CRICKET:ವಿರಾಟ್ ಕೊಹ್ಲಿ 6 ರನ್ ಗಳಿಸಿದರೆ ತವರಿನಲ್ಲಿ 5000 ರನ್ ಪುರೈಸಿದ ದಾಖಲೆ;

ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (virat kohli) 6 ರನ್ ಹೊಡೆದರೂ ಸಾಕು ಏಕದಿನ ಕ್ರಿಕೆಟ್ ನಲ್ಲಿ ಮತ್ತೊಂದು ಮಹತ್ವದ ದಾಖಲೆಯನ್ನು ತನ್ನದಾಗಿಸಿಕೊಳ್ಳಲಿದ್ದಾರೆ.

ಭಾರತ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿದ ನಂತರ ಎಲ್ಲರ ಕಣ್ಣು ಅವರ ಬ್ಯಾಟಿಂಗ್ ಪ್ರದರ್ಶನದ ಮೇಲಿದೆ.

ಕಳೆದ 2 ವರ್ಷಗಳಿಂದ ಸಾಧಾರಣ ಪ್ರದರ್ಶನ ನೀಡುತ್ತಿರುವ ಕೊಹ್ಲಿ ಮತ್ತೊಮ್ಮೆ ಬ್ಯಾಟಿಂಗ್ ನಲ್ಲಿ ಅಬ್ಬರಿಸುತ್ತಾರೆಯೇ ಎಂದು ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.

ತವರಿನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್ ಗೆ ಮರಳಲು ಉತ್ತಮ ಅವಕಾಶ ದೊರೆತಿದೆ. ತವರಿನಲ್ಲಿ ಈ ಸರಣಿ ನಡೆಯುತ್ತಿರುವುದರಿಂದ ಶತಕದ ಬರ ನೀಗಿಸಿಕೊಳ್ಳುವ ಅವಕಾಶ ಪಡೆದಿದ್ದಾರೆ.

ಒಂದು ವೇಳೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ 33 ವರ್ಷದ ವಿರಾಟ್ ಕೊಹ್ಲಿ 6 ರನ್ ಗಳಿಸಿದರೆ ತವರಿನಲ್ಲಿ 5000 ರನ್ ಪುರೈಸಿದ ದಾಖಲೆ ಬರೆಯಲಿದ್ದಾರೆ. ಭಾರತದ ನೆಲದಲ್ಲಿ 5000ಕ್ಕಿಂತ ಹೆಚ್ಚು ರನ್ ಗಳಿಸಿರುವ ಏಕೈಕ ಬ್ಯಾಟ್ ಮನ್ ಆಗಿ ಸಚಿನ್ ತೆಂಡೂಲ್ಕರ್ (sachin tendulkar) ಉಳಿದುಕೊಂಡಿದ್ದಾರೆ.

ವಿಶೇಷ ಅಂದರೆ ಸಚಿನ್ ತೆಂಡೂಲ್ಕರ್ ಕೂಡ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲೇ 5000 ರನ್ ಪೂರೈಸಿದ ದಾಖಲೆ ಬರೆದಿದ್ದಾರೆ. ಸಚಿನ್ 121 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರೆ, ಕೊಹ್ಲಿ 96 ಪಂದ್ಯಗಳಲ್ಲಿ 4994 ರನ್ ಬಾರಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟೀಂ ಇಂಡಿಯಾದಿಂದ ಇದ್ದಕ್ಕಿದ್ದಂತೆ ಕಣ್ಮರೆಯಾದ ಖಲೀಲ್ ಅಹ್ಮದ್,ಈ ಆಟಗಾರ ಯಾರು?

Fri Feb 4 , 2022
ನವದೆಹಲಿ : ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ನೀಡಿದ ಮೇಲೆ ಟೀಂ ಇಂಡಿಯಾದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಈ ಬೌಲರ್, ಈ ಬೌಲರ್‌ ಪಾಕ್ ಬೌಲರ್ ವಾಸಿಂ ಅಕ್ರಮ್‌ನಷ್ಟೇ ಅಪಾಯಕಾರಿಯಾಗಿದ್ದಾನೆ. ಆದರೆ ಟೀಂ ಇಂಡಿಯಾದ ಆಯ್ಕೆಗಾರರು ಈ ಆಟಗಾರನನ್ನು ಮರೆತು 2 ವರ್ಷಗಳು ಕಳೆದಿವೆ. ಈ ಸ್ಪೋಟಕ್ ಬೌಲರ್ 2 ವರ್ಷಗಳ ಹಿಂದೆ ಭಾರತದ ODI ಮತ್ತು T20 ತಂಡದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ, ಆದರೆ ಈ ಆಟಗಾರ ಈಗ ಟೀಂ ಇಂಡಿಯಾದಲ್ಲಿ […]

Advertisement

Wordpress Social Share Plugin powered by Ultimatelysocial