ಬಾಂಗ್ಲಾದೇಶ ಪಂದ್ಯದ ​ ಸ್ಕೋರ್ ಬೋರ್ಡ್​​ನಲ್ಲಿ ವಿಕ್ಕಿ ಕೌಶಲ್ ಹೆಸರು!; ಏನಿದು ಸಮಾಚಾರ?

ಬಾಲಿವುಡ್ ನಟ ವಿಕ್ಕಿ ಕೌಶಲ್ ಹೆಸರು ಅಂಡರ್ 19 ವಿಶ್ವಕಪ್​​ನಲ್ಲಿ ಸ್ಪರ್ಧಿಸುತ್ತಿರುವ ಭಾರತ ತಂಡದ ಸ್ಕೋರ್​​ ಕಾರ್ಡ್​ನಲ್ಲಿ ಕಾಣಿಸಿಕೊಂಡಿದೆ. ಸದ್ಯ ಅಂತರ್ಜಾಲದಲ್ಲಿ ಈ ಚಿತ್ರ ವೈರಲ್ ಆಗಿದೆ.ಬಾಲಿವುಡ್​ನಲ್ಲಿ ನಟ ವಿಕ್ಕಿ ಕೌಶಲ್  ಜನಪ್ರಿಯತೆ ಏರುತ್ತಿದೆ.

ಮಾಸ್ ಹೀರೋ ಎನ್ನುವುದಕ್ಕಿಂತ ಪಾತ್ರ ಪ್ರಧಾನ ಚಿತ್ರಗಳ ಆಯ್ಕೆಯಿಂದ ಅವರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ನಟಿ ಕತ್ರಿನಾ ಕೈಫ್  ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ವಿಕ್ಕಿ ಕೌಶಲ್​ಗೆ ಸೋಷಿಯಲ್ ಮೀಡಿಯಾದಲ್ಲೂ ಫ್ಯಾನ್ಸ್ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದೀಗ ಅಭಿಮಾನಿಗಳು ವಿಕ್ಕಿ- ಕೌಶಲ್ ಬಗ್ಗೆ ಅಚ್ಚರಿಯ ವಿಚಾರವೊಂದನ್ನು ಗಮನಿಸಿದ್ದು, ಸಖತ್ ಸುದ್ದಿಯಾಗುತ್ತಿದೆ. ಅದೇನು ಅಂತೀರಾ? ವಿಕ್ಕಿ ಕೌಶಲ್ ಹೆಸರು ನಿನ್ನೆ (ಶನಿವಾರ) ನಡೆದ ಅಂಡರ್-19 ವಿಶ್ವಕಪ್​ನ ಪಂದ್ಯದಲ್ಲಿ  ಕಾಣಿಸಿಕೊಂಡಿದೆ! ಭಾರತ ಹಾಗೂ ಬಾಂಗ್ಲಾದೇಶದ ನಡುವೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹೆಸರು ಕಾಣಿಸಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನಟ ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಕ್ಕಿ ಕೌಶಲ್ ಹೆಸರು ಸ್ಕೋರ್ ಕಾರ್ಡ್​​ನಲ್ಲಿ ಬರುವುದು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಉತ್ತರ.

ವಿಕ್ಕಿ ಕೌಶಲ್ ಹೆಸರು ಭಾರತ ತಂಡದ ಸ್ಕೋರ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು ಕಾಕತಾಳೀಯವಾಗಿ! ಹೌದು. ಭಾರತ ಅಂಡರ್ 19 ತಂಡದಲ್ಲಿ ವಿಕ್ಕಿ ಒಸ್ಟ್ವಾಲ್ ಹಾಗೂ ಕೌಶಲ್ ತಾಂಬೆ ಎಂಬ ಇಬ್ಬರು ಆಟಗಾರರಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಒಬ್ಬರ ಹಿಂದೆ ಮತ್ತೊಬ್ಬರು ವಿಕೆಟ್ ಪಡೆದಿದ್ದಾರೆ. ಸ್ಕೋರ್​​ ಕಾರ್ಡ್​ನಲ್ಲಿ ಈ ಆಟಗಾರರ ಮೊದಲ ಹೆಸರನ್ನು ಹಾಕಲಾಗಿತ್ತು. ಇದರಂತೆ ವಿಕ್ಕಿ ಹಾಗೂ ಕೌಶಲ್ ಎಂದು ಹೆಸರು ಕಾಣಿಸಿಕೊಂಡಿತ್ತು.ಈ ಕಾಕತಾಳೀಯ ಗಮನಿಸಿದ ಅಭಿಮಾನಿಗಳು ಸ್ಕ್ರೀನ್​ಶಾಟ್ ತೆಗೆದು ಹಂಚಿಕೊಂಡಿದ್ದಾರೆ. ಇದನ್ನು ವಿಕ್ಕಿ ಕೌಶಲ್ ಕೂಡ ಗಮನಿಸಿದ್ದಾರೆ. ಇಂದು (ಭಾನುವಾರ) ಬೆಳಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಚಿತ್ರ ಹಂಚಿಕೊಂಡಿರುವ ಅವರು, ‘ಎಲ್ಲರ ಮೆಸೇಜ್​ಗಳಿಗೆ ಧನ್ಯವಾದಗಳು. ಭಾರತ ಅಂಡರ್ 19 ತಂಡಕ್ಕೆ ಶುಭವಾಗಲಿ’ ಎಂದು​ ಬರೆದುಕೊಂಡಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಇಂದು 85ನೇ ಆವೃತ್ತಿಯ ಮನ್ ಕಿ ಬಾತ್ ಅನ್ನು ಉದ್ದೇಶಿಸಿ ಮಾತನಾಡಿದ: ಪ್ರಧಾನಿ ಮೋದಿ

Sun Jan 30 , 2022
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 11:30ಕ್ಕೆ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನ 85ನೇ ಸಂಚಿಕೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದು ವರ್ಷದ ಮೊದಲ ಆವೃತ್ತಿಯಾಗಿದೆ ಮತ್ತು ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ಪ್ರಧಾನಮಂತ್ರಿಯವರು ಅವರಿಗೆ ನಮನ ಸಲ್ಲಿಸಿದ ನಂತರ ಬೆಳಿಗ್ಗೆ 11:30 ಕ್ಕೆ ಪ್ರಾರಂಭವಾಗುತ್ತದೆ. ಈ ಹಿಂದೆ ‘ಮನ್ ಕಿ ಬಾತ್’ ಆವೃತ್ತಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಪ್ರಧಾನಿ ನಾಗರಿಕರಿಗೆ ಕರೆ ನೀಡಿದ್ದರು. “ಈ […]

Advertisement

Wordpress Social Share Plugin powered by Ultimatelysocial