ವಿದ್ವಾಂಸರ ನೇಮಕ ಅಪರಾಧ ಎನ್ನುವ ಪರಿಪಾಟ: ಅರವಿಂದ ಮಾಲಗತ್ತಿ ಬೇಸರ

ಮೈಸೂರು: ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದ ಅಕಾಡೆಮಿಗಳಿಗೆ ವಿದ್ವಾಂಸರನ್ನು ನೇಮಿಸಿದರೆ ದೊಡ್ಡ ಅಪರಾಧ ಎನ್ನುವ ಪರಿಪಾಟ ಸರ್ಕಾರಕ್ಕೂ ಹಾಗೂ ರಾಜಕೀಯ ಮುಖವುಳ್ಳ ವಿದ್ವಾಂಸರಲ್ಲೂ ಬಂದಿದೆ’ ಎಂದು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಬೇಸರ ವ್ಯಕ್ತಪಡಿಸಿದರು.ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಪ್ರೊ.ನೀಲಗಿರಿ ತಳವಾರ ವಿದ್ಯಾರ್ಥಿ ಬಳಗದಿಂದ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘‍ಪ್ರೊ.ನೀಲಗಿರಿ ತಳವಾರ ಅಭಿನಂದನಾ ಸಮಾರಂಭ’ದಲ್ಲಿ ತಳವಾರರ ‘ನೂರಾರು ನುಡಿಗಟ್ಟುಗಳು’ ಹಾಗೂ ‘ಹೊನ್ನರಿಕೆ’ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.’ಜಾನಪದ ಅಕಾಡೆಮಿ ಸೇರಿದಂತೆ ವಿವಿಧ ಅಕಾಡೆಮಿಗಳು ತೂಕಡಿಸುತ್ತಿವೆ. ಕಲಾವಿದರನ್ನು ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಬಾರದು ಎನ್ನುತ್ತಿಲ್ಲ. ಅವರನ್ನೂ ಮಾಡಿ, ವಿದ್ವಾಂಸರನ್ನೂ ನೇಮಿಸಿ. ಆಗ ವಿದ್ವತ್‌ ಕೆಲಸಗಳು ಸಾಗಲು ಪೂರಕವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.’ನೀಲಿಗಿರಿ ತಳವಾರ ಅವರ ‘ನೂರಾರು ನುಡಿಗಟ್ಟುಗಳು’ ಕೃತಿಯಲ್ಲಿ ನುಡಿಗಟ್ಟುಗಳ ಅರ್ಥ, ಸಂದರ್ಭ, ಶೈಲಿ ಬಗ್ಗೆ ಚರ್ಚಿಸಿದ್ದಾರೆ. ಕನ್ನಡದಲ್ಲಿನ ನುಡಿಗಟ್ಟು, ಭಾಷೆಯ ಶ್ರೀಮಂತಿಕೆ ಬಗ್ಗೆ ವಿವರಿಸಿದ್ದಾರೆ. ಜಾನಪದ ವಿದ್ವಾಂಸ ಮಾಡಬಲ್ಲ ಎಲ್ಲ ಸಂಗತಿಗಳು ಈ ಕೃತಿಯಲ್ಲಿವೆ. ಇಂತಹ ಕಾರ್ಯವನ್ನು ಜಾನಪದ ಅಕಾಡೆಮಿ, ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ ಮಾಡಬೇಕು’ ಎಂದರು.’ಸಾಹಿತಿ ಎನಿಸಿಕೊಳ್ಳಲು ಟನ್‌ಗಟ್ಟಲೇ ಬರೆಯಬೇಕಿಲ್ಲ. ಮನಸ್ಸಿನಲ್ಲಿ ಸ್ಥಿರವಾಗಿ ನಿಲ್ಲಬಲ್ಲ ನಾಲ್ಕು ಚಿತ್ರಗಳು ಎದೆಯಲ್ಲಿ ಮೂಡುವಂತಿದ್ದರೆ ಸಾಕು. ಅಂತಹ ಸಾರ್ಥಕ ಗುಣ ತಳವಾರ ಅವರ ಬರಹದಲ್ಲಿ ಕಾಣುತ್ತದೆ. ತಳವಾರರ ಕಾವ್ಯ ಓದಲು ಸರಳ, ನೇರ ಎನಿಸಿದರೂ, ಬಳಸುವ ಪ್ರತಿಮೆಗಳು ಗ್ರಾಮೀಣ ಪರಿಸರದಿಂದ ಎದ್ದುಬಂದಂತಹವು. ಹೀಗಾಗಿ, ವಿಶೇಷ ಆಯಾಮ ನೀಡುತ್ತವೆ. ಸಮಾಜವನ್ನು ರೂಪಿಸಲು ಅವರ ಬರಹದ ಅಗತ್ಯವಿದೆ’ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ಮಾತನಾಡಿ, ‘ಸಾಧಾರಣ ಕುಟುಂಬದಲ್ಲಿ ಹುಟ್ಟಿದ ತಳವಾರ ಈ ಹಂತದವರೆಗೂ ಬೆಳೆದಿದ್ದಾರೆ. ಸರಳ, ಮೆದು ಮಾತು ಹಾಗೂ ಪ್ರೀತಿಯ ನಗು ಮುಖದಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ. ಅಧ್ಯಾಪನ ಹಾಗೂ ಆಡಳಿತಾತ್ಮಕವಾಗಿಯೂ ಅವರ ಕಾರ್ಯವೈಖರಿ ಇತರರಿಗೆ ಮಾದರಿ’ ಎಂದು ಶ್ಲಾಘಿಸಿದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್‌, ‘ಇತ್ತೀಚಿನ ದಿನಗಳಲ್ಲಿ ಶಿಕ್ಷಕರು- ವಿದ್ಯಾರ್ಥಿಗಳ ನಡುವಿನ ಸಂಬಂಧ ಅಳಿಸುತ್ತಿದೆ. ಆದರೆ, ನೀಲಗಿರಿ ತಳವಾರರ ವಿದ್ಯಾರ್ಥಿ ವೃಂದವು ತಮ್ಮ ನೆಚ್ಚಿನ ಗುರುಗಳಿಗೆ ಅಭಿನಂದನೆ ಸಲ್ಲಿಸುತ್ತಿರುವುದು ಶ್ಲಾಘನೀಯ ಸಂಗತಿ’ ಎಂದರು.ಸಹಾಯಕ ಪ್ರಾಧ್ಯಾಪಕ ಶಿವಕುಮಾರ್‌ ಕಾರ್ಯಪುರ ಪ್ರಾಸ್ತಾವಿಕವಾಗಿ ಮಾತನಾಡಿದರು.ವಿನಯ, ವಿಧೇಯತೆ, ಬಂಧುತ್ವ, ಕರುಳಬಳ್ಳಿಯ ಹರಿಕಾರ ಪ್ರೊ.ನೀಲಗಿರಿ ತಳವಾರ. ಅವರು ಯಾರ ಜತೆಗೂ ಸಂಬಂಧ ಕಡಿದುಕೊಳ್ಳಲು ಬಯಸುವುದಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್ ನೀತಿಯ ಮೇಲೆ UK ಏಕಪಕ್ಷೀಯವಾಗಿ ಪಾಕ್ NSA ಭೇಟಿಯನ್ನು ರದ್ದುಗೊಳಿಸಿದೆ

