4 ದಿನಗಳ ಹಿಂದೆ ಸಂಚಾರ ಆರಂಭಿಸಿದ ʻವಂದೇ ಭಾರತ್ ಎಕ್ಸ್‌ಪ್ರೆಸ್ʼಗೆ ಬಿತ್ತು ಕಲ್ಲೇಟು, ಕಿಟಕಿ ಗಾಜಿಗೆ ಹಾನಿ.

ಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ವಂದೇ ಭಾರತ್ ಎಕ್ಸ್‌ಪ್ರೆಸ್‌(Vande Bharat Express) ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಬೆಳಕಿಗೆ ಬಂದಿದೆ.ಈ ರೈಲು ಸಂಚಾರ ಆರಂಭಿಸಿದ ಕೇವಲ ಎರಡೇ ದಿನದಲ್ಲಿ ಇದರ ಮೇಲೆ ಅಪರಿಚಿತ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗದಿದ್ದರೂ, ಕಲ್ಲಿನಿಂದ ಹೊಡೆದ ರಭಸಕ್ಕೆ ಕೋಚ್ ಸಂಖ್ಯೆ ಸಿ-13 ರ ಬಾಗಿಲಿನ ಗಾಜು ಒಡೆದಿದೆ. ರೈಲ್ವೆ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ರೈಲ್ವೇ ಕಾಯ್ದೆಯ ಸೆಕ್ಷನ್ 154 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಸೋಮವಾರ ಸಂಜೆ 5:50 ರ ಸುಮಾರಿಗೆ ಕುಮಾರ್‌ಗಂಜ್‌ನಲ್ಲಿ ನ್ಯೂ ಜಲ್ಪೈಗುರಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ ನಡೆದಿತ್ತು. ಒಂದು ಮುಖ್ಯ ಬಾಗಿಲಿನ ಗಾಜು ಹೊಡೆದಿದೆ. ಯಾರಿಗೂ ಗಾಯಗಳಾಗಿಲ್ಲ. ವೇಳಾಪಟ್ಟಿಯಲ್ಲಿ ಯಾವುದೇ ವಿಳಂಬವಾಗಿಲ್ಲ’ ಎಂದು ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆ. ಎಸ್. ಧರಣೇಂದ್ರಯ್ಯ ಕನ್ನಡ ನಾಡಿಗೆ ದುಡಿದ ಮಹನೀಯರಲ್ಲೊಬ್ಬರು.

Tue Jan 3 , 2023
ಧರಣೇಂದ್ರಯ್ಯನವರು 1903ರ ಡಿಸೆಂಬರ್ 31ರಂದು ತುಮಕೂರು ಜಿಲ್ಲೆಯ ಉರುಡುಗೆರೆ ಹೋಬಳಿ ತಾಳೇನಹಳ್ಳಿಯಲ್ಲಿ ಜನಿಸಿದರು. ತಂದೆ ಸಣ್ಣ ಅಂಬಣ್ಣ. ಪ್ರಾರಂಭಿಕ ಶಿಕ್ಷಣ ಎಲೆಕ್ಯಾತನಹಳ್ಳಿಯಲ್ಲಿ ನಡಯಿತು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ., ಬಿ.ಟಿ. ಪದವಿಗಳನ್ನು ಗಳಿಸಿದರು. ಧರಣೇಂದ್ರಯ್ಯನವರಿಗೆ ಪಂಪ, ರನ್ನ, ಜನ್ನ, ರತ್ನಾಕರರ ಪದ್ಯಗಳನ್ನು ಸರಾಗವಾಗಿ ಹಾಡಿ ಕೇಳುಗರನ್ನು ಮುಗ್ದಗೊಳಿಸುವ ಕಲೆ ಕರಗತವಾಗಿತ್ತು. ಧರಣೇಂದ್ರಯ್ಯನವರು ಪದವಿಯ ನಂತರ ಶಿಕ್ಷಣ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದರು. ಕರ್ನಾಟಕ ಸರಕಾರದ ಸಾಹಿತ್ಯ, ಸಂಸ್ಕೃತಿ, ಅಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿ ಭದ್ರ […]

Advertisement

Wordpress Social Share Plugin powered by Ultimatelysocial