ಕೆ. ಎಸ್. ಧರಣೇಂದ್ರಯ್ಯ ಕನ್ನಡ ನಾಡಿಗೆ ದುಡಿದ ಮಹನೀಯರಲ್ಲೊಬ್ಬರು.

ಧರಣೇಂದ್ರಯ್ಯನವರು 1903ರ ಡಿಸೆಂಬರ್ 31ರಂದು ತುಮಕೂರು ಜಿಲ್ಲೆಯ ಉರುಡುಗೆರೆ ಹೋಬಳಿ ತಾಳೇನಹಳ್ಳಿಯಲ್ಲಿ ಜನಿಸಿದರು. ತಂದೆ ಸಣ್ಣ ಅಂಬಣ್ಣ. ಪ್ರಾರಂಭಿಕ ಶಿಕ್ಷಣ ಎಲೆಕ್ಯಾತನಹಳ್ಳಿಯಲ್ಲಿ ನಡಯಿತು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ., ಬಿ.ಟಿ. ಪದವಿಗಳನ್ನು ಗಳಿಸಿದರು.
ಧರಣೇಂದ್ರಯ್ಯನವರಿಗೆ ಪಂಪ, ರನ್ನ, ಜನ್ನ, ರತ್ನಾಕರರ ಪದ್ಯಗಳನ್ನು ಸರಾಗವಾಗಿ ಹಾಡಿ ಕೇಳುಗರನ್ನು ಮುಗ್ದಗೊಳಿಸುವ ಕಲೆ ಕರಗತವಾಗಿತ್ತು.
ಧರಣೇಂದ್ರಯ್ಯನವರು ಪದವಿಯ ನಂತರ ಶಿಕ್ಷಣ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದರು. ಕರ್ನಾಟಕ ಸರಕಾರದ ಸಾಹಿತ್ಯ, ಸಂಸ್ಕೃತಿ, ಅಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿ ಭದ್ರ ಬುನಾದಿ ಹಾಕಿದರು. ಕನ್ನಡ ವಿಶ್ವಕೋಶ, ಕುಮಾರವ್ಯಾಸ ಭಾರತ, ಕನ್ನಡ-ಕನ್ನಡ ಕೋಶಗಳ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಕನ್ನಡಿಗರ ಕಲ್ಪನೆಯ ಸುಂದರ ಕನಸಾದ ರವೀಂದ್ರ ಕಲಾಕ್ಷೇತ್ರ ವಾಸ್ತವಕ್ಕೆ ಇಳಿದುದು ಇವರ ಪ್ರಯತ್ನದಿಂದ. ಧರ್ಮಸ್ಥಳದಲ್ಲಿ ಜರುಗಿದ ಸರ್ವಧರ್ಮ, ಸಾಹಿತ್ಯ, ಸಮ್ಮೇಳನಗಳ ಕಾರ್ಯದರ್ಶಿಯಾಗಿ ಅಸಾಧಾರಣ ಕಾರ್ಯಕೌಶಲ ತೋರಿದರು.
ಧರಣೇಂದ್ರಯ್ಯನವರು 1951ರಲ್ಲಿ ಮುಂಬಯಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗೋವಿಂದ ಪೈರವರನ್ನು ಒಪ್ಪಿಸಿ ಹೊರನಾಡಿನಲ್ಲಿ ಸರ್ವಾಂಗ ಸುಂದರವಾಗಿ ನಡೆಸುವುದರಲ್ಲಿ ಪ್ರಮುಖ ಪಾತ್ರವಹಿಸಿದರು.
ಧರಣೇಂದ್ರಯ್ಯನವರು ರಚಿಸಿದ ಕೃತಿಗಳು ಹಲವಾರು. ವನಮಾಲೆ ಕಾದಂಬರಿ ಅನೇಕ ಮರು ಮುದ್ರಣ ಕಂಡ ಕೃತಿ. ಭಾರತ ರೈತನ ಜೀವನ, ಭಾರತ ವಸ್ತು ಪ್ರದರ್ಶನ, ಪಂಪ ಆದಿಪುರಾಣ, ಕಾರ್ಕಳ, ವೇಣೂರು, ಜಿನದತ್ತರಾಯ, ಭಕ್ತಿ ಕುಸುಮಾಂಜಲಿ, ಭಗವಾನ್ ಮಹಾವೀರ,
ಪದ್ಮಾವತಿ ಮಹಾತ್ಮೆ ಮುಂತಾದ ಅನೇಕ ಕೃತಿ ರಚಿಸಿದರು. ಆಡಳಿತ ಶಬ್ದಗಳ ಕನ್ನಡ ಕೋಶ ಇವರ ಸಂಪಾದನೆ. 1 ರಿಂದ 6ನೇ ತರಗತಿವರೆಗೆ ಪಠ್ಯಪುಸ್ತಕ; ಉಪಾಧ್ಯಾಯ ಶಿಕ್ಷಣ ತರಗತಿಗಳಿಗೆ ಪಠ್ಯಪುಸ್ತಕ ಮುಂತಾದ ಯೋಜನೆಗಳಲ್ಲೂ ಅಪಾರವಾಗಿ ಕೊಡುಗೆ ನೀಡಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆಡಿ to ಸಾಗಾ ಆಫ್ ಅಶ್ವತ್ಥಾಮ: ಶಿವಣ್ಣ ನಟನೆಯ ಮುಂದಿನ 4 ಚಿತ್ರಗಳಿವು; ಅಬ್ಬರಿಸುವುದು ಖಚಿತ!

Tue Jan 3 , 2023
ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಶಿವಣ್ಣ ಹಲವಾರು ಸಮಯದ ಬಳಿಕ ವೇದ ಚಿತ್ರದ ಮೂಲಕ ಗೆಲುವಿನ ಹಾದಿಗೆ ಮರಳಿದ್ದಾರೆ. 2022ರ ವರ್ಷಾಂತ್ಯದಲ್ಲಿ ಬಿಡುಗಡೆಗೊಂಡ ವೇದ ಚಿತ್ರ ಸದ್ಯ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದ್ದು, ಶಿವಣ್ಣ ಈಸ್ ಬ್ಯಾಕ್ ಎಂದು ಅಭಿಮಾನಿಗಳು ಸಂತಸ ಹೊರಹಾಕಿದ್ದಾರೆ. ಈ ಹಿಂದಿನ ಎ ಹರ್ಷ ಹಾಗೂ ಶಿವ ರಾಜ್‌ಕುಮಾರ್ ಕಾಂಬಿನೇಶನ್ ಚಿತ್ರಗಳಿಗೂ ಇಬ್ಬರ ಕಾಂಬೊದಲ್ಲಿ ಬಂದಿರುವ ವೇದ ಚಿತ್ರಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದು, ಶಿವಣ್ಣ ಈ ರೀತಿಯ ಒಳ್ಳೆಯ ಕಥೆಗಳನ್ನು […]

Advertisement

Wordpress Social Share Plugin powered by Ultimatelysocial