Sat Mar 5 , 2022
  ಯುಕೆ ಸರ್ಕಾರವು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಮೊಯೀದ್ ಯೂಸುಫ್ ಅವರ ಭೇಟಿಯನ್ನು ಯಾವುದೇ ಕಾರಣ ನೀಡದೆ ಏಕಪಕ್ಷೀಯವಾಗಿ ರದ್ದುಗೊಳಿಸಿದೆ ಎಂದು ದಿ ನ್ಯೂಸ್ ವರದಿ ಮಾಡಿದೆ. ವರದಿಯ ಪ್ರಕಾರ, ಎನ್ಎಸ್ಎ ಮುಂದಿನ ವಾರ ಯುಕೆಗೆ ಭೇಟಿ ನೀಡಲಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಬಿಕ್ಕಟ್ಟಿನ ಬಗ್ಗೆ ಪಾಕಿಸ್ತಾನದ ನೀತಿಯಿಂದಾಗಿ ಭೇಟಿಯನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ದಿ ನ್ಯೂಸ್ ಹೇಳಿದೆ. ಇಸ್ಲಾಮಾಬಾದ್‌ನಲ್ಲಿರುವ ಯುರೋಪಿಯನ್ ಯೂನಿಯನ್ (ಇಯು) […]

Advertisement

Wordpress Social Share Plugin powered by Ultimatelysocial