಗುವ ಡಿಜಿಟಲ್‌ ಕರೆನ್ಸಿಯನ್ನು ಆರ್‌ಬಿಐ ಮೂಲಕ ಪರಿಚಯಿಸಲಾಗುತ್ತದೆ ಎನ್ನಲಾಗಿದೆ. ಇದಕ್ಕೆ ಡಿಜಿಟಲ್‌ ರೂಪಾಯಿ ಎಂದು ಹೆಸರಿಸುವ ಸಾಧ್ಯತೆ ಇದೆ. ಆದರೆ ಭಾರತದ ಡಿಜಿಟಲ್‌ ರೂಪಾಯಿಯ ಮೌಲ್ಯ ಎಷ್ಟಿರಲಿದೆ? ಇದರ ಸ್ವರೂಪ ಹೇಗಿರಲಿದೆ ಅನ್ನೊದರ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ಸದ್ಯ ವಿಶ್ವದೆಲ್ಲೆಡೆ ಸಾಕಷ್ಟು ಸದ್ದು ಮಾಡುತ್ತಿರುವ ಡಿಜಿಟಲ್‌ ಕರೆನ್ಸಿ ಭಾರತದಲ್ಲಿ ಕೂಎಡ ಅಧಿಕೃತವಾಗುವ ಸಮಯ ಹತ್ತಿರದಲ್ಲಿದೆ. ಇದರಿಂದ ಡಿಜಿಟಲ್‌ ಕರೆನ್ಸಿ ವರ್ಗಾವಣೆ ಸೇರಿದಂತೆ ವರ್ಚುವಲ್‌ ವಹಿವಾಟುಗಳು ಇನ್ನಷ್ಟು ಹೆಚ್ಚಾಗುವ ಸಾದ್ಯತೆಯಿದೆ.

ಕ್ರಿಪ್ಟೋಕರೆನ್ಸಿ ಎಂದರೇನು?

ಅತೀ ಸರಳವಾಗಿ ಹೇಳುವುದಾದರೇ ಕ್ರಿಪ್ಟೋ ಕರೆನ್ಸಿ ಎಂದರೇ ಡಿಜಿಟಲ್ ಕರೆನ್ಸಿ. ಇದು ಇಂಟರ್ನೆಟ್ ಆಧಾರಿತವಾಗಿದ್ದು, ವಿನಿಮಯಕ್ಕೆ ಹೆಚ್ಚಾಗಿ ಬಳಕೆ ಮಾಡುತ್ತಾರೆ. ನಾಣ್ಯ ಅಥವಾ ನೋಟಿನ ರೂಪದಲ್ಲಿ ಇದು ಲಭ್ಯವಾಗುವುದಿಲ್ಲ. ಡಿಜಿಟಲ್ ತಂತ್ರಜ್ಞಾನ ಬಳಸಿ ವ್ಯವಹಾರ ಮಾಡಲಾಗುತ್ತದೆ.

ಬ್ಲಾಕ್‌ ಚೈನ್ ತಂತ್ರಜ್ಞಾನ ಎಂದರೇನು?

ಬ್ಲಾಕ್‌ ಚೈನ್ ಎಂಬ ತಂತ್ರಜ್ಞಾನ ಬಳಸಿ ಕ್ರಿಪ್ಟೋ ಕರೆನ್ಸಿಗೆ ಡಿಜಿಟಲ್ ರಕ್ಷಣೆ ನೀಡಲಾಗಿರುತ್ತದೆ. ಕಂಪ್ಯೂಟರ್ ನೆಟ್‌ವರ್ಕ್‌ ಕೂಡಾ ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಕ್ರಿಪ್ಟೋ ಕರೆನ್ಸಿಯನ್ನು ನೀಡುವ ಹಲವು ಖಾಸಗಿ ಸಂಸ್ಥೆಗಳಿವೆ ಕಾರ್ಯನಿರ್ವಹಿಸುತ್ತಿವೆ. ಆದರೆ ಭಾರತದಲ್ಲಿ ಆರ್‌ಬಿಐ ಮೂಲಕವೇ ಡಿಜಿಟಲ್‌ ಕರೆನ್ಸಿ ಹೊರಬರಲಿದೆ.

ಡಿಜಿಟಲ್ ರೂಪಾಯಿ ಬೆಲೆ ಎಷ್ಟು?

ಭಾರತದಲ್ಲಿ ಬಿಡುಗಡೆ ಆಗಲಿರುವ ಡಿಜಿಟಲ್‌ ರೂಪಾಯಿಯ ಬೆಲೆ ಸುಮಾರು 1 ರೂಪಾಯಿ ಎಂದು ನಾವು ನಿರೀಕ್ಷಿಸಬಹುದು. ಆದರೆ, ಮುಂದಿನ ದಿನಗಳಲ್ಲಿ ಡಿಜಿಟಲ್ ರೂಪಾಯಿಯ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ. ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ WazirX ಮತ್ತು ಇತರ ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್‌ ಪ್ಲಾಟ್‌ಫಾರ್ಮ್‌ಗಳಿರುವುದರಿಂದ ಡಿಜಿಟಲ್ ರೂಪಾಯಿಯನ್ನು ಖರೀದಿಸಲು ಸಾಧ್ಯವಾಗುತ್ತದೆ. ಸದ್ಯ ಕ್ರಿಪ್ಟೋಕರೆನ್ಸಿಗೆ ಯಾವುದೇ ಗಡಿಗಳಿಲ್ಲದ ಕಾರಣ, ಯಾರೂ ಬೇಕಾದರೂ ಡಿಜಿಟಲ್ ರೂಪಾಯಿಯನ್ನು ಖರೀದಿಸಲು ಸಾಧ್ಯವಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Iphone 13 ಬೆಲೆಯಲ್ಲಿ ಬರೋಬ್ಬರಿ 11 ಸಾವಿರ ರೂಪಾಯಿ ಕಡಿತ;

Tue Feb 1 , 2022
ಐಫೋನ್ ಹೊಂದಿರುವುದೇ ಬಹು ಜನರಿಗೆ ಪ್ರತಿಷ್ಠೆಯ ವಿಷಯ ಎಂಬಂತಾಗಿದೆ. ಬ್ರ್ಯಾಂಡ್‌ಗೆ ತಕ್ಕ ಹಾಗೆ ಐಫೋನ್ ಬೆಲೆಯೂ (Price) ಹೆಚ್ಚಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಈಗ ಐಫೋನ್ 13 ಬೆಲೆಯಲ್ಲಿ ಅತಿ ಹೆಚ್ಚಿನ ಮೊತ್ತದ ಕಡಿತವಾಗಿದೆ. ನೀವೇನಾದರೂ ಐಫೋನ್ ಕೊಳ್ಳಬೇಕು ಎಂದು ಮಾರುಕಟ್ಟೆಗೆ ಹೋಗಿದ್ದರೆ ನೀವೇ ಅದೃಷ್ಟವಂತರು. ಇತರೆ ಮಾರಾಟಗಾರರು ನಿಮ್ಮ ಇತರೆ ಸ್ಮಾರ್ಟ್‌ಫೋನ್ ವಿನಿಮಯದೊಂದಿಗೆ ಐಫೋನ್ 13ರ ಮೇಲೆ ವಿನಾಯಿತಿ ನೀಡಬಹುದು. ಆದರೆ ಅಮೆಜಾನ್ ಸ್ಟೋರ್ ನೇರವಾಗಿ ಐಫೋನ್ […]

Advertisement

Wordpress Social Share Plugin powered by Ultimatelysocial