ಹಿಂದಿ ಬೆಲ್ಟ್ ನಲ್ಲಿ ಮೊದಲ ದಿನ ಸುಮಾರು 1 ಕೋಟಿ ರೂ. ಬಾಚಿದೆ

 

ಕಿಚ್ಚ ಸುದೀಪ್ ಅಭಿನಯದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ‘ವಿಕ್ರಾಂತ್ ರೋಣ’ ಸಿನಿಮಾಕ್ಕೆ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಓಪನಿಂಗ್ ಕಂಡುಬಂದಿದೆ. ಹಿಂದಿ ಬೆಲ್ಟ್ ನಲ್ಲಿ ಮೊದಲ ದಿನ ಸುಮಾರು 1 ಕೋಟಿ ರೂ. ಬಾಚಿದೆ ಎನ್ನಲಾಗುತ್ತಿದೆ.

ಈ ಮೂಲಕ ಈ ಹಿಂದೆ ತೆರೆಕಂಡಿದ್ದ ವಿಕ್ರಮ್, ವಾಲಿಮೈ, ಬೀಸ್ಟ್ ಮತ್ತು 777 ಚಾರ್ಲಿ ಸಿನಿಮಾವನ್ನು ವಿಕ್ರಾಂತ್ ರೋಣ ಹಿಂದಿಕ್ಕಿದೆ.

ಈ ಯಾವ ಚಿತ್ರಗಳು ಕೂಡಾ ಮೊದಲ ದಿನ ರೂ. 50 ಲಕ್ಷಕ್ಕಿಂತ ಹೆಚ್ಚಿನ ಕಲೆಕ್ಷನ್ ಮಾಡಿರಲಿಲ್ಲ.ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್, ವಿಕ್ರಾಂತ್ ರೋಣ ಚಿತ್ರದ ಹಿಂದಿ ಆವೃತ್ತಿಯನ್ನು ಬಿಡುಗಡೆ ಮಾಡಿದ್ದಾರೆ.

ಆದರೆ, ರಾಜ್ಯದಲ್ಲಿ ಈ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ . ಓರ್ ಮ್ಯಾಕ್ಸ್ ವರದಿ ಪ್ರಕಾರ ಮೊದಲ ಸುಮಾರು 16 ರಿಂದ 17 ಕೋಟಿ ರೂ. ಕಲೆಕ್ಷನ್ ಮಾಡಿದೆ. ದೇಶಾದ್ಯಂತ ಸುಮಾರು 40 ರಿಂದ 45 ಕೋಟಿ ಬಾಚಿದೆ ಎನ್ನಲಾಗುತ್ತಿದೆ. ಆದರೆ, ನಿರ್ದಿಷ್ಟವಾಗಿ ಎಷ್ಟು ಕೋಟಿ ಕಲೆಕ್ಷನ್ ಮಾಡಿದೆ ಎಂಬುದರ ಮಾಹಿತಿ ದೊರೆತಿಲ್ಲ.

ಪುಷ್ಪ, ಆರ್ ಆರ್ ಆರ್ , ಕೆಜಿಎಫ್ ಚಾಪ್ಟರ್ 2 ಹಾಗೂ ಕಮಲ್ ಹಾಸನ್ ಅವರ ವಿಕ್ರಮ್ ನಂತರ ‘ವಿಕ್ರಾಂತ್ ರೋಣ’ ಅಪಾರ ನಿರೀಕ್ಷೆ ಹುಟ್ಟಿಸಿದ್ದ ಮತ್ತೊಂದು ದಕ್ಷಿಣ ಭಾರತದ ಸಿನಿಮಾವಾಗಿದೆ. ಆದರೆ, ಉತ್ತರ ಭಾರತ ಮಾರುಕಟ್ಟೆಯಲ್ಲಿ ಅಂತಹ ಓಪನಿಂಗ್ ಕಂಡಿಲ್ಲ.

ಭಾರತೀಯ ಚಿತ್ರೋದ್ಯಮದ ವಿಶ್ಲೇಷಕ ಮನೋಬಾಲ ವಿಜಯ್ ಬಾಲನ್ ಪ್ರಕಾರ, ಕರ್ನಾಟಕದಲ್ಲಿ 18.30 ಕೋಟಿ, ಆಂಧ್ರ ಪ್ರದೇಶದಲ್ಲಿ 2.10 ಕೋಟಿ ಸೇರಿದಂತೆ ದೇಶಾದ್ಯಂತ 26. 49 ಕೋಟಿ ರೂ. ಕಲೆಕ್ಷನ್ ಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಟಗಲ್ ಬಿರಲಿಂಗೇಶ್ವರ ಗುಡಿಗೆ ಧರ್ಮ ಸ್ಥಳ ಯೋಜನೆ ನೆರವಿನ ಹಸ್ತ

Fri Jul 29 , 2022
ಸಿರವಾರ:ಶ್ರೀಕ್ಷೇತ್ರ ಧರ್ಮ ಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯೂ ಜನರಿಗೆ ತುಂಬಾ ಚಿರಪರಿಚಿತ ಮಹಿಳೆಯರ ಧರ್ಮಸ್ಥಳ ಸಂಘ ಮಾಡುವುದರ ಜೊತೆಗೆ ಇದರಲ್ಲಿ ಸದಸ್ಯರಿಗೆ ಹಾಗೂ ನಿರ್ಗತಿಕರಿಗೆ ರೈತರಿಗೆ ಕೃಷಿ, ಆರೋಗ್ಯ, ಶಿಕ್ಷಣ, ಮಾಶಾಸನ, ಹಾಗೂ ವಿಮೆ ಸೇರಿದಂತೆ ಹತ್ತು ಹಲವಾರು ಜನಪರ ಕಾರ್ಯಗಳನ್ನ ಮಾಡುತ್ತಾ,ಜನರಿಗೋಸ್ಕರ ದುಡಿಯುವ ಯೋಜನೆಯಾಗಿದೆ.ಇನ್ನು ಕವಿತಾಳ ಪಟ್ಟಣಕ್ಕೆ ಸಮೀಪದ ವಟಗಲ್ ಗ್ರಾಮದಲ್ಲಿರುವ ಬಿರಲಿಂಗೇಶ್ವರ ಗುಡಿಗೆ ಒಂದು ಲಕ್ಷದ ಐವತ್ತು ಸಾವಿರ ಮೊತ್ತದ ಡಿ.ಡಿ ಯನ್ನ ಗುಡಿ ಜೀರ್ಣೋದ್ಧಾರಕ್ಕಾಗಿ ಸಮಿತಿಯವರ ಕೈಯಲ್ಲಿ […]

Advertisement

Wordpress Social Share Plugin powered by Ultimatelysocial