ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’

ಪ್ರತಿಷ್ಠಿತ 95ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಯ ಅರ್ಹತೆ ವಿಭಾಗದಲ್ಲಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ ಸಿನೆಮಾ ನಾಮನಿರ್ದೇಶನಗೊಂಡಿದೆ. ಪ್ರತಿಷ್ಠಿತ 95ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಯ ಅರ್ಹತೆ ವಿಭಾಗದಲ್ಲಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ ಸಿನೆಮಾ ನಾಮನಿರ್ದೇಶನಗೊಂಡಿದೆ.

ದಕ್ಷಿಣ ಭಾರತೀಯ ಚಿತ್ರಗಳಲ್ಲಿ ನಟನಾ ವಿಭಾಗದಲ್ಲಿ ಈ ಸಿನಿಮಾ ಆಯ್ಕೆಯಾಗಿದ್ದು, ಕನ್ನಡದ ಎರಡು ಚಿತ್ರಗಳು ಈ ಬಾರಿ ಆಸ್ಕರ್ ಅಂಗಳದಲ್ಲಿವೆ. ಕಾಂತಾರ ಮತ್ತು ವಿಕ್ರಾಂತ್ ರೋಣ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ನಿರೂಪ್ ಭಂಡಾರಿ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ. ಜಾಕ್ ಮಂಜು ಇದಕ್ಕೆ ಬಂಡವಾಳ ಹಾಕಿದ್ದರು.
2016ರಲ್ಲಿ ಅನೂಪ್ ಭಂಡಾರಿ ನಿರ್ದೇಶನದ ನಿರೂಪ್ ಭಂಡಾರಿ ನಾಯಕ ನಟನಾಗಿ ನಟಿಸಿ ಯಶಸ್ಸು ಗಳಿಸಿದ್ದ ರಂಗಿತರಂಗ ಚಿತ್ರ ಕೂಡ ಆಸ್ಕರ್ ಕದ ತಟ್ಟಿ ಬಂದಿತ್ತು. ವಿಕ್ರಾಂತ್ ರೋಣ ಜೊತೆ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾ ಆಸ್ಕರ್ ಪ್ರಶಸ್ತಿಗಾಗಿ ಅರ್ಹತೆ ಸುತ್ತಿನಲ್ಲಿ ಸ್ಥಾನ ಪಡೆದಿದೆ. ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟ ಎರಡು ವಿಭಾಗದಲ್ಲಿ ಅದು ಅರ್ಹತೆ ಸುತ್ತನ್ನು ಪಾಸು ಮಾಡಿದ್ದು, ಮುಂದಿನ ಹಂತಕ್ಕೆ ಸಿನಿಮಾ ಹೋಗಬೇಕಾದರೆ, ಆಸ್ಕರ್ ಸದಸ್ಯರು ಮತ ಚಲಾಯಿಸುವುದು ಕಡ್ಡಾಯವಾಗಿದೆ. ವಿಶ್ವದಾದ್ಯಂತ ಒಟ್ಟು 301 ಸಿನಿಮಾಗಳು ಅರ್ಹತೆ ಸುತ್ತಿನಲ್ಲಿ ಪಾಸಾಗಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಂದ್ರಶೇಖರ ಪಾಟೀಲರು ಕವಿ

Tue Jan 10 , 2023
ಚಂದ್ರಶೇಖರ ಪಾಟೀಲರು ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹೀಗೆ ವಿಭಿನ್ನ ನೆಲೆಗಳಲ್ಲಿ ವ್ಯಾಪಿಸಿದ್ದವರು. ಇಂದು ಈ ಮಹನೀಯರ ಸಂಸ್ಮರಣೆ ದಿನ. ಚಂದ್ರಶೇಖರ ಪಾಟೀಲರು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತೀಮತ್ತೂರಿನಲ್ಲಿ 1939ರ ಜೂನ್‌ 18ರಂದು ಜನಿಸಿದರು. ತಂದೆ ಬಸವರಾಜ ಹಿರೇಗೌಡ‍. ತಾಯಿ ಮುರಿಗೆವ್ವ. ಪಾಟೀಲರ ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ ಮತ್ತು ಪ್ರೌಢಶಿಕ್ಷಣ ಧಾರವಾಡದಲ್ಲಿ ನೆರವೇರಿತು. ಅವರ ತಂದೆಯವರಿಗೆ ಇಂಗ್ಲಿಷ್‌ ಬಗ್ಗೆ ಅಭಿಮಾನವಿತ್ತು. ಅದರಿಂದ ಪ್ರೇರಿತರಾಗಿ […]

Advertisement

Wordpress Social Share Plugin powered by Ultimatelysocial