ಕ್ಯಾಪ್ಟನ್‌ ವರುಣ್‌ ಸಿಂಗ್‌ ಗೆ ಕಣ್ಣೀರಿನ ವಿದಾಯ

ತಮಿಳುನಾಡಿನ ವೆಲ್ಲಿಂಗ್ಟನ್‌ನಲ್ಲಿ ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಗಂಭೀರ ಗಾಯಾಳುವಾಗಿ, ಡಿ.15ರಂದು ಕೊನೆಯುಸಿರೆಳೆದ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರ ಅಂತ್ಯಕ್ರಿಯೆಯನ್ನು ಶುಕ್ರವಾರ, ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಸಕಲ ಸರಕಾರಿ ಹಾಗೂ ಸೇನಾ ಗೌರವಗಳೊಂದಿಗೆ ನಡೆಸಲಾಯಿತು.ಅಂತ್ಯಕ್ರಿಯೆಗೂ ಮೊದಲು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾನ್‌ ಸೇರಿ ಅನೇಕ ಹಿರಿಯ ನಾಯಕರು ಮತ್ತು ಸೇನಾ ಅಧಿಕಾರಿಗಳು ಕ್ಯಾ| ವರುಣ್‌ ಸಿಂಗ್‌ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.ನೌಕಾಪಡೆಯಲ್ಲಿ ಲೆಫ್ಟಿನೆಂಟ್‌ ಕಮಾಂಡರ್‌ ಅಗಿರುವ ವರುಣ್‌ ಸಿಂಗ್‌ ಅವರ ತಮ್ಮ ಹಾಗೂ ಅವರ ಮಗ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಪಟ್ಟಣ ಪಂಚಾಯಿತಿ ನೂತನ ಪ್ರಭಾರ ಅಧ್ಯಕ್ಷರಾಗಿ ಶ್ರೀಮತಿ ಭಾರತಿಸಿದ್ದಮಲ್ಲಪ್ಪ ಆಯ್ಕೆ

Sat Dec 18 , 2021
ಕೊರಟಗೆರೆ :- ತಾಲ್ಲೂಕು ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಸ್ಥಾನವು ಇತ್ತೀಚೆಗಷ್ಟೇ ಹಿಂದೆ ಇದ್ದ ಅಧ್ಯಕ್ಷರು ವೈಯಕ್ತಿಕ ಕಾರಣದಿಂದ ರಾಜೀನಾಮೆ ಕೊಟ್ಟಿದ್ದರು. ತದನಂತರ ಖಾಲಿ ಇದ್ದ ಅಧ್ಯಕ್ಷ ಸ್ಥಾನಕ್ಕೆ ಅಲಿ ಉಪಾಧ್ಯಕ್ಷರಾಗಿದ್ದ ಭಾರತಿ ಸಿದ್ಮಲ್ಲಪ್ಪ ರವರು ಅವಿರೋಧವಾಗಿ ಆಯ್ಕೆಯಾಗಿದ್ದು ಇಂದು ಸರ್ವ ಸದಸ್ಯರ ಸಮ್ಮುಖದಲ್ಲಿ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿ ಮಾತನಾಡಿದ ಅವರು. ನಾನು ಇಂದಿನಿಂದ ತಾಲ್ಲೂಕು ಪಟ್ಟಣ ಪಂಚಾಯಿತಿಯ ಪ್ರಭಾರ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದೇನೆ ನನ್ನ ಅಧ್ಯಕ್ಷಸ್ಥಾನ ಇರುವವರೆಗೂ ತಾಲ್ಲೂಕಿನ ಜನತೆಯ ಕುಂದುಕೊರತೆಗಳ […]

Advertisement

Wordpress Social Share Plugin powered by Ultimatelysocial