ಕಾಲಿವುಡ್ ಖ್ಯಾತ ನಟ ವಿನಯ್ ತಮ್ಮ ಬಹುಕಾಲದ ಗೆಳತಿ ವಿಮಲಾ ರಾಮನ್ ಜೊತೆಗೆ ಸದ್ಯದಲ್ಲೇ ಸಪ್ತಪದಿ ತುಳಿಯಲಿದ್ದಾರೆ.

 

ಕಾಲಿವುಡ್ ಖ್ಯಾತ ನಟ ವಿನಯ್ ತಮ್ಮ ಬಹುಕಾಲದ ಗೆಳತಿ ವಿಮಲಾ ರಾಮನ್ ಜೊತೆಗೆ ಸದ್ಯದಲ್ಲೇ ಸಪ್ತಪದಿ ತುಳಿಯಲಿದ್ದಾರೆ. ‘ಉನ್ನಲೆ ಉನ್ನಲೆ’ ಸಿನಿಮಾದ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ವಿನಯ್, ಈಗ ಖಳನಟನಾಗಿ ಬಿಗ್ ಸ್ಟಾರ್‌ಗಳ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಯಾದ ‘ಡಾಕ್ಟರ್’ ಸಿನಿಮಾದಲ್ಲಿ ವಿಲನ್ ಆಗಿ ವಿನಯ್ ಅಭಿನಯಿಸಿದ್ದು, ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

42 ವರ್ಷದ ವಿನಯ್ ಕೆಲವು ವರ್ಷಗಳಿಂದ ನಟಿ ವಿಮಲಾ ರಾಮನ್ ಜೊತೆಗೆ ಡೇಟಿಂಗ್ ನಡೆಸುತ್ತಿದ್ದರು. ಇದೀಗ ಈ ಜೋಡಿ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ವಿನ್, ವಿಮಲಾ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿದ್ದ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಪ್ರೀತಿ ವಿಚಾರ ರಿವೀಲ್ ಮಾಡಿದ್ದರು. ಅಲ್ಲದೇ ಈ ಫೋಟೋಗಳು ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇದೀಗ ಈ ಜೋಡಿ ಮದುವೆಯಾಗಲು ನಿರ್ಧರಿಸಿದ್ದು, ಸದ್ಯದಲ್ಲಿಯೇ ವಿವಾಹದ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ. ಅಲ್ಲದೇ ಇವರಿಬ್ಬರ ಮದುವೆಗೆ ಎರಡು ಕುಟುಂಬಸ್ಥರು ಗ್ರೀನ್ ಸಿಗ್ನಲ್ ನೀಡಿದ್ದಾರೆಂದು ಹೇಳಲಾಗುತ್ತಿದೆ.

40 ವರ್ಷದ ವಿಮಲಾ ರಾಮನ್ ಅವರು ಆಸ್ಟ್ರೀಯಾದಲ್ಲಿ ಜನಿಸಿದ್ದು, ತಮಿಳಿನ ಪೊಯ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನಿಮಾಕ್ಕೆ ಲೆಜೆಂಡರಿ ನಿರ್ದೇಶಕ ಕೆ.ಬಾಲಚಂದಿರನ್ ಆಕ್ಷನ್ ಕಟ್ ಹೇಳಿದ್ದರು. ಅಲ್ಲದೇ ಇದು ಬಾಲಚಂದಿರನ್ ಅವರ 100ನೇ ಸಿನಿಮಾವಾಗಿತ್ತು. ನಂತರ ತಮಿಳಿನ ತೇಡಿಯ ಸೀತೈ ಸೇರಿದಂತೆ ಅನೇಕ ಸಿನಿಮಾದಲ್ಲಿ ಅಭಿನಯಿಸಿದ್ದರು. ಕೊನೆಯದಾಗಿ ತಮಿಳಿನ ಇರುಟ್ಟು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅವರು ಪ್ರಸ್ತುತ ಮಲಯಾಳಂನ ಗ್ರಾಂಡ್ ಮಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಉನ್ನಲೆ ಉನ್ನಲೆ ಸಿನಿಮಾದಲ್ಲಿ ಚಾಕೊಲೇಟ್ ಬಾಯ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದ ವಿನಯ್‍ಗೆ ಆಗಲೇ ಅನೇಕ ಹುಡುಗಿಯರು ಕ್ಲೀನ್ ಬೋಲ್ಡ್ ಆಗಿದ್ದರು. ನಂತರ ಜಯಂ ಕೊಂಡನ್, ಎಂದ್ರೆಂಡ್ರುಮ್ ಪುನ್ನಗೈ ಹೀಗೆ ಕೆಲವು ಹಿಟ್ ಸಿನಿಮಾಗಳಲ್ಲಿ ನಟಿಸಿ ಕೊಂಚ ಬ್ರೇಕ್ ಪಡೆದುಕೊಂಡಿದ್ದ ವಿನಯ್, 2017ರಲ್ಲಿ ವಿಶಾಲ್ ನಟನೆಯ ತುಪ್ಪರಿವಾಲನ್ ಸಿನಿಮಾದಲ್ಲಿ ವಿಲನ್ ಆಗಿ ಪ್ರೇಕ್ಷಕರ ಮನಗೆದ್ದಿದ್ದರು. ನಂತರ ಶಿವಕಾರ್ತಿಕೇಯನ್ ನಟನೆಯ ಡಾಕ್ಟರ್ ಸಿನಿಮಾದಲ್ಲಿ ಅಭಿನಯಿಸಿದ್ದರು. ಇದೀಗ ಸೂರ್ಯ ನಿರ್ಮಾಣದ ಓ ಮೈ ಡಾಗ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಟಿ ಸಂಜನಾ ಗಲ್ರಾನಿ ಇತ್ತೀಚೆಗೆ ಹೆಚ್ಚು ಸುದ್ದಿ ಆಗೋದು, ಸದ್ದು!

Wed Apr 6 , 2022
  ನಟಿ ಸಂಜನಾ ಗಲ್ರಾನಿ ಇತ್ತೀಚೆಗೆ ಹೆಚ್ಚು ಸುದ್ದಿ ಆಗೋದು, ಸದ್ದು ಮಾಡೋದು ಎಲ್ಲವೂ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ. ಇನ್ನು ಸದ್ಯಕ್ಕೆ ಸಿನಿಮಾ ಅಭಿನಯ ಬಿಟ್ಟು ಸಂಜನಾ ತಮ್ಮ ಕೌಟುಂಬಿಕ ಜೀವನದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ತಮ್ಮ ಮನೆಯವರ ಜೊತೆಗೂ ಸಂಜನಾ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸಂಜನಾ ಸಿನಿಮಾ ಮಾಡದೇ ಇದ್ದರು ಸೋಶಿಯಲ್ ಮೀಡಿಯಾದ ಮೂಲಕ ತಮ್ಮ ಅಭಿಮಾನಿಗಳಿಗೆ ಕನೆಕ್ಟ್ ಆಗಿ ಇರುತ್ತಾರೆ. ಸಂಜನಾ ವಿಡಿಯೋಗಳಿಗೆ ಸಾಕಷ್ಟು ಅಭಿಮಾನಿಗಳು ಇದ್ದರೆ. […]

Advertisement

Wordpress Social Share Plugin powered by Ultimatelysocial